ಗಂಗಾವತಿ 20 : ನಗರದ 6 ನೇ ವಾರ್ಡ್ ನ ರೈತ ಆಲಯ್ಯಸ್ವಾಮಿ ಶಾಸ್ತ್ರಿಮಠ ಇವರು ಸುಪುತ್ರ ವಿನಯ ಶಾಸ್ತ್ರಿಮಠ ಪಿಯುಸಿ ವಿಜ್ಞಾನ ವಿಭಾದಲ್ಲಿ ಶೇ.94 ರಷ್ಟು ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.ಇತ್ತೀಚಿನ ವರದಿ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ವಿಷೇಶವಾಗಿರೈತರ ಮಕ್ಕಳು ಸಾಧನೆ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢ, ಹಾಗೂ ಪಿಯುಸಿ ವಿಭಾಗಗಳಲ್ಲಿ ಸುಮಾರು ರೈತರ ಮಕ್ಕಳೇ ಮೆಲುಗೈ ಸಾಧಿಸಿರುವುದು ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ.ನಗರದ ಕೊಟ್ಟೂರುಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದು, ಎಸ್‌ಎಸ್‌ಎಲ್ ಸಿಯಲ್ಲಿ ಪರೀಕ್ಷೆಯಲ್ಲಿಯು ವಿನಯ್ ಶೇ.94.56 ಪಡೆದು ಶಾಲೆಗೆ ಕೀರ್ತಿ ತಂದಿರುವುದು ಸ್ಮರಿಸಲೇಬೇಕು.
ಈ ವಿದ್ಯಾರ್ಥಿಯು ಜುಲೈ ನಗರದ ಶ್ರೀ ವಿದ್ಯಾನಿಕೇತನ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತಿದ್ದು, ಕಾಲೇಜು ಉಪನ್ಯಾಸಕರ ಉತ್ತಮ ಬೋಧನೆ ಹಾಗೂ ಪ್ರಾಚಾರ್ಯರ ಸಹಕಾರದಿಂದ ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ ಎಂದು ವಿನಯ್ ಪತ್ರಿಕೆಗೆ ತಿಳಿಸಿದನು.ಈ ವಿದ್ಯಾರ್ಥಿಯ ಸಾಧನೆಗೆ ಪಾಲಕರು, ಸ್ನೇಹಿತರು ಹಾಗೂ ಕಾಲೇಜು ಆಡಳಿತ ಮಂಡಳಿಯವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.