ಗೋಕಾಕ 24: ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಮಣೆ ಹಾಕದೆ ನೀತಿ, ಸಿದ್ದಾಂತ ಮತ್ತು ನೈತಿಕ ಮೌಲ್ಯಗಳಿಗೆ ಪೂರಕವಾದ ರಾಜಕಾರಣ ಮಾಡಿದ್ದು, ಇಂದಿಗೂ ಸಹ ಗೋಕಾಕದಲ್ಲಿ ಪ್ರತಿಷ್ಠಾಪನೆಗೊಂಡಿರುವ ಸವರ್ಾಧಿಕಾರಿ ಮನೋಭಾವನೆಯ ಆಡಳಿತ ವ್ಯವಸ್ಥೆಯ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮುಂದುವರೆಸುವ ಸಂಕಲ್ಪ ನನ್ನದಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಇಂದು 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ನಡೆದ ಗೋಕಾಕ ವಿಧಾನಸಭಾ ಕ್ಷೇತ್ರ ಜೆ.ಡಿ.ಎಸ್. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಚುನಾವಣಾ ಫಲಿತಾಂಶದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು ತಮನ್ನು 2018ರ ವಿಧಾನಸಭೆ ಚುನಾವಣೆಗಿಂತಲೂ ಮೊದಲು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತಮಗೆ ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯಥರ್ಿಯಾಗಿ ಸ್ಪಧರ್ಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಮತ್ತು ಆ ಸಂದರ್ಭದಲ್ಲಿ ತಮ್ಮ ಗೆಲುವಿದಾಗಿ ಸಕ್ರಿಯವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಆ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಉಪಚುನಾವಣೆಯಲ್ಲಿ ಅವರೆಲ್ಲರ ಮನವಿ ಮೀರಿ ಜನರ ಭಾವನೆಗಳಿಗೆ ಪೂರಕವಾಗಿ ಹಾಗೂ ಮನಸಾಕ್ಷಿಗೆ ಅನುಗುಣವಾಗಿ ಸವರ್ಾಧಿಕಾರಿ ವ್ಯವಸ್ಥೆಯ ವಿರುದ್ಧ ರಾಜಕೀಯ ಹೋರಾಟ ಮುಂದುವರೆಸುವ ಅನಿವಾರ್ಯತೆಯಿಂದಾಗಿ ಸ್ಪಧರ್ಿಸುವ ನಿರ್ಣಯ ಕೈಗೊಂಡಿರುವುದಕ್ಕೆ ಕ್ಷಮೆ ಕೋರಿದರು.
ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ಹಣ ಎಂದಿಗೂ ಶಾಶ್ವತವಲ್ಲ ಎಂದು ಬಲವಾಗಿ ನಂಬಿರುವ ತಾವು ಈ ಉಪಚುನಾವಣೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಹಾಕಿರಲಿಲ್ಲ. ತಾಲೂಕಿನ ಜನರ ಬದಲಾವಣೆಯ ಬೇಡಿಕೆಗೆ ಪೂರಕವಾದ ನಿರ್ಣಯ ತಮ್ಮದಾಗಿತ್ತು. ಆದರೆ ತಮ್ಮ ಸೋಲಿಗೆ ಇಡೀ ವ್ಯವಸ್ಥೆಯೇ ಕಾರ್ಯಮಾಡಿತು ಎಂದು ಹೇಳಿದರು.
ಇಂದಿನ ಚುನಾವಣೆ ಪ್ರಕ್ರೀಯೆಯಲ್ಲಿ ತಮಗೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವ ಅನೇಕ ಮತಗಟ್ಟೆಗಳಲ್ಲಿ ತಮಗೆ ನಿರೀಕ್ಷಿತ ಮತಗಳೇ ಇಲ್ಲದಾಗಿರುವದು ಚುನಾವಣೆಯ ಸೋಜಿಗಗಳಲ್ಲಿ ಒಂದಾಗಿದ್ದು, ಇತ್ತಿಚೆಗೆ ಅನೇಕ ಮುಖಂಡರು ಆಪಾಧಿಸಿರವಂತೆ ಇವ್ಹಿಎಮ್ ಮಷೀನ್ಗಳನ್ನು ಕಾಣದ ಕೈಗಳು ನಿಯಂತ್ರಿಸಿರುವದು ತಮ್ಮ ಸೋಲಿಗೆ ಪ್ರಮುಖ ಕಾರಣವಾಗಿರಬಹುದೆಂದು ಇಡೀ ಚುನಾವ
ಮಕರ ಸಂಕ್ರಮಣದ ಮರುದಿನದಿಂದಲೇ ಗೋಕಾಕ ಮತ್ತು ಅರಭಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಾಭಿಮಾನಿ ಸಂಘಟನೆ ಹುಟ್ಟುಹಾಕಿ ಶಕ್ತಿಯುತವಾಗಿ ಬಲಪಡಿಸಲು ಕಾರ್ಯಪ್ರವರ್ತರಾಗುತ್ತೇನೆ ಹಾಗೂ ಶೀಘ್ರದಲ್ಲಿಯೇ ತಮ್ಮ ರಾಜಕೀಯ ಗಾಢಪಾಧರ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೇಟಿಯಾಗಿ ತಮ್ಮ ಮುಂದಿನ ಸಂಘಟನೆಯ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದರ ಜೊತೆಗೆ ಜಿಲ್ಲೆಯಲ್ಲಿ ಮತ್ತು ಉತ್ತರ ಕನರ್ಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬುವುದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ ಹಿರಿಯ ಮುಖಂಡರಾಗಿರುವ ಅಶೋಕ ಪೂಜಾರಿ ಪಕ್ಷಕ್ಕೆ ಮತ್ತೆ ಬಂದಿರುವುದರಿಂದ ಜಿಲ್ಲೆಯಲ್ಲಿ ಜೆ.ಡಿ.ಎಸ್. ಪಕ್ಷದ ಸಂಘಟನೆಗೆ ಹೊಸ ಶಕ್ತಿ ಬಂದಿದ್ದು, ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಪ್ರಭಲವಾಗಿ ಸಂಘಟಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಮುಖಂಡರುಗಳಾದ ಪ್ರಕಾಶ ಭಾಗೋಜಿ, ಸಿ.ಬಿ. ಗಿಡ್ಡನವರ ವಕೀಲರು, ರಾಜು ಜಾಧವ, ಸುನೀಲ ಮುಕರ್ಿಭಾಂವಿ, ದಸ್ತಗೀರ ಪೈಲವಾನ, ಪ್ರೇಮಾ ಚಿಕ್ಕೋಡಿ, ಸಿದ್ದಪ್ಪ ಶಿರಸಂಗಿ, ಹಳ್ಳೂರ ಘಟಪ್ರಭಾ ಮುಂತಾದವರು ಚುನಾವಣೆ ಸೋಲು-ಗೆಲುವಿನ ಕುರಿತು ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಸಂಘಟನೆಯನ್ನು ಬಲಪಡಿಸುವ ಕುರಿತು ಸಲಹೆ ಸೂಚನೆ ನೀಡಿದರು. ವೇದಿಕೆಯ ಮೇಲೆ ಮುಖಂಡರುಗಳಾದ ಸುಭಾನಿ ಹವಾಲ್ದಾರ, ಶಿವಪ್ಪ ದಳವಾಯಿ, ಅಡಿವೆಪ್ಪಾ ಪಾಟೀಲ, ಯಲ್ಲಪ್ಪ ಹುಕ್ಕೇರಿ, ಪೀರಜಾದೆ ವಕೀಲರು, ಕುಮಾರ ಬೆಳವಿ, ಲಾಲಸಾಬ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.
ಪ್ರಕಾಶ ಕರಿಗಾರ, ಮಲ್ಲಯ್ಯ ಮಠದ, ರಫೀಕ ಮುಲ್ಲಾ, ಲಕ್ಷ್ಮಣ ಕರಮುಶಿ, ಶಿವಾನಂದ ಹಿರೇಮಠ, ಶಿವಯ್ಯ ಪೂಜಾರಿ, ಕಾಡಣ್ಣಾ ಗಣಾಚಾರಿ, ರಮೇಶ ಬೆಳವಿ, ರಮೇಶ ಅಂಕಲಗಿ, ಬಸವರಾಜ ಜಿರಲಿ, ವಿಶು ಸುಣಧೋಳಿ, ಆನಂದ ಸಂಕಾಜಿ, ನಾಗು ದೇಸಾಯಿ, ಮುತ್ತೆಪ್ಪ ಕಾಗಲಿ ಮುಂತಾದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.