ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ
ಗದಗ 14: ರಾಜ್ಯ ಸರಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ನೀಡಿದ್ದರು, ಕೆಲವೊಂದು ಸಂಘ ಸಂಸ್ಥೆಗಳು ಸಾರ್ವಜನಿಕರನ್ನ ಈಗಲೂ ಕಾಡುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಿ, ಬಡ್ಡಿ ದಂಧೆಕೋರರಿಗೆ ಮೂಗುದಾರ ಹಾಕಿದೆ.ಇದೇ ವಿಷಯವಾಗಿ ಗದಗ ನಗರದ ಪತ್ರಿಕಾ ಭವನದಲ್ಲಿಂದು ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗೀರೀಶ ಮಟ್ಟಣ್ಣವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತಾಡಯವ ವೇಳೆ ಜಿಲ್ಲೆಯ ಕೆಲವು ರೈತ ಮುಖಂಡರು ಬೆಂಬಲ ನೀಡಿದರು. ಸರ್ಕಾರದ ಸುಗ್ರೀವಾಜ್ಞೆಯ ಆದೇಶದ ಕುರಿತು ಮಾತನಾಡಿದ, ಗೀರೀಶ ಮಟ್ಟಣ್ಣವರ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳ ಮೂಲಕ ಹಾಗೂ ವಿವಿಧ ಫೈನಾನ್ಸ್ ಗಳ ವಿರುದ್ಧ ಸಾಲ ನೀಡುವ ವಿಷಯವಾಗಿ ಮಾತನಾಡಿ, ಸಾಲದ ಮೂಲಕ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಫೈನಾನ್ಸ್ ಗಳು ಅನ್ಯಾಯವೆಸಗುತ್ತಿವೆ. ಹೀಗಾಗಿ ಸರ್ಕಾರದ ಸುಗ್ರೀವಾಜ್ಞೆ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದಂತೆ, ಲೈಸೆನ್ಸ್ ಪಡೆಯದೇ ಸಾಲ ನೀಡಿರುವ ಅನಧಿಕೃತ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡಿರುವವರು ಇನ್ನು ಮುಂದೆ ಅಸಲು ಸೇರಿದಂತೆ ಬಡ್ಡಿಯನ್ನ ಕಟ್ಟುವದನ್ನ ನಿಲ್ಲಿಸಬೇಕು. ಅಲ್ಲದೇ ಫೈನಾನ್ಸ್ ಗಳು ಸಾಲಗಾರರಿಗೆ ಯಾವುದೇ ರೀತಿ ಕಿರುಕುಳ ಕೊಡುವಂತಿಲ್ಲ, ವಸೂಲಿ ಮಾಡುವಂತಿಲ್ಲ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಅಧಿಕಾರಿಗಳು ಸೆಟಲ್ಮೆಂಟ್ ಗೆ ಅವಕಾಶ ನೀಡದೆ ತಪ್ಪತಸ್ಥ ಫೈನಾನ್ಸರ್ ಗಳ ವಿರುದ್ಧ ಕ್ರಮ ಜರುಗಿಸಬೇಕಿದೆ,ಜನರಿಗೆ ದೈರ್ಯವನ್ನ ಪೊಲೀಸರು ಹೇಳಬೇಕೆಂದರು. ಪತ್ರಿಕಾ ಗೋಷ್ಠಿ ಮುಕ್ತಾಯವಾಗುವಷ್ಟರಲ್ಲಿ ಧರ್ಮಸ್ಥಳ ಸಂಘದ ಗ್ರಾಮೀಣ ಕೂಟದ ಮಹಿಳೆಯರು ಪತ್ರಿಕಾ ಭವನದ ಮುಂದೆ ಗೀರೀಶ ಮಟ್ಟಣ್ಣವರ ವಿರುದ್ಧ ಸುಮಾರು ಗಂಟೆಗಳ ಕಾಲ ಆಕ್ರೋಶ ವ್ಯಕ್ತಪಡಿಸಿದ ಅವರು ನಂತರ ಪೊಲೀಸರು ಬಂದು ಸಮಾದಾನ ಪಡಿಸಿದರು. ಪತ್ರಿಕಾ ಗೋಷ್ಠಿ ವೇಳೆ ಜಯಂತ ಟಿ, ರಾಮಕೃಷ್ಣ ಎಂ, ವಿಜಯಕುಮಾರ ಸುಂಕದ, ರಾಜು ಬಾಳಿಕಾಯಿ, ಪಾಂಡು ಸೋಮರಡ್ಡಿ, ಸೈಯದ್ ಮುಲ್ಲಾ, ಬಿ ಆರ್ ರಾಥೋಡ, ವಿ ಎಂ ಕೆಂಚನಗೌಡ್ರ, ಎಂ ಮಜ್ಜಿಗುಡ್ಡ, ನಿಂಗಪ್ಪ ಮಡಿವಾಳರ,ಮುತ್ತು ಉಪಾಧ್ಯ ಸೇರಿದಂತೆ ಇತರರಿದ್ದರು.