ಮಂಟಪದಲ್ಲಿ ವರನಿಗೆ ತೀವ್ರ ಹೃದಯಾಘಾತ,
ಜಮಖಂಡಿ 19: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ಹೆಚ್ಚುತ್ತಿದೆ. ಇತ್ತೀಚಿಗಷ್ಟೇ ಉಡುಪಿಯಲ್ಲಿ 32ರ ಹಾಸ್ಯ ನಟ ರಾಕೇಶ್? ಪೂಜಾರಿ ಹೃದಯಾಘಾತಕ್ಕೆ ಬಲಿಯಾದ ವಿಚಾರ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು. ಇದೀಗ ಜಮಖಂಡಿ ನಗರದಲ್ಲಿ ಹಸೆಮಣೆ ಏರಿದ ಯುವಕ ತಾಳಿ ಕಟ್ಟಿದ ಕೇಲವೆ ನಿಮಿಷದಲ್ಲಿ ಆರತಕ್ಷತೆಗೆ ನಿಲ್ಲುವ ಮುನ್ನವೇ ಎದೆ ಹಿಡಿದುಕೊಂಡು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆಯಿತು.ಮದುವೆ ಸಂಭ್ರಮದಲ್ಲಿ ನಗು ನಗುತ್ತಿದ್ದ ಮನೆಯಲ್ಲಿ ಕ್ಷಣ ಮಾತ್ರದಲ್ಲೇ ಸೂತಕದ ಛಾಯೆ ಆವರಿಸಿದೆ. ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಹೃದಯ ಕಲುಕಿದ ದುರ್ಘಟನೆ ನಡೆಯಿತು, ಮದುವೆಯಾಗಿ ಹೊಸ ಜೀವನ ಶುರು ಮಾಡುವ ಕನಸು ಕಂಡಿದ್ದ ಯುವಕ ಪ್ರವೀಣ ಕುರಣಿ (25) ಮಂಟಪದಲ್ಲೇ ಕೊನೆಯುಸಿರೆಳೆದಿದ್ದಾನೆ.ಮನ ಮೆಚ್ಚಿದವಳಿಗೆೆ ತಾಳಿ ಕಟ್ಟಿದ್ದ ಪ್ರವೀಣ ಕುರಣಿ: ಪ್ರವೀಣ, ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ, ಮುಧೋಳ ದೈಹಿಕ ಪರೀವೀಕ್ಷಕ ಶ್ರೀಶೈಲ ಕುರಣಿ ಅವರ ಪುತ್ರ. ಮೂಲತಃ ಕುಂಬಾರಹಳ್ಳ ಗ್ರಾಮದ ಕುರಣಿ ಕುಟುಂಬದವರಾಗಿದ್ದಾರೆ. ಜಮಖಂಡಿ ನಗರದಲ್ಲಿರುವ ಮನೆಯಲ್ಲಿ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು.ಹಠಾತ್? ಹೃದಯಾಘಾತಕ್ಕೆ ವರ ಬಲಿ: ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಸಮಯದಲ್ಲ್ಲಿ ಯಾರೂ ಊಹಿಸದ ದುರ್ಘಟನೆ ನಡೆದಿದೆ. ಹಠಾತ್? ಹೃದಯಾಘಾತಕ್ಕೆ ವರ ಪ್ರವೀಣ್? ಸಾವನ್ನಪ್ಪಿದ್ದಾನೆ.
ಮದುವೆ ದಿನವೇ ಅಳಿಸಿತು ಸಿಂಧೂರ: ಯುವಕ ಜೊತೆ ಮದುವೆಯಾಗಿ ಹೊಸ ಬದುಕು ನಡೆಸುವ ನೂರಾರು ಕನಸುಕಂಡಿದ್ದ ವಧುವಿನ ಹೃದಯ ಕೂಡ ಈ ಘಟನೆ ನೋಡಿ ನುಚ್ಚು ನೂರಾಗಿದೆ. ತಾಳಿ ಕಟ್ಟಿಸಿಕೊಂಡ ಖುಷಿ ಕೆಲ ನಿಮಿಷಗಳಲ್ಲೆ ಕೊನೆಯಾಗಿದೆ. ಗಂಡನ ಸಾವು ನೋಡಿ ಅಘಾತಕ್ಕೊಳಗಾದ ಯುವತಿ ಮಂಟಪದಲ್ಲೇ ಕಣ್ಣೀರು ಹಾಕಿದ್ದಾಳೆ. ಇತ್ತ ಮದುವೆ ಸಂಭ್ರಮದಲ್ಲೇ ಮಗನನ್ನು ಕಳೆದುಕೊಂಡ ಪೋಷಕರ, ಬಂದು ಬಳಗದವರ ಆಕ್ರಂದನ ಮುಗಿಲು ಮುಟ್ಟಿತು.ಅಕ್ಷತೆ ಹಾಕಲು ಬಂದು ಕಣ್ಣಿರಾದರು: ನಗರದಲ್ಲಿ ನಡೆದ ಸಂಭ್ರಮ ಸಡಗರದ ಅದ್ದೂರಿ ಮದುವೆಗೆ ಅಪಾರ ಸಂಖ್ಯೆಯಲ್ಲಿ ಬಂದು ಬಾಂಧವರು, ಗೆಳೆಯರು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮದಿಂದ ಮಧುವೆಯಲ್ಲಿ ಪಾಲ್ಗೊಂಡಿದ್ದರು ಆದರೆ ವಿಧಿಯಾಟಕ್ಕೆ ಬಲಿಯಾದ ವರನನ ಅಂತ್ಯಸಂಸ್ಕಾರ ನಡೆಸುವಂತಾಗಿದ್ದು ಎಲ್ಲರ ಮನಹಿಂಡುವಂತಿತ್ತು.
ಮಂಟಪದಲ್ಲಿ ಸೂತಕದ ಛಾಯೆ:ತುಂಬಿ ತುಳುಕುತಿದ್ದ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿತ್ತು, ಸಿಹಿ ಬೊಜನ ತಯಾರಿಸಿ ಬಡಿಸುವಲ್ಲಿ ತಯಾರಿಯಾಗಿದ್ದ ಮಹಿಳೆಯರು ಕಣ್ಣಿರಾದರು.
ಸೂರಗಿ ವಸ್ತುಗಳು: ವರನ ಮನೆಯ ಸೇರಿಬೇಕಿದ್ದ ಸೂರಗಿ ದಿನಬಳಕೆ ವಸ್ತುಗಳನ್ನು ಮರಳಿ ಒಯ್ಯೂತ್ತಿರುವ ದೃಷ್ಯ ಮನ ಕಲಕುವಂತಿತ್ತು.
ಬಾಕ್ಷ್: ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಮಧುವೆಯಲ್ಲಿ ತಾಳಿ ಕಟ್ಟಿದ ವರ ಪ್ರವೀಣ ಕುಸಿದು ಬಿಳುತಿದ್ದಂತೆ ನೆರೆದ ಜನ ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಹೊಗಿದ್ದಾರೆ ಆದರೆ ಅಷ್ಟುರೊಳಗೆ ಸಾವನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ಕುಂಚನೂರ ರಸ್ತೆಯ ಪಕ್ಕದ ಮನೆಯಲ್ಲಿ ಪಾರ್ಥಿವ ಶರಿರ ಕೆಲಕಾಲ ಇಡಲಾಯಿತು, ಮನೆ ಮುಂದೆ ಹಾಕಿದ್ದ ಮದುವೆಯ ಶಾಮಿಯಾನದಲ್ಲಿ ಸಂಭ್ರಮ ಛಾಯೆ ಹೋಗಿ ಸೂತಕದ ಛಾಯೆ ಆವರಿಸಿತ್ತು. ಬಂದು ಬಂದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನಿಗೆ ತಂದೆ, ತಾಯಿ, ಸಹೊದರಿ, ಸಹೋದರ ಇದ್ದಾರೆ.