ಬೆಂಗಳೂರಿಗರ ಎದೆ ನಡುಗಿಸಿದ ನಿಗೂಢ ಶಬ್ದ..!!

ಬೆಂಗಳೂರು, ಮೇ 20,  ಮಾರಣಾಂತಿಕ ಕೊರೊನಾ ಸೋಂಕಿನ  ಆತಂಕದಲ್ಲಿ ದಿನಗಳನ್ನು ಬೆಂಗಳೂರಿನ  ಜನತೆ  ದೂಡುತ್ತಿರುವಾಗಲೇ,  ಇಂದು ಮಧ್ಯಾಹ್ನ 1.20 ರಿಂದ 1.30 ರ ಸುಮಾರಿಗೆ ಕೇಳಿಬಂದ ನಿಗೂಢ ಶಬ್ದ ಬೆಂಗಳೂರಿಗರ ಎದೆ ನಡುಗಿಸಿದೆ.ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ವಸಂತನಗರ ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಬಂದಿದೆ.'ಇದು ಭೂಕಂಪವಲ್ಲ ಮಾಪಕಗಳಲ್ಲಿ ಯಾವುದೇ ದಾಖಲೆ ರೆಕಾರ್ಡ್ ಆಗಿಲ್ಲ ಎಂದು  ' ಭಾರತೀಯ ಹವಾಮಾನ ಇದನ್ನು ತಳ್ಳಿಹಾಕಿದೆ. ಇನ್ನೂ ''ಏರ್ ಫೋರ್ಸ್ ಕಂಟ್ರೋಮ್ ರೂಮ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ  ಎಂದೂ  ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.