ಹಾವೇರಿ19: ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಾಮರ್ಿಕ ಸಂಘಟನೆಗಳ ಜಂಟಿ ಸಮತಿಯು ರಾಜ್ಯಪಾಲರನ್ನು ಒತ್ತಾಯಿಸಿದೆ.
ಸೋಮವಾರ ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಅವರಿಗೆ ಜೆಸಿಟಿಯು ಮುಖಂಡರಾದ ಹೊನ್ನಪ್ಪ ಮರೆಮ್ಮನವರ ಹಾಗೂ ವಿನಾಯಕ ಕುರುಬರ, ಗುರುನಾಥ ಲಕಮಾಪೂರ ಅವರು ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸಕರ್ಾರ ಮಾಲೀಕರ ಲಾಬಿಗೆ ಮಣಿದು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಆ ತಿದ್ದುಪಡಿಗಳಿಂದ ಕಾಮರ್ಿಕರಿಗೆ ಅನ್ಯಾಯವಾಗುತ್ತದೆ. ಕಾಮರ್ಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಿದರೆ, ಅದರ ಪರಿಣಾಮ ನೇರವಾಗಿ ಕಾಮರ್ಿಕರ ಮೇಲಾಗುತ್ತದೆ. ಅದರ ಜೊತೆಗೆ ಗುತ್ತಿಗೆ ಕಾಮರ್ಿಕರ ಕಾಯ್ದೆ ಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ. ಈಗಾಗಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯದ ಸಕರ್ಾರಗಳು ಬಂಡವಾಳ ಹೂಡಿಕೆಯನ್ನು ಅಕಷರ್ಿಸುವ ನೆಪದಲ್ಲಿ ಕಾಮರ್ಿಕ ಕಾನೂನುಗಳ ಅನುಷ್ಠಾನಕ್ಕೆ ರಜೆ ಘೋಷಿಸುವಂತಹ ಪ್ರತಿಗಾಮಿ ಕ್ರಮಕ್ಕೆ ಮುಂದಾಗಿದೆ. ಇಂತಹ ಪ್ರಗತಿ-ವಿರೋಧಿ ಕ್ರಮವು ಸಮಾಜವನ್ನು ಮಧ್ಯ ಯುಗಕ್ಕೆ ಕೊಂಡೊಯ್ಯಲಿದ್ದು, ಇದರಿಂದ ಕಾಮರ್ಿಕ ವರ್ಗ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಲಾಕ್ ಡೌನ್ ಅವಧಿಗೆ ಪೂರ್ಣ ವೇತನ ನೀಡಬೇಕು. ದೇಶದ ಕಾರ್ಮಿಕ ವರ್ಗ ಬಹುತೇಕ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಲಾಕ್ ಡೌನ್ ನಿಂದ ಬದುಕನ್ನು ಕಳೆದುಕೊಂಡಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸಬೇಕು. ಕೇಂದ್ರ ಗೃಹ ಸಚಿವಾಲಯ ಆದೇಶದಂತೆ ಕಾರ್ಮಿಕ ರಿಗೆ ಸಂಪೂರ್ಣ ವೇತನವನ್ನು ನೀಡಬೇಕು. ಕೇಂದ್ರದ ಆದೇಶ ಉಲ್ಲಂಘನೆ ಮಾಡುವ ಮಾಲೀಕರ ವಿರುದ್ಧ ಕ್ರಮ ಜರುಗಿಸಿ, ಕಾಮರ್ಿಕರ ವೇತನ ಪಾವತಿಸಲು ರಾಜ್ಯ ಸಕರ್ಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಕಾಮರ್ಿಕರಿಗೆ ರಾಜ್ಯ ಸಕರ್ಾರವು ಇತ್ತೀಚೆಗೆ 2202 ಕೋಟಿ ರುಪಾಯಿಗಳ ಪರಿಹಾರ ಪ್ಯಾಕೇಜನ್ನು ಘೋಷಿಸಿದೆ. ಇದು ಅಸಂಘಟಿತ ವಲಯದ 3 ರಿಂದ 5 ವಿಭಾಗಗಳಿಗೆ ಮಾತ್ರ ಸಂಬಂಧಪಟ್ಟಿದ್ದು, ಉಳಿದ 125ಕ್ಕೂ ಹೆಚ್ಚು ವಲಯಗಳನ್ನು ನಿರ್ಲಕ್ಷಿಸಿದೆ. ಇದರಿಂದ ಕೋಟ್ಯಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾಮರ್ಿಕರು ಲಾಕ್-ಡೌನ್ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿ ಪರಿಹಾರ ಪ್ಯಾಕೇಜಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾಮರ್ಿಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ರಾಜ್ಯ ಸಕರ್ಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್19 ಪಿಡುಗಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ಪ್ಯಾರ-ಮೆಡಿಕಲ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ನೌಕರರು, ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ, ಆಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರು, ಪೌರಕಾಮರ್ಿಕರು ಮುಂತಾದ ಅನೇಕ ಫ್ರಂಟ್-ಲೈನ್ ಕೆಲಸಗಾರರಿಗೆ ಸಮರ್ಪಕ ಪಿಪಿಇ ಕಿಟ್ಗಳು, ಆರೋಗ್ಯ ವಿಮೆ, ಪ್ರೋತ್ಸಹ ಧನ, ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತಿತರ ಸೌಲಭ್ಯಗಳನ್ನು ವಿಸ್ತರಿಸಬೇಕು.
ರಾಜ್ಯ ಸಕರ್ಾರವು ಇತ್ತೀಚೆಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದ ರೈತರನ್ನು ಮುಕ್ತ ಮಾರುಕಟ್ಟೆಯ ಒತ್ತಡಕ್ಕೆ ಗುರಿ ಮಾಡಿದೆ. ಇದರೊಂದಿಗೆ ಎಪಿಎಂಸಿ ಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾಮರ್ಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ಬಿಕಟ್ಟಿನ ಪರಿಸ್ಥಿತಿಯಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಸೂಕ್ತ ವೈಜ್ಞಾನಿಕ ಬೆಲೆ ನೀಡಿ ಸಕರ್ಾರವೇ ಖರೀದಿಸಿ, ಸಾರ್ವಜನಿಕ ವಿತರಣಾ ವ್ಯವಸ್ತೆಯ ಮೂಲಕ ಗ್ರಾಹಕರಿಗೆ ಹಂಚುವುದೊಂದೇ ಬಿಕ್ಕಟ್ಟಿನ ಪರಿಹಾರವಾಗಿದೆ. ಆದರಿಂದ ರೈತ ವಿರೋಧಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯನ್ನು ಕೂಡಲೆ ಹಿಂಪಡೆಯುವಂತೆ ಒತ್ತಾಯಿಸಿದರು.
ಒಂದು ವೇಳೆ ಮೇಲ್ಕಂಡ ರೈತ-ಪರ, ಕಾಮರ್ಿಕ-ಪರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಕಾಮರ್ಿಕ ಸಂಘಟನೆಗಳು ದುಡಿಯುವ ಜನರ ಹೋರಾಟವನ್ನು ತೀವ್ರಗೊಳಿಸಿ ಮುಷ್ಕರವೂ ಸೇರಿದಂತೆ ಹಲವು ಪ್ರತಿಭಟನಾ ಹೋರಾಟಗಳ ಮೂಲಕ ಕಾಮರ್ಿಕ ವಿರೋಧಿ ನೀತಿಗಳನ್ನು ಹಿಮ್ಮೆಟಿಸಲು ಮುಂದಾಗುವುದು ಎಚ್ಚರಿಕೆ ನೀಡಿದರು.