ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ದೀಪ ಬೆಳಗುವ ಮೂಲಕ ಕಾರ್ಯಕ್ರಮ
ಹಾವೇರಿ12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಸೋಮವಾರ ಹಾವೇರಿ ನಗರದ ಗಾಂಧಿ ಭವನದಲ್ಲಿ ಜರುಗಿತು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, "ಗೌತಮ ಬುದ್ಧ, ಬುದ್ಧ ಪೂರ್ಣಿಮೆಯಂದು ಜ್ಞಾನೋದಯ ಪಡೆದನೆಂದು ನಂಬಲಾಗಿದೆ. ಬುದ್ಧನು ತನ್ನ ಜೀವನದ 45 ವರ್ಷಗಳನ್ನು ಧರ್ಮ, ಅಹಿಂಸೆ, ಸಾಮರಸ್ಯ, ಕರುಣೆ ಮತ್ತು ನಿರ್ವಾಣದ ಮಾರ್ಗವನ್ನು ಬೋಧಿಸುತ್ತಾ ಕಳೆದನು. ಬೌದ್ಧಧರ್ಮದ ಮೂರು ಪ್ರಮುಖ ತತ್ವಗಳಾದ ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನ. ಈ ಐತಿಹಾಸಿಕ ಸಂದರ್ಭವು ಶಾಂತಿ ಮತ್ತು ಸಾಮರಸ್ಯವನ್ನು ಹರಡುವ ಬುದ್ಧ ತತ್ವಗಳನ್ನು ಸ್ಮರಿಸುತ್ತದೆ" ಎಂದು ಹೇಳಿದರು.
ಕೆ.ಸಿ. ಅಕ್ಷತಾ ಮಾತನಾಡಿ " ಇಂದಿನ ನಮ್ಮ ಯುವಕರಿಗೆ ಸನಾತನ ಸಂದೇಶದ ಬದಲು ಬುದ್ಧನ ಸಂದೇಶವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಕರುಣೆ, ಶಾಂತಿ ಮತ್ತು ಅಹಿಂಸೆಯ ಮೇಲೆ ಒತ್ತು ನೀಡುವುದರಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು
ಹಾವೇರಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಭಗವಾನ್ ಬುದ್ಧರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಲ್.ನಾಗರಾಜ್. ನಗರಸಭೆಯ ಆಯುಕ್ತ ಗಂಗಾಧರ ಬೆಲ್ಲದ, ಗಾಂಧಿಪುರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರಕಾಶ ಬಾರ್ಕಿ, ಉಡಚಪ್ಪ ಮಾಳಗಿ, ಸಾಹಿತಿ ಸತೀಶ್ ಕುಲಕರ್ಣಿ, ವೀರ್ಪ ಗಾಳೆಮ್ಮನವರ, ಆಶೋಕ ಮರೆಣ್ಣನವರ್, ಮಾಲತೇಶ ಯಲ್ಲಾಪುರ, ಶಂಭು ಕಳಸದ, ಗೌತಮಿ ಮೌರ್ಯ ಬುದ್ಧ ವಿಹಾರ ಅಧ್ಯಕ್ಷರಾದ ಲಾವಣ್ಯ, ಎನ್.ಬ. ಕಾಳೆ , ಸುನಿಲ್ ಬೆಟಗೇರಿ, ನಿತ್ಯಾನಂದಸ್ವಾಮಿ ವೇದಿಕೆಯಲ್ಲಿ ಉಪ್ಥಿತರಿದ್ದರು.
ಆರಂಭದಲ್ಲಿ ಗುರುನಾಥ ಛಲವಾದಿ ಸಂಗಡಿಗರಿಂದ ಬುದ್ಧ ನಮನ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾಡಿದರು. ಪೃಥ್ವಿರಾಜ್ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಗಾಳೆಮ್ಮನವರ ವಂದಿಸಿದರು.
ಬುದ್ಧ ನಡಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಮಾಲಾರೆ್ಣ ಮಾಡಲಾಯಿತು. ನಗರ ಬುದ್ಧ ನಡಿಗೆ ಗಾಮಧಿ ಭವನದವರೆಗೆ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರಣ್ಣ ಸಂಗೂರ, ನಗರಸಭಾ ಮಾಜಿ ಸದ್ಯರಾದ ಬಾಬಣ್ಣ ಮೊಮಿನಗಾರ್, ಶಿವರಾಜ್ ಮತ್ತಿಹಳ್ಳಿ ಮಾಲತೇಶ ಕರ್ಜಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.