ಸಂತೋಷಕುಮಾರ ಕಾಮತ
ಮಾಂಜರಿ 03: ಮೂರು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮಾಡಿದ್ದ ಮನವಿಗೆ ಮಹಾ ಸಿಎಂ ದೇವೆಂದ್ರ ಫಡ್ನವಿಸ್ಗೆ ರಾಜ್ಯದ ಕಾಂಗ್ರೆಸ್ ಹಾಗೂ ಬಿಜೆಪಿ ದಿಗ್ಗಜರು ಭೆಟಿ ನೀಡಿ ನೀರು ಸದ್ಯದಲ್ಲಿ ಕೃಷ್ಣೆಗೆ ಹರಿಯುವದು ಎಂದು ಹೆಳಿದ್ದೇ ಹೆಳಿದ್ದು ಇಂದಿಗೂ ಒಂದು ತೊಟ್ಟು ನೀರು ಬಾರದಿರುವದು ದುರದೃಷ್ಟಕರ ಸಂಗತಿಯಾಗಿದೆ
ಕಳೆದ ತಿಂಗಳು ರಾಜ್ಯದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಉಭಯ ಪಕ್ಷಗಳ ಮುಖಂಡರು ಮಹಾರಾಷ್ಟ್ರ ಸಿಎಂ ಭೆಟಿ ನೀಡಿ ನೀರು ಬಿಡುಗಡೆಗೊಳಿಸುವ ಭರವಸೆಯೊಂದಿಗೆ ರಾಜ್ಯದ ಜನತೆಗೆ ನೀರು ಬಿಡುಗಡೆಗೊಳಿಸುವಲ್ಲಿ ಮಹಾರಾಷ್ಟ್ರ ಸಿಎಂ ಅನುಮತಿ ನೀಡಿದ್ದಾರೆ
ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ನೀರು ಬರಲಿದೆ ಎಂದು ಪತ್ರಿಖಾ ಹೆಳಿಕೆಗಳನ್ನು ನೀಡಿ ಜನತೆಗೆ ಹುಸಿ ಭರವಸೆ ನೀಡಿದ್ದು ಇತಿಹಾಸ ಸದ್ಯ ಕೃಷ್ಣಾ ನದಿ ತೀರದ ಜನತೆ ನೀರಿನ ಬರದಿಂದ ತೀವ್ರ ಕಂಗೆಟ್ಟು ಹೊಗಿದ್ದಲ್ಲದೆ ಬೇಸಿಗೆ ಮುಕ್ತಾಯ ಸಿನಗಳಾದರೂ ನೀರು ಬಾರದಿದ್ದಕ್ಕೆ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಇನ್ನಂತು ನೀರು ಬರುವ ಯಾವದೆ ನಿರಿಕ್ಷೇಯನ್ನು ಜನತೆ ಇಟ್ಟುಕೊಂಡಿಲ್ಲ.
ಮೂರು ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ : ವಿಜಯಪೂರ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಸಂಜಿವನಿಯಾಗಿರುವ ಕೃಷ್ಣೆಯು ಸಂಪೂರ್ಣ ಬತ್ತಿ ಹೋಗಿ ಎರಡು ತಿಂಗಳು ಗತಿಸಿದೆ ಮೂರು ಜಿಲ್ಲೆಗಳ ಹೆಚ್ಚಿನ ಪ್ರದೇಶದ ಜನ ನೀರಿನ ಹಾಹಾಕಾರದಲ್ಲಿದ್ದು ನೀರಿಗಾಗಿ ದಿನನಿತ್ಯದ ಕಾರ್ಯಗಳನ್ನು ಬಿಟ್ಟು ಅಲೆದಾಡುವಂಥಹ ಪರಿಸ್ಥಿತಿ ನಿಮರ್ಾಣವಾಗಿದೆ
ನೀರು ಬಿಡುಗಡೆಗೊಳಿಸುವಲ್ಲಿ ವಿಫಲ : ರಾಜ್ಯದ ಉಭಯ ಪಕ್ಷಗಳ ನಿಯೋಗ ಹೊಂದಿದ್ದ ಮುಖಂಡರೊಂದಿಗೆ ಭರವಸೆ ನೀಡಿರುವ ಮಹಾ ಸಿಎಂ ಕೊನೆಗೂ ನೀರು ಬಿಡುಗಡೆಗೊಳಿಸುವಲ್ಲಿ ವಿಫಲವಾಗಿರುವ ಕಾರಣ ಹುಡುಕುತ್ತಾ ಹೊದರೆ ನೀರು ಒಪ್ಪಂದದ ಕರಾರು ಕಹಾರಾಷ್ಟ್ರ ಸರಕಾರಕ್ಕೆ ರಾಜ್ಯದಿಂದ ತಲುಪಿಲ್ಲವೆಂಬ ಆರೋಪ ಸರಕಾರದ ಈ ವಿಳಂಬ ನೀತಿಯಿಂದ ಈ ಭಾಗದ ಲಕ್ಷಾಂತರ ಜನರ ನೀರಿನ ಹಾಹಾಕಾರಕ್ಕೆ ತುತ್ತಾಗುವಲ್ಲಿ ಕಾರಣವಾಯಿತು.
ಹಲವಾರು ಬಾರಿ ರೈತ ಸಂಘಟನೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದಾಗ್ಯೂ ನೀರು ಬಾರದಿರುವದು ವಿಪಯರ್ಾಸವೇ ಸರಿ.