ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಿದ ಜಿಲ್ಲಾಧಿಕಾರಿ

ಹಾವೇರಿ02: ವಿಶ್ವ ಕಾಮರ್ಿಕರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರಿಗೆ ಭೇಟಿ ನೀಡಿ ಕಡ್ಡಟ ಕಾಮರ್ಿಕರಿಗೆ ಆಹಾರದ ಕಿಟ್ಗಳನ್ನು ವಿತರಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ತಡಸ ಚೆಕ್ಪೋಸ್ಟ್ಗೆ ಭೇಟಿ ಚೆಕ್ಪೋಸ್ಟ್ಗಳ ಕಾರ್ಯನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಿದರು. ತರುವಾಯು ಶಿಗ್ಗಾಂವ ನಗರದ ಬಿ.ಸಿ.ಎಂ. ವಸತಿ ನಿಲಯಕ್ಕೆ ಭೇಟಿ ನೀಡಿ ವಲಸೆ ಕಾಮರ್ಿಕರ ಯೋಗಕ್ಷೇಮ ವಿಚಾರಿಸಿದರು. 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ ಪ್ರಕಾಶ ಕುದರಿ ಇತರರು ಉಪಸ್ಥಿತರಿದ್ದರು.