ಮಹಿಳೆ ಅಬಲೆಯಲ್ಲ, ಸಬಲೆ ಎಂದು ಸಾಬೀತು ಪಡೆಸಿದ್ದಾಳೆ: ದೇಸಾಯಿ

ಶಿಗ್ಗಾವಿ09 : ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿ ಮಹಿಳೆ ಅಬಲೆಯಲ್ಲ, ಸಬಲೆ ಎಂದು ಸಾಬೀತು ಪಡೆಸಿದ್ದಾಳೆ ಎಂದು ಬಂಕಾಪುರ ಪುರಸಬೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.

    ತಾಲೂಕಿನ ಬಂಕಾಪುರ ಪಟ್ಟಣದ ಫಕ್ಕೀರೇಶ್ವರ ಮಠದ ಸಭಾ ಭವನದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು, ಮಹಿಳೆಯರು ಸರಕಾರದ ಯೋಜನೆಯಾದ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಲಿಂಗ ತಾರತಮ್ಯ, ಹೆಣ್ಣು ಗಂಡೇಂಬ ಭೇದ ಭಾವ ತೊರೆದು ಹೆಣ್ಣು ಬೃಣ ಹತ್ಯ ತಡೆದು, ಹೆಣ್ಣು ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.

     ಲೈಯನ್ಸ್ ನವಭಾರತ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಜಿ.ಎಸ್.ದೇಸಾಯಿ ಮಾತನಾಡಿ ಸಹನೆ, ತಾಳ್ಮೆ, ಪ್ರೀತಿ, ಕರುಣೆ, ಮಮತೆ, ತ್ಯಾಗಕ್ಕೆ ಮತ್ತೋಂದು ಹೆಸರೇ ಸ್ತ್ರೀಯಾಗಿದ್ದಾಳೆ. ಅಂತಹ ಸ್ತ್ರೀ ಶಿಕ್ಷಣ ಪಡೆದರೆ ಶಾಲೆಯೊಂದು ತೆರೆದಂತೆ ಎಂಬ ನಾಡ ನುಡಿಯಂತೆ ಸುಶಿಕ್ಷಿತ ಮಹಿಳೆಯಿದ್ದ ಮನೆಯೇ ಒಂದು ಶಾಲೆಯಾಗಲಿದೆ ಎಂದು ಹೇಳಿದರು.

     ಮಹಿಳೆ ಇಗ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡಾ ತನ್ನ ಸಾಮಥ್ರ್ಯವನ್ನು ಪ್ರದಶರ್ಿಸುತ್ತಿದ್ದು, ದ್ವಿಚಕ್ರ ವಾಹನದಿಂದ ಹಿಡಿದು ಫೈಲೆಟ್ ವರೆಗೆ, ಪೊಲೀಸ್ ನಿಂದ ಹಿಡಿದು ಗಡಿ ಕಾಯುವ ಸೈನಿಕ, ಕಮಾಂಡೆಂಟ್ ಹುದ್ದೆಯವರೆಗೆ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ ಕಾರ್ಯವನ್ನು ನಿರ್ವಹಿಸುತ್ತಿದ್ದಾಳೆ ಅಂತಹ ಮಹಿಳೆಯನ್ನು ಗೌರವದಿಂದ ನಡೆಸಿಕೋಳ್ಳುವ ಗುರುತರ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಹೇಳಿದರು.

     ಪುರಸಭೆ ಡೆ ನಲ್ಮ ಯೋಜನಾಧಿಕಾರಿ ಬಿ.ಎಸ್.ಗಿಡ್ಡಣ್ಣವರ ಮಾತನಾಡಿ ಮಹಿಳೆಯರನ್ನು ಆಥರ್ಿಕವಾಗಿ ಸದೃಡಗೋಳಿಸುವ ಉದ್ದೇಶದಿಂದ ಡೇ ನಲ್ಮ ಯೋಜನೆ ಅಡಿಯಲ್ಲಿ 65 ಮಹಿಳಾ ಗುಂಪುಗಳನ್ನು ರಚಿಸಿ 4 ಕೋಟಿಗಿಂತ ಅಧಿಕ ಹಣವನ್ನು ಉಳಿತಾಯ ಮಾಡಿಸಲಾಗಿದೆ. ಅಲ್ಲದೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಸರಕಾರದ ಸಾಲ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

     ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ರಂಗೋಲಿ ಸ್ಪಧರ್ೇ, ಮ್ಯಾಜಿಕ ಚೇರ, ಹಗ್ಗ ಜಗ್ಗಾಟ ಸೇರಿದಂತೆ ವಿವಿದ ಸ್ಪಧರ್ೇಗಳನ್ನು ಎರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ 5 ನೂರಕ್ಕೀಂತಲೂ ಅಧಿಕ ಸಾಂಪ್ರದಾಯಕ ಮದುವೆ ಮಾಡಿಸಿ, ನೂರಾರು ಹಾಡು ಒಗಟುಗಳನ್ನು ಬಾಯಿಪಾಠದಮೂಲಕ ಸರಾಗವಾಗಿ ಹೇಳುವ 95 ವರ್ಷದ ವೃದ್ದೆ ನೀಲಮ್ಮ ಶಿವಪ್ಪ ಆಲದಕಟ್ಟಿ ಯವರನ್ನು ಸನ್ಮಾನಿಸಲಾಯಿತು. ಕಂಪ್ಯೂಟರ ತರಬೇತಿ ಮುಖ್ಯ ಶಿಕ್ಷಕಿ ಶಮನಾಝ ಮಾತನಾಡಿದರು.

     ಪುರಸಭೆ ಇಂಜನೀಯರ ನಾಗರಾಜ ಮಿಜರ್ಿ, ನಿಂಗಪ್ಪ ಹೊಸಮನಿ, ನೀರ್ಮಲಾ ಗುಡಿಮನಿ, ನೀಲಮ್ಮ ಆಲದಕಟ್ಟಿ, ಕೊರಕಲ್, ಹಿರೇಮಠ ಮಹಿಳಾ ಸಂಘದ ಶೋಭಾ ವನಹಳ್ಳಿ, ಶಾಂತವ್ವ ಪಟ್ಟಣಶೆಟ್ಟಿ, ನೀಲಮ್ಮ ಪುರಾಣಮಠ, ಶೋಭಾ ಅಕ್ಕಿ, ಪುಟ್ಟವ್ವ ಹರಕುಣಿ ಸೇರಿದಂತೆ ಮತ್ತಿತರರು ಇದ್ದರು. ಪುರಸಭೆ ಅಧಿಕಾರಿ ಮಲ್ಲಮ್ಮ ಹರವಿ ನಿರೂಪಿಸಿದರು.