ಬಾಗಲಕೋಟೆ 15: ವಿದ್ವಾನ್ ಸರ್ವಪೂಜ್ಯತೆ ಎಂಬ ನಾನ್ನುಡಿಯಂತೆ ಕಠಿಣ ಪರಿಶ್ರಮ ವಿನಯ, ನಿಷ್ಠೆಯಿಂದ ಶಿಕ್ಷಣ ಪಡೆದ ವಿದ್ಯಾವಂತನಿಗೆ ಜಗತ್ತೆ ತಲೆಬಾಗುತ್ತಿದೆ ಎಂದು ಬೀಳಗಿ ಶಾಸಕ ಮುರುಗೇಶ ನಿರಾಣಿ ಹೇಳಿದರು.
ಅವರು ಬಾಗಲಕೋಟ ತಾಲೂಕಿನ ಬೀಳಗಿ ಮತಕ್ಷೇತ್ರದ ಯಡಹಳ್ಳಿ (ಆನದಿನ್ನಿ) ಪ್ರೌಢಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮೊದ ಮೊದಲು ಶಿಕ್ಷಣ ಸಿರಿವಂತರ ಅಧಿಕಾರಿಗಳ, ಮೇಲ್ಜಾತಿಯವರ ಸ್ವತ್ತಾಗಿತ್ತು. ಇಂದು ಶಿಕ್ಷಣದಿಂದ ಎಲ್ಲ ಕ್ಷೇತ್ರಗಳಲ್ಲು ಪ್ರಗತಿ ಕಾಣಬಹುದೆಂಬ ಸತ್ಯ ಅರಿತು ಸರಕಾರ ಶಿಕ್ಷಣಕ್ಕೆ ಎಲ್ಲ ಇಲಾಖೆಗಳಿಗಿಂತ ಹೆಚ್ಚಿನ ಆಧ್ಯತೆ ನೀಡಿದ್ದು, ಪ್ರತಿಯೊಬ್ಬ ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಕ್ಷಣ ಹೆಣ್ಣು ಮಕ್ಕಳಿಗೂ ಅವಶ್ಯವಾಗಿದ್ದು, ಪ್ರತಿಯೊಬ್ಬ ಹೆಣ್ಣು ಮೊಗಳು ಗಂಡಿಗಿಂತ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ವೆಂಬುದನ್ನು ನಮ್ಮ ಜಿಲ್ಲೆಯವರಾದ ಸುಧಾ ಮೂತರ್ಿಅವರು ಇನ್ಪೋಸಿಸ್ ಕಂಪನಿ ಸ್ಥಾಪಿಸಿ ಲಕ್ಷಾಂತರ ಇಂಜಿನೀಯರಗಳಿಗೆ ಉದ್ಯೋಗ ನೀಡಿ ಮಹಿಳೆ ಅಬಲೆಯಲ್ಲ ಸಬಲೆಯೆಂಬುದನ್ನು ಸಾಭೀತುಪಡಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾಥರ್ಿಯಲ್ಲೂ ಒಂದೊಂದು ಪರಿಣಿತಿ ಇದ್ದು, ತಮ್ಮ ಇಷ್ಟದ ವಿಷಯವನ್ನೇ ಪ್ರಧಾನವಾಗಿಟ್ಟುಕೊಂಡು ಶಿಕ್ಷಣದೊಂದಿಗೆ ವಿನಯವಂತರಾಗಿ ಗುರು ಹಿರಿಯರಿಗೆ ಗೌರವ ನೀಡಿ ವಿನಂಬ್ರದಿಂದ ವಿದ್ಯಾರ್ಜನೆ ಮಾಡಿದ್ದೇ ಆದಲ್ಲಿ ಸುಶಿಕ್ಷಿತ ವಿದ್ಯಾವಂತರಾಗಿ ಗ್ರಾಮ, ಶಾಲೆ, ಗುರುಗಳಿಗೆ ಪಾಲಕರಿಗೆ ಹೆಸರು ತರುವದಲ್ಲದೇ ನಾಡಿಗೆ ವಿಶೇಷ ಕೊಡುಗೆ ನೀಡಬೇಕೆಂದರು. ಗ್ರಾಮೀಣ ಮಕ್ಕಳು ತಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುವದನ್ನು ನೋಡಿದ್ದೀರಿ. ಆದರೆ ಅದರಿಂದ ಸಕ್ಕರೆ, ವಿದ್ಯುತ್ ತಯಾರಿಸುವ ವಿಧಾನವನ್ನು ತಮ್ಮ ಕಾಖರ್ಾನೆಗೆ ಬಂದು ನೋಡಬೇಕು. ಅದಕ್ಕಾಗಿ ಎಲ್ಲ ವಿದ್ಯಾಥರ್ಿಗಳಿಗೆ ತಮ್ಮ ಸಂಸ್ಥೆಯ ವಾಹನ ಕಳುಹಿಸಿ ಕಾಖರ್ಾನೆ ವೀಕ್ಷಿಸುವದರ ಜೊತೆಗೆ ಪಿಕ್ನಿಕ್ ಆಯೋಜಿಸಲಾಗುವುದೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕಿ ಎಂ.ಆರ್.ಕಾಮಾಕ್ಷಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣರಂಗ, ಆರೋಗ್ಯರಂಗ ಮತ್ತು ಆದ್ಯಾತ್ಮಿಕ ಕೇಂದ್ರಗಳಾದ ಮಠ ಮಂದಿರಗಳಲ್ಲಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸರ್ವರ ಹಿತ ಕಾಪಾಡುವ ನಿಟ್ಟಿನಲ್ಲಿ ನಡೆದಾಗ ಮಾತ್ರ ಒಂದು ಸುಂದರ ಸ್ವಾಸ್ಥ ಸಮಾಜ ನಿಮರ್ಾಣವಾಗುತ್ತದೆ ಎಂದರು. ಸರಕಾರಿ ಶಾಲೆ ವಿದ್ಯಾಥರ್ಿಗಳಿಗೆ ಅನೇಕ ರೀತಿಯ ಪ್ರಯೋಜನಗಳನ್ನು ದೊರಕಿಸಿಕೊಡಲಾಗುತ್ತಿದ್ದು, ಅದಕ್ಕಾಗಿ ಶಿಕ್ಷಣ ಇಲಾಖೆಯಿಂದಾಗಲಿ ಆರ್.ಎಂ.ಎಸ್.ಎ ಇಂದಾಗಲಿ ಇನ್ನಾವುದೇ ಯೋಜನೆಯಿಂದಾಗಲಿ ಈ ಶಾಲೆಗೆ ಅವಶ್ಯವಿರುವ ಎರಡು ಕೊಠಡಿಗಳನ್ನು ನಿಮರ್ಿಸಿಕೊಡಲಾಗುವುದೆಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಗ್ರಾ.ಪಂ ಉಪಾಧ್ಯಕ್ಷ ಮುತ್ತಪ್ಪ ಮನ್ನೇರಿ, ಗ್ರಾ.ಪಂ ಸದಸ್ಯರಾದ ಮೇಲಗಿರಿಯಪ್ಪ ನಿಲಣ್ಣವರ ರಮೇಶ ನೀಲಣ್ಣವರ, ಪ್ರೌಢಶಾಲೆ ಎಸ್.ಡಿ.ಎಂ.ಸಿ ಅದ್ಯಕ್ಷ ವಿಠಲ ಪೂಜಾರಿ ಪ್ರಾಥಮಿಕ ಶಾಲಾ ಅಧ್ಯಕ್ಷ ತುಳಸಿಗೇರಿ ಛಬ್ಬಿ, ಅಶೋಕ ಮೇಟಿ, ನಿವೃತ್ತ ಯೋಧ ದೊಡ್ಡಪ್ಪ ಪೂಜಾರಿ, ಶಿಕ್ಷಣ ಇಲಾಖೆಯ ಎನ್.ವಾಯ್.ಕುಂದರಗಿ, ರಾಜು ಅಂಗಡಿ, ಎಸ್.ಆರ್.ಗೌಡರ, ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಆರ್.ಟಿ.ಬಾಳಕ್ಕನವರ, ಶ್ರೀಮತಿ ಎಸ್.ಎಂ.ಅಳ್ಳಿಮಟ್ಟಿ ಉಪಸ್ಥಿತರಿದ್ದರು. ಶ್ರೀಮತಿ ರೊಟ್ಟಿ ಸ್ವಾಗತಿಸಿದರು. ಸುಜಾತಾ ಬನಹಟ್ಟಿ ನಿರೂಪಿಸಿದರು. ಇದೇ ಸಮಯದಲ್ಲಿ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸಲಾಯಿತು.