ಶ್ರೀಗಂಧ ಮರಗಳ ಕಳ್ಳತನ

ಲೋಕದರ್ಶನವರದಿ

ಬ್ಯಾಡಗಿ : ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ಶ್ರೀಗಂಧದ ಮರ ಕಳ್ಳತನವಾಗಿರುವ ಪ್ರಕರಣವೊಂದು ಗುರುವಾರ ಬೆಳಕಿಗೆ ಬಂದಿದೆ. 

  ಕಳೆದ ನಾಲ್ಕೈದು ತಿಂಗಳಿನಿಂದಲೂ ಶ್ರೀಗಂಧದ ಮರಗಳ ಕಳ್ಳತನ ನಡೆದಿರುವ ಈಗ ಬೆಳಕಿಗೆ ಬಂದಿದ್ದು, ಗುರುವಾರವೂ ಅರಣ್ಯ ಪ್ರದೇಶದಲ್ಲಿದ್ದ ಒಂದು ಮರವನ್ನು ಕತ್ತರಿಸಿ ಕಳ್ಳತನ ಮಾಡಿದ್ದು ಅದರ ಕತ್ತರಿಸಿದ ಟೊಂಗೆಗಳು ದೊರೆಕಿವೆ. 

   ಈಗಾಗಲೇ ಉಳಿದ ಮರಗಳ ರಕ್ಷಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಳ್ಳತನಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ತಿಳಿಸಿದ್ದಾರೆ. 

  ಮರಗಳ ಕಳ್ಳತನ ನಡೆದ ಸ್ಥಳಕ್ಕೆ ತಹಶೀಲ್ದಾರ ಶರಣಮ್ಮ ಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.