ಬಳ್ಳಾರಿ, 28: ಸಮರ್ಥ ಮತ್ತು ಯಶಸ್ವಿ ಶಿಕ್ಷಕರಾಗಲು ಮನೋವಿಜ್ಞಾನದಜ್ಞಾನ ಅನಿವಾರ್ಯ, ವೈಯಕ್ತಿಕಭಿನ್ನತೆ, ಬುದ್ಧಿಶಕ್ತಿ, ಆಲೋಚನೆ, ಕಲಿಕಾ ಪರಿಕಲ್ಪನೆ ಇವುಗಳ ವೈಜ್ಞಾನಿಕಜ್ಞಾನಇಲ್ಲದಿದ್ದರೆ ಯಶಸ್ವಿ ಶಿಕ್ಷಕರಾಗಲು ಸಾಧ್ಯವಿಲ್ಲ. ಮತ್ತುಈ ಎಲ್ಲಾ ಕ್ಷೇತ್ರಗಳನ್ನು ತಾಯಿ ತಿಳಿಯದಿದ್ದರೂ ಸಹ, ತನ್ನ ಮಗುವಿಗೆ ಸಮರ್ಥವಾಗಿತರಬೇತಿಯನ್ನು ನೀಡುತ್ತಾಳೆ ಆದ್ದರಿಂದ ಪ್ರಪಂಚದಲ್ಲಿತಾಯಿಗಿಂತಲೂ ಶ್ರೇಷ್ಟವಾದ ಮನೋವಿಜ್ಞಾನಿ ಬೇರೊಬ್ಬರಿಲ್ಲಎಂದುಡಾ. ಜಗದೀಶ ಬಸಾಪೂರ, ಕಾರ್ಯದರ್ಶಿಗಳು, ಎಸ್.ಇ.ಎಸ್ ಶಿಕ್ಷಣ ಸಂಸ್ಥೆಗಳು, ಸಂಡೂರು, ಇವರು, ಬಳ್ಳಾರಿ ನಗರದಕನ್ನಡ ಭವನ, ಸಾಂಸ್ಕೃತಿಕ ಸಮುಚ್ಛಯದಲ್ಲಿ, ವಿದ್ಯಾರ್ಥಿಗಳ ಬಳಗ ಹಾಗೂ ಸಂಕೇತ ಪ್ರಕಾಶನತುಮಕೂರುಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆಕಾರ್ಯಕ್ರಮವನ್ನು ಉದ್ದೇಶಿಸಿ ಅಭಿಪ್ರಾಯ ಹಂಚಿಕೊಂಡರು.
ಡಾ. ಸುರೇಶ್ ಬಾಬು ಸಹ ಪ್ರಾಧ್ಯಾಪಕರು ಮತ್ತುಯುನಿಸ್ ಅಲ್ಲಮನೂರುಮನೋವಿಜ್ಞಾನದಸಹಾಯಕ ಪ್ರಾಧ್ಯಾಪಕರುಇವರು ಬರೆದ ಶೈಕ್ಷಣಿಕ ಮನೋವಿಜ್ಞಾನ ಮತ್ತುಎಜುಕೇಶನಲ್ ಸೈಕಾಲಿಜಿ ಎಂಬ ಎರಡು ಪುಸ್ತಕಗಳನ್ನು ಅನಾವರಣ ಮಾಡಿದ ಸುಶಿಲಾ ಶಿರೂರು, ನಿವೃತ್ತ ಸಹಾಯಕ ಪ್ರಾಧ್ಯಪಕರು, ಕೊಶಿಶಿಮ ಬಳ್ಳಾರಿ, ಪುಸ್ತಕ ಮಸ್ತಕದೊಳಗೆ ನೇರವಾಗಿ ಹೋಗುವ ಹಾಗೆ ಮೂಡಿಬಂದಿವೆ, ಕೆಲವು ಕಡೆಇನ್ನಷ್ಟು ಉದಾಹರಣೆಗಳ ಅವಶ್ಯಕತೆಇದೆಎಂದು ತಿಳಿಸಿದರು. ನಿಷ್ಠಿ ರುದ್ರ್ಪ, ಅದ್ಯಕ್ಷರುಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಪುಸ್ತಕ ಸಂಸ್ಕೃತಿ ಉಳಿಯಬೇಕು ಎಂದರು, ಮುಜಾಮಿಲ್, ಪ್ರಾಂಶುಪಾಲರು, ಮೊಹಮ್ಮದೀಯಾ ಮಹಿಳಾ ಮಹಾವಿದ್ಯಾಲಯ ಈ ಪುಸ್ತಕಗಳು ಶಿಕ್ಷಕರಾಗುವ ಕನಸುಗಳಿಗೆ ಬೆಂಬಲವಾಗಿ ನಿಲ್ಲುತ್ತದೆಎಂದರು, ಆಲಂಭಾಷಾ, ಸಹಾಯಕ ಪ್ರಾಧ್ಯಾಪಕರು, ಸತ್ಯಂ ಶಿಕ್ಷಣ ಮಹಾವಿದ್ಯಾಲಯಇವರು, ಮನೋವಿಜ್ಞಾನದ ಸಹಾಯದಿಂದ ಮತ್ತೊಬ್ಬರಿಗೆ ಸ್ಪೂರ್ತಿಯಾಗಲು ನರೆವಾಗುತ್ತದೆಎಂದರು, ರವೀಂದ್ರ ಸಹಾಯಕ ಪ್ರಾಧ್ಯಪಕರು, ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯ ಶಿಕ್ಷಕರು ಹಾಸ್ಯ ಪ್ರಜ್ಞೆಕೌಶಲ ರೂಡಿಸಿಕೊಳ್ಳಬೇಕು ಎಂದರು.
ಡಾ. ಸುರೇಶ್ ಬಾಬು ಸಹ ಪ್ರಾಧ್ಯಾಪಕರು ಮತ್ತುಯುನಿಸ್ ಅಲ್ಲಮನೂರುಮನೋವಿಜ್ಞಾನದಸಹಾಯಕ ಪ್ರಾಧ್ಯಾಪಕರುಇವರು ಬರೆದ ಶೈಕ್ಷಣಿಕ ಮನೋವಿಜ್ಞಾನ ಮತ್ತುಎಜುಕೇಶನಲ್ ಸೈಕಾಲಿಜಿ ಈ ಪುಸ್ತಕ ಬಿಡಿಗಡೆಕಾರ್ಯಕ್ರಮದಲ್ಲಿಪ್ರಕಾಶ, ಪ್ರಕಾಶಕರು, ಸಂಕೇತ ಪ್ರಕಾಶನತುಮಕೂರು, ಮಲ್ಲಿಕಾರ್ಜುನ, ಹಿರಿಯ ಸಹಾಯಕ ಪ್ರಾಧ್ಯಾಪಕರು, ರಾಯಲ್ ಶಿಕ್ಷಣ ಮಹಾವಿದ್ಯಾಲಯ, ಸುಜಾತ, ಹಿರಿಯಸಹಾಯಕಪ್ರಾಧ್ಯಾಪಕರು, ಮೊಹಮ್ಮದೀಯ ಶಿಕ್ಷಣ ಮಹಾವಿದ್ಯಾಲಯ, ಶ್ರೀಮತಿ ಮೈಮುದ, ಪ್ರಾಂಶುಪಾಲರು, ಮೊಹಮ್ಮದೀಯ ಶಿಕ್ಷಣ ಮಹಾವಿದ್ಯಾಲಯ, ಆಂಥೋನಿ, ಸೋನಿಯಗಾಂಧಿ ಶಿಕ್ಷಣ ಮಹಾವಿದ್ಯಾಲಯ, ನಾಗವೇಣಿ, ಉಪನ್ಯಾಸಕರು, ಎಸ್‌ಜಿ ಪಿಯುಕಾಲೇಜು , ಕುಮಾರಿ ಪಾರ್ವತಿ, ಸಹಾಯಕಪ್ರಾಧ್ಯಾಪಕರು, ಮೊಹಮ್ಮದೀಯ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ, ಉಮಾರಾಯಲ್ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ. ಕಾರ್ಯಕ್ರಮದಲ್ಲಿದ್ದರು ಹಾಗೂ ಮೊಹಮ್ಮದಿಯಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಮತ್ತುರಾಯಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.