ಬೆಳಗಾವಿ: ವಡಗಾಂವ ಶಾಖೆಯ ತೃತೀಯ ವಾರ್ಷಿಕೋತ್ಸವ

ಲೋಕದರ್ಶನ ವರದಿ

ಬೆಳಗಾವಿ 19:  ರಾಜ್ಯ ಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ ಶಿಕ್ಷಣ ಮತ್ತು ಆರೊಗ್ಯ ಸೇವೆಯ ಜೊತೆಗೆ ಸಹಕಾರಿ ರಂಗದಲ್ಲಿ ಮಾಡಿರುವ ಕಾರ್ಯಕೂಡ ಶ್ಲಾಘನೀಯವಾಗಿದ್ದು. ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಡಾ.ಪ್ರಭಾಕರ ಕೋರೆ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಕೂಡಾ ಹೆಮ್ಮರವಾಗಿ ಬೆಳೆದಿದೆ. ಕಳೆದ ವರ್ಷ ಸಹಕಾರಿಯು"ಅತ್ಯುತ್ತಮ ಸಹಕಾರಿ" ಪ್ರಶಸ್ತಿ ಪಡೆದು ಕನರ್ಾಟಕ ರಾಜ್ಯಾದಂತ 39 ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ದೇವೇಂದ್ರ ಡಿ ದೇಸಾಯಿ ಹೇಳಿದರು. ಅವರು ಇಂದು ಜರುಗಿದ  ವಡಗಾಂವ ಶಾಖೆಯ ಮೂರನೆಯ ವಾಷರ್ಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.  ವಡಗಾಂವ ಶಾಖೆಯು ಮೂರು ವರ್ಷಗಳಲ್ಲಿ  5,39,78,642.00 ರೂ. ಠೇವು ಸಂಗ್ರಹಿಸಿ, 18,90,452.00 ರೂ. ಸಾಲ ವಿತರಿಸಿ ಮಾರ್ಚ 31 ವರೆಗೆ 6,11,793.00 ರೂ ಲಾಭಗಳಿಸಿದೆ ಎಂದು ಶಾಖಾ ವ್ಯವಸ್ಥಾಪಕರಾದ ಸುನೀಲ ಕುಮಾರ ಸಾವಳವಾಡೆ ಹೇಳಿದರು.

ಸಲಹಾ ಸಮಿತಿಯ ಸದಸ್ಯ ಸಂತೋಷ ಟೋಪಗಿ ಮಾತನಾಡಿ ಸಹಕಾರಿಯ ವಿವಿಧ ಸೇವೆಗಳಾದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಾಲ ಸಂಜೀವಣಿ ಠೇವು ಯೋಜನೆ, ಭಾಗ್ಯಜ್ಯೋತಿಠೇವು, ಮುದ್ದತಿಠೇವು, ರಿಕರಿಂಗಠೇವು, ಸೇರಿದಂತೆ ಆರ್ಟಿಜಿಎಸ್, ಮೋಬೈಲ್ ರಿಚಾರ್ಜ, ಬಸ್, ರೆಲ್ವೆ, ಮತ್ತು ವಿಮಾನ ಟೀಕೇಟ ಬುಕಿಂಗ ಹಾಗೂ ಪ್ಯಾನಕಾರ್ಡ ಸೇವೆ ಮತ್ತು ಎಲ್ಲ ರೀತಿಯ ಸಾಲ ಸೌಲಭ್ಯಗಳು ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. 

ಸಹಕಾರಿಯ ಪ್ರಧಾನ ವ್ಯವಸ್ಥಾಪಕರಾದ ದೇವೇಂದ್ರ ಕರೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಡಗಾಂವ ಶಾಖೆಯ  ಸ್ಥಳಿಯ ಸಲಹಾ ಸಮಿತಿಯ ಸದಸ್ಯರು, ಗ್ರಾಹಕರು, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿಯಾದ ಶಿಲ್ಪಾ ಹಲಗತ್ತಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

****