ಸಮಯ ಪ್ರಜ್ಞೆ ,ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಲು ಸಲಹೆ: ಎನ್.ತಿಪ್ಪೇಸ್ವಾಮಿ

ಹಾವೇರಿ: ಉಪಚುನಾವಣೆ  ಮತದಾನದ ಸಂದರ್ಭಲ್ಲಿ  ಯಾವುದೇ ಗೊಂದಲ ಗಲಾಟೆಗಳಿಗೆ ಅವಕಾಶವಿಲ್ಲದೆ ಸಮಯ ಪ್ರಜ್ಞೆ ಹಾಗೂ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ  ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಸಲಹೆ ನೀಡಿದರು.

ವಿಧಾನಸಭಾ ಉಪಚುನಾವಣೆಯ ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ ಭಾನುವಾರ ರಾಣೇಬೆನ್ನೂರಿನ ರಾಜರಾಜೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಎರಡನೇ ಹಂತದ ಒಂದು ದಿನದ ತರಬೇತಿ ಉದ್ದೇಶಿಸಿ ಅವರು ಮಾತನಾಡಿದರು. 

ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ನಿಯೋಜಿತಗೊಂಡಿರುವ ಅಧಿಕಾರಿಗಳಿಗೆ ಸಮಯಪ್ರಜ್ಞೆ ಇರಬೇಕು. ಶಿಸ್ತನ್ನು ಕಾಪಾಡಿಕೊಳ್ಳಬೇಕು. ಮತದಾನದ ಕೊಠಡಿಯೊಳಗೆ ಏಜೆಂಟರುಗಳು ಹಾಗೂ ಮತದಾರರ ಮೊಬೈಲ್ಗಳನ್ನು ಒಳಗಡೆ ಬೀಡಬಾರದು. ಪಿಆರ್ಓ ಹಾಗೂ ಎಪಿಆರ್ಓಗಳ ಮೊಬೈಲ್ನ್ನು ಸ್ವಿಚ್ಆಫ್ ಮಾಡಿಕೊಳ್ಳಬೇಕು. ಯಾವುದೇ ಸೆಲ್ಫಿಗಳಿಗೆ ಅವಕಾಶ ನೀಡಬಾರದು. ಮತದಾನ ನಡೆಯುವ ಕೋಣೆಯಲ್ಲಿ ಪೋಲಿಸರಿಗೆ ಪ್ರವೇಶ ನೀಡಬಾರದು. ಅವರು ಹೊರಗಡೆ ಕಾರ್ಯನಿರ್ವಹಿಸಬೇಕು. ಉಪಚುನಾವಣೆಯಲ್ಲಿ ಜವಬ್ದಾರಿಯುತರಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. 

  ರಾಣೇಬೆನ್ನೂರಿನ ತಹಶೀಲ್ದಾರರಾದ ಬಸನಗೌಡ ಕೋಟುರು ಅವರು ಮಾತನಾಡಿ ಮತದಾರರ ಯಾದಿ ನಿಖರ ಹಾಗೂ ಸ್ಪಷ್ಟ ಮಾಹಿತಿಯಿಂದ ಕೂಡಿರಬೇಕು. ಸರಿಯಾದ ಮಾಹಿತಿಯಿಂದ ಮಾಕ್ಪೋಲ್ ಸಟರ್ಿಫೀಕೆಟ್ ಕಡ್ಡಾಯವಾಗಿ ತುಂಬಬೇಕು. ಮತದಾರರು ಯಾವುದೇ ರೀತಿಯ ಗೊಂದಲಗಳನ್ನು ಮಾಡಿಕೊಳ್ಳದೇ ಅವರು ತಮ್ಮ ಮತವನ್ನು ಚಲಾಯಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತದಾರರು ಗಲಾಟೆಗಳನ್ನು ಮಾಡದಂತೆ ನೋಡಿಕೊಳ್ಳಬೇಕು. ಇವಿಎಂ ಮತ್ತು ವಿವಿಪ್ಯಾಟ್ ಮಶಿನ್ಗಳ ಬಗ್ಗೆ ಸರಿಯಾಗಿ ತರಬೇತಿಯಲ್ಲಿ ತಿಳಿದುಕೊಂಡು ಉಪಚುನಾವಣೆಯಲ್ಲಿ ಯಾವುದೇ ತಪ್ಪುಗಳು ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 

        ಎರಡನೇ ಹಂತದ ತರಬೇತಿಯಲ್ಲಿ ಉಪಚುನಾವಣೆಯಲ್ಲಿ ಎಂ3 ಮಶಿನ್ ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ತರಬೇತಿಯಲ್ಲಿ 1170 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.  

ಹಾವೇರಿ ತಹಶೀಲ್ದಾರ್ ಶಂಕರ್ ಬಾಕರ್ಿ, ರಾಣೇಬೆನ್ನೂರಿನ ಶಿಕ್ಷಣಾಧಿಕಾರಿಗಳಾದ ಶೀಧರ್ ಎನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಎಸ್.ಸಿ. ಪೀರಜಾದೆ, ಡಿಸ್ಟ್ರಿಕ್ ಮಾಸ್ಟರ್ ಟ್ರೇನರ್ ಶಬ್ಬೀರ್ ಮನಿಯಾರ್ ಚುನಾವಣಾ ಅಧಿಕಾರಿ ಕರಿಯಲ್ಲಪ್ಪ, ಸೆಕ್ಟರ್ ಆಫೀಸರ್ಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.