ಹಾವೇರಿ: ವಿದ್ಯಾರ್ಥಿಗಳ ಯಶಸ್ವಿ ಜೀವನವನ್ನು ರೂಪಿಸಿಕೊಳ್ಳಲು ಸಮಯಪ್ರಜ್ಞೆ ಹಾಗೂ ಶಿಸ್ತು ಮುಖ್ಯವಾಗಿದೆ ಎಂದು ಯುವ ಪರಿವರ್ತಕ ಈಶ್ವರ ಹುಣಸಿಕಟ್ಟಿ ಹೇಳಿದರು.
ಯುವ ಸ್ಪಂದನ ಕೇಂದ್ರ ಹಾವೇರಿ ಮತ್ತು ನಿಮ್ಹಾನ್ಸ್ ಬೆಂಗಳೂರು ಹಾಗೂ ಇಜಾರಿ ಲಕಮಾಪುರದ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ನಡೆದ ಯುವಸ್ಪಂದನ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅತಿಯಾದ ತಂತ್ರಜ್ಞಾನ ಬಳಕೆಯಿಂದ ಯುವಕರು ಸಮಯದ ಜ್ಞಾನವನ್ನು ಮರೆಯುತ್ತಿದ್ದಾರೆ. ದುಶ್ಚಟಗಳಿಂದ ದೂರ ಉಳಿದರೆ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಇಂದಿನ ಯುವಜನತೆ ಆದುನಿಕ ಯುಗದಲ್ಲಿ ಹೆಚ್ಚು ಗೊಂದಲಗಳು, ಮಾನಸಿಕ ಒತ್ತಡ ಮತ್ತು ಆತಂಕದಿಂದ ಭಯಪಡುತ್ತಾರೆ. ಯಾವುದೇ ಸಮಸ್ಯೆಗಳು ಬಂದರೂ ದೈರ್ಯದಿಂದ ಎದುರಿಸಬೆಕು. ಯುವಕರಿಗೆ ಮಾರ್ಗದರ್ಶನ ನೀಡಲು ಯುವಸ್ಪಂದನ ಕಾರ್ಯಕ್ರಮ ಜಾರಿಗೆ ಬಂದಿದೆ. ಇದರ ಸದುಪಯೋಗ ಪಡೆದುಕೊಳ್ಳಲು ದೂರವಾಣಿ ಸಂಖ್ಯೆ08375-232080 ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಯುವಸ್ಪಂದನ ಕೇಂದ್ರ ಸಹಾಯವಾಣಿ 18004251448 ಸಂಖ್ಯೆಗೆ ಕರೆಮಾಡಿ ವಿವರ ಪಡೆಯಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಪರಿವರ್ತಕಿ ಪ್ರತಿಭಾ ಹಡಗಲಿ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳಲ್ಲಿ ಉಪಸ್ಥಿತರಿದ್ದರು