ಬಹುಮುಖ ಸಂಸ್ಕೃತಿಯ ಆರಾಧಕ ಟಿಪ್ಪು: ವೀಣಾ ಕಾಶಪ್ಪನವರ

ಬಾಗಲಕೋಟೆ 10: ತನ್ನ ಅರಮನೆಯಿಂದ ಕೂಗಳತೆಯ ದೂರದ ಶ್ರೀರಂಗ ಪಟ್ಟಣದ ದೇವಾಲಯವಿದ್ದು, ಪ್ರತಿನಿತ್ಯ ಹೊರಡುವ ಮುನ್ನ ನಮಸ್ಕರಿಸಿ ಹಿಂದೂ ಧರ್ಮದ ಸಹಿಷ್ಣುತೆ ನೆಲೆಸಿ ತನ್ನ ಧರ್ಮ ಆರಾಧಿಸುವದರ ಜೊತೆಗೆ ಟಿಪ್ಪು ಒಬ್ಬ ಬಹುಮುಖಿ ಸಂಸ್ಕೃತಿ ಆರಾಧಕನಾಗಿದ್ದರು ಎಂದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಹಜರತ ಟಿಪ್ಪುಸುಲ್ತಾನರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ಮಾತನಾಡಿದ ಅವರು ಟಿಪ್ಪು ಕೇವಲ ಮೈಸೂರು ಪ್ರಾಂತ್ಯದ ರಾಜನಾಗಿರಲಿಲ್ಲ. ಅಖಂಡ ಕನರ್ಾಟಕಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅಂತಹ ಮಹಾನ್ ವ್ಯಕ್ತಿಯನ್ನು ಒಂದೂ ಸಮುದಾಯಕ್ಕೆ ಸೇರಿಸಿ ಮಾತನಾಡುವವರು ಸಂಕುಚಿತ ಮನಸ್ಥಿತಿ ಉಳ್ಳವರು ಎಂದರು.

ಅಂದಿನ ಕಾಲದಲ್ಲಿ ರಾಕೆಟ್ ತಂತ್ರಜ್ಞಾನ, ನೀರಾವರಿಯಲ್ಲಿ ಹೊಸ ಹೊಸ ಅವಿಷ್ಕಾರಗಳು ಕನ್ನಡ ನಾಡಿಗೆ ಕೊಡುವದರ ಜೊತೆಗೆ ರೇಷ್ಮೆಯನ್ನು ಪರಿಚಯಿಸಿದರು ಟಿಪ್ಪು ಎಂದರು. ಟಿಪ್ಪುವನ್ನು ರಾಜಕೀಯಕ್ಕೆ ಸೀಮಿತಗೊಳಿಸದೇ ಭವ್ಯ ಭಾರತ ದೇಶದ ಅನೇಕ ಮಹಾನ್ ರಾಜರು ನೀಡಿದ ಕೊಡುಗೆಗಳಲ್ಲಿ ಕನರ್ಾಟಕಕ್ಕೆ ವಿಶಿಷ್ಟ ಕೊಡುಗೆ ನೀಡಿದವರು ಎಂದರು. ಇಂತಹ ಮಹಾನ್ ವ್ಯಕ್ತಿಗಳ ಅನುಕರಣೆ ಮುಂದುವರೆಯಲಿ. ಸರ್ವ ಜನಾಂಗಕ್ಕು ಶಾಂತಿ ಸಂದೇಶ ದೊರೆಯಲಿ ಎಂಬ ಉದ್ದೇಶದರಿಂದ ಸರಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವ ಮೂಲಕ ಅವರಿಗೆ ಗೌರವ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಮಾನವತಾ ಪ್ರಶಸ್ತಿ ಹಾಗೂ ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲಿಕಾರ ಮಾತನಾಡಿ ಟಿಪ್ಪು ಮಹಾ ಮಾನವತಾವಾಧಿಯಾಗಿದ್ದು, ಮುಸ್ಲಿಂ ಧರ್ಮದಲ್ಲಿ ಜನಿಸಿದ್ದರೂ ಕೂಡಾ ಅನ್ಯ ಧರ್ಮಕ್ಕೆ ಗೌರವ ನೀಡುವಂತಹ ವ್ಯಕ್ತಿಯಾಗಿದ್ದರು. ಆ ದಿಶೆಯಿಂದಲೇ ತನ್ನ ಆಸ್ತಾನದಲ್ಲಿ ಪ್ರಮುಖ ಹುದ್ದೆಗಳಾದ ಪ್ರಧಾನಮಂತ್ರಿ ಸ್ಥಾನವನ್ನು ದಿವಾನ್ ಪೂರ್ಣಯ್ಯನವರಿಗೆ ಹಾಗೂ ರಕ್ಷಣಾ ಸಚಿವ ಸ್ಥಾನವನ್ನು ಸೋಮಯ್ಯ ಅಯ್ಯಂಗಾರ ಅವರಿಗೆ ಅತ್ಯುನ್ನತ ಸ್ಥಾನವನ್ನು ನೀಡಿ ಹಿಂದೂ ಧಮರ್ಿಯರ ಹಿತೈಶಿಗಳಾಗಿದ್ದರು ಎಂದರು.

ಟಿಪ್ಪು ಹಿಂದೂ ಧರ್ಮದ ಬಗ್ಗೆ ಅಪಾರ ಆರಾಧಕನಾಗಿದ್ದು, ತನ್ನ ಆಡಳಿತ ಅವಧಿಯಲ್ಲಿ ಶೃಂಗೇರಿ ಶಾರದಾಂಬೆ ಪೀಠಕ್ಕೆ ಬಂಗಾರದ ಕಳಸ ನೀಡಿದ್ದು, ಇಂದು ಕೂಡಾ ಅದನ್ನು ನಾವೆಲ್ಲರೂ ಗಮನಿಸಬಹುದಾಗಿದೆ. ಮೇಲುಕೋಟಿ ಚಲುವನಾರಾಣ ಸ್ವಾಮಿಗೆ ವಜ್ರಕಚಿತ ಪೀಠ ನೀಡಿದ್ದು, ತನ್ನ ಆಡಳಿತ ವ್ಯವಸ್ಥೆಯಲ್ಲಿ 12 ಜನರಲ್ಲಿ 8 ಜನ ಹಿಂದೂಗಳಿಗೆ ಪ್ರಮುಖ ಖಾತೆ ನೀಡುವದರ ಜೊತೆಗೆ ತಾವಾಳಿದ 38 ವರ್ಷಗಳ ಆಡಳಿತಾವಧಿಯಲ್ಲಿ ಮೈಸೂರ ಪ್ರಾಂತ್ಯವನ್ನು ಸಾರಾಯಿ ಮುಕ್ತ ಪ್ರಾಂತ್ಯ ಮಾಡಿದ ಕೀತರ್ಿ ಟಿಪ್ಪುವಿಗೆ ಸಲ್ಲಿತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ ಟಿಪ್ಪು ಒಬ್ಬ ಭಾಷಾ ಪ್ರೇಮಿಯಾಗಿದ್ದು, ಕನ್ನಡ ನಾಡು ನುಡಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಮಸ್ತ ಮುಸ್ಲಿಂ ಭಾಂದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಸಿ ಟಿಪ್ಪು ಅವರಿಗೆ ಗೌರವ ನೀಡಬೇಕೆಂದರು. ಕಾರ್ಯಕ್ರಮ ಪೂರ್ವದಲ್ಲಿ ಕಾರ್ಯನಿಮಿತ್ಯವಾಗಿ ಜಿಲ್ಲಾಧಿಕಾರಿಗಳು ಟಿಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ನಿರ್ಗಮಿಸಿದರು. 

ಕಾಯಾಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಸಮಾಜದ ಮುಖಂಡರಾದ ಎ.ಎ.ದಾಂಡಿಯಾ, ಎಂ.ಎಂ.ನಬಿವಾಲೆ, ಸಲೀಂ ಮೋಮಿನ್, ಕುತುಬುದ್ದಿನ ಖಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.