ಇಂದು ಹನುಮ ಜಯಂತಿ

ಹಾವೇರಿ18: ತಾಲೂಕಿನ ನೆಗಳೂರ ಗ್ರಾಮದಲ್ಲಿ ಇಂದು (ಏ.19)  ಹನುಮಜಯಂತಿ ಆಚರಿಸಲಾಗುವುದು. ಬೆಳಗ್ಗೆ  6 ಕ್ಕೆ ಹನುಮ ದೇವರಿಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾ ಮಂಗಳಾರುತಿ ವಿಶೇಷ ಅಲಂಕಾರ ಪೂಜಾ ಕೈಂಕರ್ಯ ಜರುಗುವುದು. ಬೆ. 10.30ಕ್ಕೆ . ಗ್ರಾಮದ ಮಾರುತಿ ದೇವಸ್ಥಾನದಿಂದ ಪ್ರಾರಂಭಗೊಳ್ಳುವ ಆಂಜನೇಯನ ಭಾವಚಿತ್ರದ ಮೇರವಣಿಗೆ  ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮಾರುತಿ ದೇವಸ್ಥಾನ ತಲುಪುವುದು. ನಂತರ ಅನ್ನ ಸಂರ್ತಪಣೆ ನೆರವೇರುವುದು. ಎಂದು ಆಯೋಜಕರು ಪ್ರಕಟಣೆ ತಿಳಿಸಿದ್ದಾರೆ.