ಹಾವೇರಿ: ಆಧುನಿಕ ತಂತ್ರಜ್ಞಾನ, ವಿಜ್ಞಾನ, ಜಾಗತಿಕ ಸಮಾಜದಲ್ಲಿ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತದಂತಹ ಜನಪದ ಕಲೆಗಳು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯುವಜನಾಂಗವನ್ನು ಸೆಳೆಯುವ ನಿಟ್ಟಿನಲ್ಲಿ ಈ ಕಲಾಪ್ರಕಾರಗಳಿಗೆ ಹೊಸರೂಪ ನೀಡಲು ಚಿಂತನೆ ನಡೆಸಬೇಕಾಗಿದೆ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು ಹೇಳಿದರು.
ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಕನರ್ಾಟಕ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಹಮ್ಮಿಕೊಂಡ ದೊಡ್ಡಾಟ ಸಂಗೀತ-ಕುಣಿತಗಳ ಕಾಯರ್ಾಗಾರ ಮತ್ತು ದಾಖಲೀಕರಣ ಎಂಬ ಕಾರ್ಯಕ್ರಮವನ್ನು ಮದ್ದಳೆ ಬಾರಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳಾದ ರಂಗಕಲೆಗಳು, ಜನಪದ ಕಲೆಗಳು ಆಧುನಿಕ ಮಾಧ್ಯಮಗಳೊಂದಿಗೆ ಸ್ಪಧರ್ೆ ಪೈಪೋಟಿಯನ್ನು ನಡೆಸಬೇಕಾಗಿದೆ.ಇಂದಿನ ಪೀಳಿಗೆ ಪರಂಪರಾಗತ ಕಲೆಗಳತ್ತ ಆಕರ್ಷಕರಾಗದೇ ಆಧುನಿಕ ಮಾಧ್ಯಮಗಳಾದ ಮೊಬೈಲ್, ಡಿಜೆ ಸೌಂಡಿನತ್ತ ಆಕರ್ಷಕರಾಗುತ್ತಿದ್ದಾರೆ. ಈ ಅಭಿರುಚಿಯನ್ನು ಬದಲಾಯಿಸಿ ನಮ್ಮ ಕಲೆಗಳ ಸಾಹಿತ್ಯ ಮತ್ತು ಕುಣಿತಕ್ಕೆ ದಾಸರನ್ನಾಗಿ ಮಾಡಬೇಕಾದ ಜವಾಬ್ದಾರಿ ವಿಶ್ವವಿದ್ಯಾಲಯ ಹಾಗೂ ಅಕಾಡೆಮಿಗಳದಾಗಿದೆ. ಸಣ್ಣಾಟದಂತಹ ಗಂಡು ಕಲೆಗಳನ್ನು ಸಂರಕ್ಷಿಸುವಂತಹ, ಉಳಿಸುವಂತಹ, ಬೆಳೆಸುವಂತಹ ಹಾಗೆ ಯುವ ಸಮುದಾಯವನ್ನು ಸೆಳೆಯುವಂತಹ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಹೇಳಿದರು.
ಜನಪದ ಕಲೆಗಳನ್ನು ಉಳಿಸುವುದು ಇಂದಿನ ಸಮಾಜಕ್ಕೆ ಸವಾಲಾಗಿದ್ದು, ಈ ನೆಲೆಯಲ್ಲಿ ದೊಡ್ಡಾಟದ ಚಿಂತನೆ, ಆಲೋಚನೆ, ಸಂಶೋಧನೆ, ಸಮಗ್ರ ಅಧ್ಯಯನ ಹಾಗೂ ದಾಖಲೀಕರಣದ ಜೊತೆಗೆ ಯುವಜನಾಂಗವನ್ನು ನಮ್ಮ ಜಾನಪದ ಕಲಾ ಪರಂಪರೆ ಆಕಷರ್ಿಸಲು ಯಾವ ರೀತಿಯಲ್ಲಿ ಪರಿಷ್ಕರಣೆಗೊಳಪಡಿಸಬೇಕು ಎಂಬ ಚಿಂತನೆ ಈ ಕಾಯರ್ಾಗಾರದಲ್ಲಿ ನಡೆಯಬೇಕಾಗಿದೆ. ಕಾಯರ್ಾಗಾರ, ವಿಚಾರಸಂಕಿರಣಗಳ ಮೂಲಕ ಪರಿಷ್ಕರಣೆ ಮಾಡಿ ಹೊಸಕಾಯಕಲ್ಪದಿಂದ ಏಕಸ್ವರೂಪ ನೀಡುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನರ್ಾಟಕದ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ, ಟಿ.ಬಿ.ಸೊಲಬಕ್ಕನವರ ಮಾತನಾಡಿ, ಸರಕಾರ ನನಗೆ ಜವಬ್ದಾರಿಯನ್ನು ವಹಿಸಿದೆ ಹಾಗಾಗಿ ಈ ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಾರ್ವಜನಿಕರ, ಶಾಲಾ-ಕಾಲೇಜುಗಳ, ಸಂಘ-ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ನೆರವೇರಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳುತ್ತಾ ಎಲ್ಲರ ಸಹಕಾರ ಅನಿವಾರ್ಯವಿದೆ ಎಂಬುದನ್ನು ಮನಗಾಣಿಸಿದರು.
ಇಂತಹ ಕಲೆಯಿಂದ ಯುವಕರು ಮತ್ತು ಮಕ್ಕಳು ಯಾಕೆ ದೂರಾಗುತ್ತಿದ್ದಾರೆ ಎಂಬುದಕ್ಕೆ ತಂದೆ-ತಾಯಿಗಳು ಸಹ ಪ್ರಮುಖ ಕಾರಣ. ಆ ರುಚಿಯನ್ನು ನಮ್ಮ ಮಕ್ಕಳಿಗೆ ನಾವು ಬಾಲ್ಯದಲ್ಲಿ ತಿಳಿಸಲೇ ಇಲ್ಲ. ರ್ಯಾಂಕ್ ಎಂಬ ಅಂಕಗಳ ಹುಚ್ಚನ್ನೇ ಹಚ್ಚಿಸಿ ಅವರಿಗೆ ನಮ್ಮ ಕಲೆಯನ್ನು ವಂಚಿಸುತ್ತಿದ್ದೇವೆ ಎಂದು ಪಾಲಕರನ್ನು ಎಚ್ಚರಿಸಿದರು.
ಹಾವೇರಿ ಜಿಲ್ಲಾ ವಾತರ್ಾ ಇಲಾಖೆಯ ಅಧಿಕಾರಿಗಳಾದ ಡಾ. ಬಿ.ಆರ್. ರಂಗನಾಥ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಬಯಲುಸೀಮೆಯ ಕಲಾವಂತಿಕೆಯು ನಿರ್ಲಕ್ಷಕ್ಕೆ ಒಳಗಾಗಿವೆ ಇವುಗಳನ್ನು ಎಚ್ಚರಿಸುವಂತಹ ಜಾಣ್ಮೆ ನಮ್ಮಲ್ಲಿ ಆಗಬೇಕಾಗಿದೆ ಎಂದರು.
ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಎಂ.ಎನ್.ವೆಂಕಟೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ಸವ ರಾಕ್ ಗಾರ್ಡನ್ನಿನ ಉತ್ಸವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿಗಳು ದೊಡ್ಡಾಟ ಪ್ರಾತ್ಯಕ್ಷೀಕೆ ನೀಡಿದರು.
ವಿಶ್ವವಿದ್ಯಾಲಯದ ಕಲಾ ಶಿಕ್ಷಕರಾದ ಶರೀಫ ಮಾಕಪ್ಪನವರ ಪ್ರಾಥರ್ಿಸಿದರು, ಈ ಕಾರ್ಯಕ್ರಮದಲ್ಲಿ ನಾನಾ ಪ್ರದೇಶದ ದೊಡ್ಡಾಟ ಕಲಾವಿದರು, ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ, ಬೋಧಕೇತರ ವರ್ಗ, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಡಾ. ಹೆಚ್ ಹೆಚ್ ನಧಾಫ್ ಕಾರ್ಯಕ್ರಮ ನಿರ್ವಹಿಸಿದರು. ಕನರ್ಾಟಕ ಬಯಲಾಟ ಅಕಾಡೆಮಿಯ ಸದಸ್ಯರಾದ ಡಾ. ಕೆ ರುದ್ರಪ್ಪ ಅವರು ಎಲ್ಲರಿಗೂ ವಂದನೆ ಸಲ್ಲಿಸಿದರೆ, ಡಾ.ಚಂದ್ರಪ್ಪ ಸೊಬಟಿ ಅವರು ಕಾರ್ಯಕ್ರಮ ನಿರೂಪಿಸಿದರು.