ಬೆಳಗಾವಿ, 14: ಸರಕು ಸಾಗಾಣಿಕೆ ಮಾಡುವ ಹಾಗೂ ಕನ್ಸ್ಟ್ರಕ್ಷನ್ ಇಕ್ವಿಪಮೆಂಟ ವಾಹನಗಳಲ್ಲಿ ಕಾಮರ್ಿಕರನ್ನು ಮತ್ತು ವಿಧ್ಯಾರ್ಥಿ ಗಳನ್ನು ಸಾಗಿಸುವುದು ಅಪರಾಧ ಹಾಗೂ ಅದೊಂದು ಅಮಾನವಿಯ ಕೃತ್ಯ. ಯಾವುದೇ ಒಂದು ಸಾರ್ವಜನಿಕ ಹಿತಾಸಕ್ತಿ ಆದೇಶ ಪಾಲನೆ ಮಾಡಲು ಇಲಾಖೆ ಅಧಿಕಾರಿಗಳ ಜೊತೆಗೆ ಕಾರ್ಮಿ ಕರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಕಾಮರ್ಿಕ ಇಲಾಖೆಯ ಸಹಾಯಕ ಕಾರ್ಮಿ ಕರ ಆಯುಕ್ತರಾದ ನಾಗೇಶ ಡಿ.ಜಿ ರವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಮರ್ಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್.ಡಬ್ಲೂ.ಕೆ.ಆರ್.ಟಿ.ಸಿ, ಮಾಲೀಕರ ಹಾಗೂ ಕಾಮರ್ಿಕ ಸಂಘಟನೆಗಳು, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರಕು ಸಾಗಾಣಿಕೆ (ಗೂಡ್ಸ್) ಹಾಗೂ ಕನ್ಸ್ಟ್ರಕ್ಷನ್ ಇಕ್ವಿಪಮೆಂಟ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕಾಮರ್ಿಕರನ್ನು ಮತ್ತು ವಿಧ್ಯಾರ್ಥಿ ಗಳನ್ನು ಪ್ರಯಾಣಿಕರಂತೆ ಸಾಗಿಸುವುದನ್ನು ನಿರ್ಬಂಧಿಸುವ ಕುರಿತು ಮೇ 14 ರಂದು ಪ್ರಗತಿ ಇಂಜನೀಯರಿಂಗ್ ವಕ್ರ್ಸ, ವಾಘವಡೆ ರಸ್ತೆ, ಬೆಳಗಾವಿಯಲ್ಲಿ ಕಾನೂನು ಅರಿವು-ನೆರವು ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಕು ಸಾಗಾಣಿಕೆ ವಾಹಣಗಳಲ್ಲಿ ಪ್ರಯಾಣ ಮಾಡುವುದರಿಂದ ಒಂದು ವೇಳೆ ಅಂತಹ ವಾಹನಗಳು ಅಪಘಾತಕ್ಕಿಡಾದಾಗ ಅಶಕ್ತರಾದವರಿಗೆ ಹಾಗೂ ಮೃತರ ಅವಲಂಬಿತರಿಗೆ ಯಾವುದೇ ವಿಮೆಗಳು ದೊರೆಯುವುದಿಲ್ಲ ಇದರಿಂದ ಅಂತಹ ಕುಟುಂಬಗಳು ತೊಂದರೆಗೊಳಗಾಗುತ್ತವೆ.
ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಇವರಿಗೆ ಬೇಡಿಕೆ ಸಲ್ಲಿಸಿ ಬಸ್ಸುಗಳಿಲ್ಲದ ಕಡೆಗೆ ಬಸ್ಸ ಸೇವೆ ಓದಗಿಸಲು ಕೋರಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯವರು ಎಲ್ಲ ಬಗೆಯ ಉದ್ಯೋದಾತರುಗಳಿಂದ ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಬಸ್ಸಗಳ ಅವಶ್ಯಕ ಮಾರ್ಗಗಳ ಹಾಗೂ ವೇಳೆಯ ಬಗ್ಗೆ ಮಾಹಿತಿ ಪಡೆದು ಬಸ್ ಓಡಿಸುವಂತೆ ಕೋರಲಾಗುವುದು.
ಸಾರಿಗೆ ಇಲಾಖೆಯವರು ಅಂತಹ ವಾಹನಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಾರೆ ಹಾಗೂ ಸಾರಿಗೆ ಇಲಾಖೆ, ಕಾಮರ್ಿಕ ಇಲಾಖೆ ಶಿಕ್ಷಣ ಇಲಾಖೆ, ಪೊಲೀಸ ಇಲಾಖೆರವರು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಸಕರ್ಾರಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಥಿತಿಗಳಾದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್.ಸಿ.ಕಟ್ಟಿಮನಿಯವರು ಮಾತನಾಡಿ ತಮ್ಮ ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಆಟೋಗಳಲ್ಲಿ ಅವಶ್ಯಕತೆಗೂ ಮೀರಿ ಮಕ್ಕಳ ಸಂಖ್ಯೆ ಇದ್ದಲ್ಲಿ ಸಂಬಂದಿಸಿದ ಅಧಿಕಾರಿಯವರೊಂದಿಗೆ, ಆಟೋ ಚಾಲಕರೊಂದಿಗೆ ಮಾತನಾಡಲು ತಿಳಿಸಿದರು. ಈ ಕುರಿತಾಗಿ ಶಿಕ್ಷಣ ಇಲಾಖೆಯಿಂದ ಈಗಾಗಲೇ ಸುತ್ತೋಲೆಯನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕು ಬಿ.ಇ.ಓ ಗಳಿಗೆಕಳುಹಿಸಲಾಗಿದೆ ಎಂದರು.
ಅಥಿತಿ ಉಪನ್ಯಾಸಕರಾಗಿ ಆಗಮಿಸಿದ ಆರ್.ಬಿ ನದಾಫರವರು ಮಾತನಾಡುತ್ತ ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ದುಡಿಯುವುದು ಹೊಟ್ಟೆಗಾಗಿ, ಬಟ್ಟೆಗಾಗಿ, ತಮ್ಮ ಕುಟುಂಬದ ನಿರ್ವಹನೆಗಾಗಿ ದುಡಿಯುಲು ಹೊರಗೆ ಹೋಗುವ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವ ಸಂದರ್ಬಗಳಲ್ಲಿ ಸರಕು ವಾಹನಗಳನ್ನು ಬಳಸುವುದು ಸವರ್ೆ ಸಾಮಾನ್ಯ ಆದರೆ ಆ ರೀತಿ ಪ್ರಯಾಣಿಸುವ ಸಂದರ್ಭದಲ್ಲಿ ಜೀವಹಾನಿಯಾದರೆ ನಮ್ಮನ್ನು ನಂಬಿರುವ ಕುಟುಂಬದ ಗತಿ ಏನು? ಅಂತಹ ಸಮಸ್ಯೆ ಬರುವ ಮುಂಚೆ ಸಾರ್ವಜನಿಕರು ಒಂದುಗೂಡಿ ಸಾರಿಗೆ ವ್ಯವಸ್ಥೆ, ಸಾಮಾನ್ಯ ವಾಹನ ಗಳಲ್ಲಿ ಪ್ರಯಾಣಿಸುವುದು ಒಳ್ಳೆಯವು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿ ಕ ನಿರೀಕ್ಷಕರಾದ ವಿನುತಾ, ಸುಧಾ, ಅನಿಲ ಬಗಟಿ, ಪ್ರಗತಿ ಇಂಜನೀಯರಿಂಗ್ನ ಆಡಳಿತ ಮತ್ತು ಕಾಮರ್ಿಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಪ್ರಗತಿ ಇಂಜನೀಯರಿಂಗ್ ವ್ಯವಸ್ಥಾಪಕರಾದ ಶಿವರಾಜ ಪಾಟೀಲ್ ಸ್ವಾಗತಿಸಿದರು.
ಜಿಲ್ಲಾ ಬಾಲಕಾಮರ್ಿಕ ಯೋಜನಾ ನಿದರ್ೇಶಕರಾದ ಜ್ಯೋತಿ ಎಂ.ಕೆ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.