ಜಮ್ಮು ಕಾಶ್ಮೀರದ ದಾಳಿಯಲ್ಲಿ ಹುತ್ಮಾತರಾದವರಿಗೆ ಶ್ರದ್ಧಾಂಜಲಿ

Tributes paid to those martyred in Jammu and Kashmir attack

ಗದಗ 23: ನಗರದ ಗಾಂಧಿ ವೃತ್ತದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹಾಗೂ ಅಮಾನವೀಯವಾಗಿ ನಡೆದ ದಾಳಿಯಲ್ಲಿ ಹುತ್ಮಾತರಾದ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗಳಿಗೆ ಶ್ರೀರಾಮ ಸೇನಾ, ಆಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ವತಿಯಿಂದ ದೀಪ ಬೆಳಗಿಸಿ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಕಾಂಗ್ರೆಸ್ ನಾಯಕರು ಈ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡದಿರುವುದು ಖಂಡನೀಯ ಹಾಗೂ ಇವರ ಈ ವರ್ತನೆಯಿಂದ ಭಯೋತ್ಪಾಕದರ ಮೇಲೆ ಮೃದುಧೋರಣೆ ತೋರುತ್ತಿರುವುದು ಎದ್ದು ಕಾಣುತ್ತದೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.      

ಮುಸ್ಲಿಂ ಸಮುದಾಯ ವಕ್ಫ್‌ ಬೋರ್ಡ ವಿರುದ್ಧ ಹೋರಾಟ ಮಾಡುತ್ತದೆ ಆದರೆ ಈ ಭಯೋತ್ಪಾದಕರ ಕೃತ್ಯದ ವಿರುದ್ಧ ಯಾವುದೇ ರೀತಿಯ ಹೋರಾಟ ಹಾಗೂ ಪ್ರತಿಕ್ರಿಯೆ ನೀಡದಿರುವುದು ಅವರ ಧರ್ಮದ ಬಗ್ಗೆ ಇರುವ ಕಾಳಜಿ ತೋರುತ್ತದೆ ಜೊತೆಗೆ ಭಯೋತ್ಪಾದಕರ ಪರವಾಗಿದೆ ಎಂಬುದು ಕಣ್ಣಿಕೆ ಕಾಣುತ್ತಿದೆ.ಭಯೋತ್ಪಾಧಕರ ಈ ಕೃತ್ಯಕ್ಕೆ ತಕ್ಕ ಪ್ರತ್ಯುತರ ನೀಡಬೇಕು ಅದು ಯುದ್ಧ ಸಾರುವ ಮೂಲಕವಾದರೂ ಸರಿ ಎಂದು  ರಾಜು ಖಾನಪ್ಪನವರ ಮಾತನಾಡಿದರು.     ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ದಲಿತ ಮುಂಖಡರಾದ ಮಂಜುನಾಥ ಕೋಟ್ನಿಕಲ್, ರಾಘವೇಂಧ್ರ ಪರಾಪೂರ, ಸುರೇಶ ಹಾದಿಮನಿ,ಶ್ರೀರಾಮ ಸೇನಾ ಹಾಗೂ ಆಟೋ ಸೇನೆ, ದಲಿತ ಮಿತ್ರ ಮೇಳದ ಪ್ರಮುಖರಾದ ಮಹೇಶ ರೋಖಡೆ, ಹುಲಗಪ್ಪ ವಾಲ್ಮೀಕಿ, ಕಿರಣ ಹಿರೇಮಠ, ಸತೀಶ ಕುಂಬಾರ, ವೆಂಕಟೇಶ ದೊಡ್ಡಮನಿ, ರಾಚೋಟಿ ಕಾಡಪ್ಪನವರ, ಶರಣೇಶ ರಾಜು ಗದ್ದಿ, ಬಸವರಾಜ ಕುರ್ತಕೋಟಿ, ವಿಶ್ವನಾಥ ಶೀರಿ, ಸಂಜೀವ ಚೆಟ್ಟಿ, ಸುನೀಲ ಮುಳ್ಳಾಳ, ಈರಣ್ಣ ಗಾಣಿಗೇರ, ಶಿವಯೋಗಿ ಹಿರೇಮಠ, ಸ್ವರೂಪ ಉಳ್ಳಿಕಾಶಿ, ಮೌನೇಶ ದಾಸರ, ಮಂಜುನಾಥ ಗುಡಿಮನಿ, ಶರಣಪ್ಪ ಲಕ್ಕುಂಡಿ, ಕುಮಾರ ಮಿಟ್ಟಿಮಠ, ಶಶಿಧರ ಘಟ್ಟಿ, ಅಶೋಕ ಭಜಂತ್ರಿ, ಶ್ರೀನಿವಾಸ ನಿಂಬಲಗುಂಡಿ, ರೇಖಾ ಹುಲ್ಲೂರ ಇಟಗಿ ಹಾಗೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದರು.      

ಡೋಂಗಿ ​‍್ರಚಾರೀಪ್ರಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಶ್ರೀರಾಮ ಸೇನಾ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟ ಮಾಡುವ ಸಂಧರ್ಭದಲ್ಲಿ ಕಂಡು ಕಾಣದಂತೆ ಸುಮ್ಮನೆ ನಿಂತು ಮೂಖ ಪ್ರೇಕ್ಷಕರಂತೆ ವರ್ತಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಂಃಗಿಕ) ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು. ಒಟ್ಟಿಗೆ ಹೋರಾಟ ಮಾಡಲು ಆಹ್ವಾನಿಸಿದರೆ  ನಮ್ಮ ಹಿರಿಯರು ಪ್ರತ್ಯೇಕವಾಗಿ ಹೋರಾಟ ಮಾಡಲು ಹೇಳಿದ್ದಾರೆ ಹಾಗೂ ನಮ್ಮ ಬಗ್ಗೆ ತಪ್ಪು ತಿಳಿಯುತ್ತಾರೆ ಎಂದು ಪ್ರತ್ಯುತರ ನೀಡಿದರು ಇದು ಖಂಡನಾರ್ಹ ವಿಷಯ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಮುಖ್ಯಧೇಯ ಸಾಮಾಜಿಕ ಸೇವೆಯೋ ಅಥವಾ ಪ್ರಚಾರವೋ ಎಂಬುದು ತಿಳಿಯದಾಗಿದೆ. ಈ ಕೂಡಲೇ ಸಂಬಂಧಪಟ್ಟ ಸಂಘಟನೆ ವರಿಷ್ಠರು ಗಮನ ಹರಿಸಿ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಗದಗ ಜಿಲ್ಲೆಯ ವ್ಯಾಪ್ತಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ಜೊತೆಗೆ ಯಾವುದೇ ಹೋರಾಟಕ್ಕೆ ಶ್ರೀರಾಮ ಸೇನಾ ಕೈಜೊಡಿಸುವುದಿಲ್ಲ ಎಂದು ಎಚ್ಚರಿಸುತ್ತದೆ.    "ರಾಜು ಖಾನಪ್ಪನವರ"ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಸೇನಾ ಕರ್ನಾಟಕ, ಗದಗ.