ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ
ಕಂಪ್ಲಿ:ಮೇ.20. ಏಕಪಕ್ಷೀಯವಾಗಿ ಕಂಪ್ಲಿ ತಾಲೂಕು ಸಂಚಾಲರನ್ನು ಆಯ್ಕೆ ಮಾಡಿರುವ ನಿರ್ಧಾರಕ್ಕೆ ಬಹುತೇಕವಾಗಿ ಪದಾಧಿಕಾರಿಗಳ ಸಹಮತ ಇಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ)ಯ ಮುಖಂಡ ಮರಿಸ್ವಾಮಿ ಆರೋಪಿಸಿದರು.
ಅವರು ಸೋಮವಾರ ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಯವರು ಕೂಲಂಕುಶವಾಗಿ ಪರೀಶೀಲಿಸದೇ, ಕಾರ್ಯಕರ್ತರ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಏಕಪಕ್ಷೀಯ ನಿರ್ಧಾರದಿಂದ ಕಂಪ್ಲಿ ತಾಲೂಕು ಸಮಿತಿಗೆ ಗ್ರಾಮೀಣ ಭಾಗದವರನ್ನು ಸಂಚಾಲರನ್ನಾಗಿ ಆಯ್ಕೆ ಮಾಡಿದ್ದಾರೆ. ಕಂಪ್ಲಿ ನಗರದ ಕಾರ್ಯಕರ್ತರಿಗೆ ತಾಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡಿದರೆ, ಗ್ರಾಮೀಣ ಭಾಗದವರನ್ನು ಕರೆದುಕೊಂಡು, ಸಂಘಟನೆ ಕಟ್ಟಬಹುದು. ಆದರೆ, ಕಂಪ್ಲಿ ಕೇಂದ್ರದಲ್ಲಿರುವವರನ್ನು ಕಡೆಗಣಿಸಿ, ಗ್ರಾಮೀಣ ಭಾಗದವರನ್ನು ತಾಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಡಿಎಸ್ಎಸ್ ಸಮಿತಿಯ ವಿಭಾಗೀಯ ಸಂಚಾಲಕ ಮುಂಡ್ರಿಗಿ ನಾಗರಾಜ ಅವರು ಮಧ್ಯಪ್ರವೇಶಿಸಿ, ಎಚ್.ಶ್ರೀನಿವಾಸ ಅವರನ್ನು ತಾಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಕಾರ್ಯಕರ್ತ ಎಚ್.ಶ್ರೀನಿವಾಸ ಮಾತನಾಡಿ, ಗ್ರಾಮೀಣ ಭಾಗದವರ ಆಯ್ಕೆಗೆ ಬಹಳಷ್ಟು ಕಾರ್ಯಕರ್ತರ ವಿರೋಧವಿದೆ. ದಲಿತ ಸಂಘರ್ಷ ಸಮಿತಿಯ ಬಲವರ್ಧನೆಗೆ ಸೂಕ್ತ ವ್ಯಕ್ತಿಗಳಿಗೆ ಸಂಚಾಲಕ ಸ್ಥಾನ ನೀಡಬಹುದಿತ್ತು. ಆದರೆ, ಜಿಲ್ಲಾ ಸಮಿತಿಯವರು ಪರೀಶೀಲಿಸದೇ, ಏಕಾಏಕಿ ನೀಡಿರುವ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಆದ್ದರಿಂದ ಮತ್ತೊಮ್ಮೆ ಕೂಲಂಕುಷವಾಗಿ ಪರೀಶೀಲಿಸಿ, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸೂಕ್ತ ಕಾರ್ಯಕರ್ತರಿಗೆ ನೀಡಬೇಕು. ಈಗಿನ ತಾಲೂಕು ಸಂಚಾಲಕರು ಸಮಿತಿಯಲ್ಲಿ ಹಲವು ಸ್ಥಾನಗಳು ಪಡೆದು, ಅಧಿಕಾರ ನಡೆಸಿದ್ದಾರೆ.
ಕಂಪ್ಲಿ ನಗರದ ಕಾರ್ಯಕರ್ತರಿಗೆ ತಾಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡಿದರೆ, ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಮೂಲಕ ಸಮಿತಿಗೆ ಏಳಿಗೆಗೆ ಶ್ರಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಎನ್.ಗಂಗಣ್ಣ, ಜಿ.ಯಲ್ಲಪ್ಪ, ಶೇಖರ್, ಹನುಮಂತ, ಮುದ್ದಾಪುರ ಯಲ್ಲಪ್ಪ, ಮಾರೇಶ, ಎಚ್.ಶ್ರೀನಿವಾಸ, ಗೋಪಿನಾಥ, ದುರ್ಗೇಶ್, ಪಿ.ಶಂಭುಲಿಂಗ, ಎಂ.ಡಿ.ಕ್ಯಾಂಪ್ ಬಾಬು, ಹುಲುಗಪ್ಪ ಇದ್ದರು.