ವಾಷಿಂಗ್ಟನ್, ಫೆಬ್ರವರಿ 10, ನಿರಾಶ್ರಿತರ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ತಿಂಗಳ ಅಂತ್ಯಕ್ಕೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.ನಾಲ್ಕು ದಶಕಗಳ ಕಾಲ ಅಫ್ಘಾನ್ ನಿರಾಶ್ರಿತರು ದೇಶದಲ್ಲಿರುವುದನ್ನು ಗುರುತಿಸಲು ಪಾಕಿಸ್ತಾನವು ಈ ತಿಂಗಳ ಕೊನೆಯಲ್ಲಿ ಅಂತಾರಾರಾಷ್ಟ್ರೀಯ ಸಮಾವೇಶವನ್ನು ನಡೆಸಲಿದೆ ಎಂದು ಇಸ್ಲಾಮಾಬಾದ್‌ನಲ್ಲಿ ಅಧಿಕೃತ ಹೇಳಿಕೆ ತಿಳಿಸಿದೆ ಎಂದು ಡಾನ್ ಪತ್ರಿಕೆ ಸೋಮವಾರ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ 40 ವರ್ಷಗಳ ಅಫಘಾನ್ ನಿರಾಶ್ರಿತರ ಉಪಸ್ಥಿತಿ: ಒಗ್ಗಟ್ಟಿನ ಹೊಸ ಪಾಲುದಾರಿಕೆ” ಎಂಬ ಎರಡು ದಿನಗಳ ಸಮ್ಮೇಳನ ಇದೇ 17-18 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಪ್ರಧಾನಿ ಇಮ್ರಾನ್ ಖಾನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉಲ್ಲೇಖ ಮಾಡಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಹೆಚ್‌ಸಿಆರ್) ಸಮ್ಮೇಳನವನ್ನು ಏರ್ಪಡಿಸಿರುವುದರಿಂದ ಪ್ರಧಾನ ಕಾರ್ಯದರ್ಶಿ ಮತ್ತು ಇತರೆ ಪ್ರಮುಖ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ ಎಂದೂ ನ್ಯೂಯಾರ್ಕ್ ಮೂಲಗಳು ತಿಳಿಸಿವೆ. ಜೊತೆಗೆ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ಅಂತಾರಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆಗಳು ಮತ್ತು ಪ್ರಮುಖ ಸರ್ಕಾರೇತರ ಸಂಸ್ಥೆಗಳು ಸಹ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನವನ್ನು ಮತ್ತಷ್ಟು ಚುರುಕು ಮಾಡುವುದು ಇದರ ಗುರಿಯಾಗಿದೆ.