ಲೋಕದರ್ಶನ ವರದಿ
ಮುಧೋಳ 9: ಮುಧೋಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಅನಧೀಕೃತ ಕಟ್ಟಡಗಳ ತೆರವು ಕಾಯರ್ಾಚರಣೆಬುಧವಾರ 14ನೇ ದಿನಕ್ಕೆ ಮುಂದುವರೆದಿದೆ.ನಗರದ ಬಸ್ ನಿಲ್ದಾಣ ಕಪೌಂಡಿಗೆ ಹೊಂದಿಕೊಂಡಿರುವ ಬಾಪೂಜಿ ಕಾಂಪ್ಲೆಕ್ಸ್ನ 20ಕ್ಕೂ ಹೆಚ್ಚು ಅಂಗಡಿಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸಲಾಯಿತು.
ಈ ಬಗ್ಗೆ ಅಂಗಡಿಕಾರರಿಗೆ ಒಂದು ದಿನ ಮುಂಚಿತವಾಗಿ ತೆರವುಗೊಳಿಸುವಂತೆ ನಗರಸಭೆಯವರು ನೋಟೀಸ್ ಜಾರಿಗೊಳಿಸಿದ್ದರು. ಅದರಂತೆ ಎಲ್ಲ ಅಂಗಡಿಕಾರರು ತಮ್ಮ ಸಾಮಾನು ಮತ್ತು ಸರಂಜಾಮ್ಗಳನ್ನು ಬುಧವಾರ ಬೆಳಗಿನ ಜಾವದವರೆಗೆ ತೆರವುಗೊಳಿಸಿದ ನಂತರ ನಗರಸಭೆ ವತಿಯಿಂದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಈ ಕಟ್ಟಡಗಳ ತೆರವುಗೊಳಿಸುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚಚರ್ೆಗೆ ಗ್ರಾಸವಾಗಿತ್ತು.
ಮುಂದುವರೆದ ಧರಣಿ ಸತ್ಯಾಗ್ರಹ
ನಗರದ ಬಸವೇಶ್ವರ ಸರ್ಕಲ್ ಮುಂದಗಡೆ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ಮುಧೋಳ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿಧರ್ಿಷ್ಠಾವಧಿ ಧರಣಿ ಸತ್ಯಾಗ್ರಹ ಬುಧವಾರ 14ನೇ ದಿನಕ್ಕೆ ಮುಂದುವರೆದಿದೆ