ಮೇ. 5ರಿಂದ ವೀರಭದ್ರೇಶ್ವರ ಜಾತ್ರೆ ಪ್ರಾರಂಭ

Veerabhadreshwara fair begins from May 5th

ನೇಸರಗಿ, 27: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಮೇ. ದಿ. 5 ರಿಂದ ದಿ. 9 ವರೆಗೆ ಜರುಗಲಿದೆ.  

ಮೇ. 5 ರಂದು ಸಂಜೆ 4 ಘಂಟೆಗೆ ಕಳಸಾರೋಹಣ ನೆರವೇರುವದು. ಮೇ. 6 ರಂದು ಗ್ರಾಮದೇವಿಯರಿಗೆ ಉಡಿ ತುಂಬುವದು. ಮೇ. 7 ರಂದು ಬೆಳಿಗ್ಗೆ 7 ಘಂಟೆಗೆ  ನೇಸರಗಿ ಮಲ್ಲಾಪೂರದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಹಣಬರಹಟ್ಟಿಯ ಶ್ರೀ ಬಸವಲಿಂಗ ಶಿವಾಚಾರ್ಯರ ಸಾನಿಧ್ಯದಲ್ಲಿ ಉಚಿತ  ಸಾಮೂಹಿಕ ರವಿ ಗುಗ್ಗಳೋತ್ಸವ ಏರಿ​‍್ಡಸಲಾಗಿದೆ.  

ಗುಗ್ಗಳೋತ್ಸವ ಕಾರ್ಯಕ್ರಮದಲ್ಲಿ ಪುರವಂತರಿಂದ ಒಡಪು, ಒಡಪು, ವೀರಗಾಸೆ, ಗೊಂಬೆ ಕುಣಿತ ನಡೆಯಲಿದೆ. ಸಂಜೆ 3 ಘಂಟೆಗೆ ಮಹಾ ರಥೋತ್ಸವ ನೆರವೇರುವದು. ದಿ. 8 ರಂದು ಮದ್ಯಾಹ್ನ 3 ಘಂಟೆಗೆ ದೇವಸ್ಥಾನದ ಓಣಿಯಲ್ಲಿ 50 ಕೆ.ಜಿ ಉಸುಕು ಹಾಕಿದ ಬಂಡಿಯನ್ನು ಜಗ್ಗುವ ಸ್ಪರ್ಧೆ ಏರಿ​‍್ಡಸಲಾಗಿದೆ. ರಾತ್ರಿ 8 ಘಂಟೆಗೆ ಕರ್ನಾಟಕ ಚೌಕದಲ್ಲಿ ಜಿದ್ದಾಜಿದ್ದಿ ಗಾಯನ ನಡೆಯಲಿದೆ. ದಿ.  9 ರಂದು ಸಂಜೆ 6 ಘಂಟೆಗೆ ಕಳಸ ಇಳಿಸುವದು.  

ಸಂಜೆ 7 ಘಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರ ಜಾತ್ರಾ ಕಮಿಟಿಯವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.