ನವದೆಹಲಿ, ಫೆಬ್ರವರಿ 21 - ಆಡಳಿತದಲ್ಲಿ ಮಾತೃಭಾಷೆಯ ಬಳಕೆಯನ್ನು ಪ್ರತಿಪಾದಿಸಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಭಾರತೀಯ ಭಾಷೆಗಳ ಬಳಕೆಯಿಂದ ಆಡಳಿತವನ್ನು ಜನರ ಹತ್ತಿರ ತಂದು ಆಡಳಿತವನ್ನು ಹೆಚ್ಚು ಜನ ಕೇಂದ್ರಿತವಾಗಿಸಬಹುದಾಗಿದೆ ಎಂದು ಹೇಳಿದ್ದಾರೆ.
‘ಜನರು ಆಡುವ ಭಾಷೆ ಆಡಳಿತ ಭಾಷೆಯಾಗಿರಬೇಕು. ಸ್ವಾತಂತ್ರ್ಯ ಹೋರಾಟಗಾರ ಕಾಕಾಸಾಹೇಬ್ ಕಾಕೆಲ್ಕರ್ ಹೇಳಿದ್ದಾರೆ. ಜನರಿಗಾಗಿ ಇರುವ ಆಡಳಿತ ಜನರ ಭಾಷೆಯಿಂದಲೇ ನಡೆಯಬೇಕು.’ ಎಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯ ಮಾತೃಭಾಷೆ ದಿನದ ಅಂಗವಾಗಿ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಹೇಳಿದ್ದಾರೆ.
ರಾಜ್ಯಗಳಲ್ಲಿ ಉದ್ಯೋಗಗಳಿಗೆ ಭಾರತೀಯ ಭಾಷೆಗಳ ಜ್ಞಾನವನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದ ಉಪರಾಷ್ಟ್ರಪತಿಯವರು, ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಮನೆಗಳಲ್ಲಿ, ಸಮುದಾಯಗಳಲ್ಲಿ, ಸಭೆಗಳಲ್ಲಿ ಮತ್ತು ಆಡಳಿತದಲ್ಲಿ ಬಳಕೆ ಮಾಡುವ ಅಗತ್ಯವಾಗಿದೆ. ಈ ಭಾಷೆಗಳಲ್ಲಿ ಮಾತನಾಡುವ, ಬರೆಯುವ ಮತ್ತು ಸಂವಹನ ನಡೆಸುವವರಿಗೆ ನಾವು ಘನತೆ ಮತ್ತು ಹೆಮ್ಮೆಯ ಭಾವವನ್ನು ನೀಡಬೇಕು. ಜನರು ತಮ್ಮ ಭಾಷೆಯನ್ನು ಬಳಸದಿದ್ದರೆ ಅವರು ಭಾಷೆಯನ್ನು ಕಳೆದುಕೊಳ್ಳುತ್ತಾರೆ ಎಂದು ಪ್ರತಿಪಾದಿಸಿದರು.
ಶಿಕ್ಷಣದ ಆರಂಭಿಕ ಹಂತಗಳಲ್ಲಿ ಮಾತೃಭಾಷೆಯಲ್ಲಿ ಬೋಧನೆ ಮಾಡಿದರೆ ಮಕ್ಕಳ ಮನಸ್ಸು ಮತ್ತು ಆಲೋಚನೆ ಮಟ್ಟ ಹೆಚ್ಚಲಿದ್ದ, ಮಕ್ಕಳು ಸೃಜನಶೀಲರಾಗಲಿದ್ದಾರೆ ಎಂದು ತಜ್ಞರು ನಡೆಸಿದ ಅಧ್ಯಯನಗಳು ತೋರಿಸಿಕೊಟ್ಟಿವೆ.
ಜಾಗತಿಕವಾಗಿ ಶೇ 40 ರಷ್ಟು ಜನರು ತಾವು ಮಾತನಾಡುವ ಅಥವಾ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಶಿಕ್ಷಣವನ್ನು ಹೊಂದಿಲ್ಲ ಎಂದು ಗಮನ ಸೆಳೆದ ರಾಷ್ಟ್ರಪತಿಯವರು, ಭಾರತದ ವಿಶಿಷ್ಟ ಮತ್ತು ಶ್ರೀಮಂತ ಭಾಷಾ ಪರಂಪರೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಮಹತ್ವವನ್ನು ಪ್ರತಿಪಾದಿಸಿದರು..
‘ಭಾಷೆ ದೇಶದ ಸಾಂಸ್ಕೃತಿಕ ಜೀವನವನ್ನು ರೂಪಿಸುತ್ತದೆ ಮತ್ತು ಅದರ ಪ್ರಗತಿಗೆ ಅಡಿಪಾಯವನ್ನು ಹಾಕುತ್ತದೆ.’ ಎಂದು ರಾಷ್ಟ್ರಪತಿ ಹೇಳಿದರು.