ವಿಜಯಪುರ: ನಂದಿ ಸಕ್ಕರೆ ಕಾರಖಾನೆ: ಕೇನ್ ಕ್ಯಾರಿಯರ್ ಪೂಜಾ ಸಮಾರಂಭ

ಲೋಕದರ್ಶನ ವರದಿ

ವಿಜಯಪುರ 19: ಬಬಲೇಶ್ವರ ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 28ನೇ ವರ್ಷದ ಅಂದರೆ ಪ್ರಸ್ತುತ 2019-20ರ ಕಬ್ಬು ಅರೆಯುವ ಹಂಗಾಮಿನ ಬಾಯ್ಲರ್ ಪ್ರದೀಪನಾ & ಕೇನ್ ಕ್ಯಾರಿಯರ್ ಪೂಜಾ ಸಮಾರಂಭವು ದಿ: 18 ರಂದು ಜರುಗಿತು.

ಸಮಾರಂಭದ ಸಾನಿಧ್ಯವಹಿಸಿದ ಬೀಳೂರಿನ ಮುರಗೇಂದ್ರ ಸ್ವಾಮಿಜಿಯವರು ಆಶೀರ್ವಚನ ನೀಡಿ, ಈ ಕಾರ್ಖಾನೆ ಏಳ್ಗೆಯೊಂದಿಗೆ ಈ ಭಾಗದ ಕಬ್ಬು ಬೆಳೆಗಾರರ ರೈತರ ಹಾಗೂ ದುಡಿಯುವ ಕಾಮರ್ಿಕ ವರ್ಗದವರ ಸರ್ವತೋಮುಖ ಬೆಳವಣೆಗೆಯಾಗಿದೆ. ಇದು ರೈತರ ಮತ್ತು ಕಾರ್ಮಿಕ ಶ್ರಮದ ಪ್ರತಿಫಲವೆಂದು ತಿಳಿಸಿದರು.

ಬಿದರಿ-ಸವದತ್ತಿ ಕಲ್ಮಠದ ಶಿವಲಿಂಗ ಸ್ವಾಮೀಜಿ, ಮರೇಗುದ್ದಿ ತೋಂಟದಾರ್ಯ ಸ್ವಾಮೀಜಿ, ಬೂದಿಹಾಳ ಫಕೀರೇಶ್ವರ ಸ್ವಾಮೀಜಿ, ಮಮದಾಪೂರ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೊಣ್ಣೂರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ, ಗುಣದಾಳ ವಿವೇಕಾನಂದ ದೇವರು, ಬರಡೋಲದ ವೇಮಮೂತರ್ಿ ವಿಶ್ವನಾಥ ಹಿರೇಮಠ & ಮಲ್ಲಯ್ಯಾ ಸ್ವಾಮೀಜಿ ಹಾಗೂ ಸದಾಶಿವಯ್ಯ ಸ್ವಾಮೀಜಿ ಹೊಳಿಮಠ ಬಬಲಾದಿ ರವರಲ್ಲದೇ ಗಲಗಲಿಯ ರಾಮಾಚಾರ್ಯ ಕಟ್ಟಿರವರು ಪೂಜಾ ವಿದಿ-ವಿಧಾನ ನೆರವೇರಿಸಿದರು.

ಕಾಖರ್ಾನೆಯ ವ್ಯವಸ್ಥಾಪಕ ನಿದರ್ೇಶಕ ರಾಜಗೋಪಾಲ ಮಾತನಾಡಿ, ಸಹಕಾರಿ ರಂಗದಲ್ಲಿ ರೈತರ ಹಾಗೂ ಕಾಮರ್ಿಕರ-ಸಿಬ್ಬಂದಿಯವರ ಪರಿಶ್ರಮ ಬಹಳಷ್ಟಿರುತ್ತದೆ. ಈ ಭಾಗದ ರೈತರು ತಾವು ಬೆಳದ ಕಬ್ಬನ್ನು ಪ್ರತಿವರ್ಷದಂತೆ ಈ ಹಂಗಾಮಿನಲ್ಲಿ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ಮನವಿ ಮಾಡಿಕೊಂಡರು. 

ಕಾರ್ಖಾನೆಯ ಅದ್ಯಕ್ಷ ಶಶಿಕಾಂತಗೌಡ ಭೀ.ಪಾಟೀಲ (ಶಿರಬೂರ) ಮಾತನಾಡಿ, ಪ್ರತಿ ವರ್ಷದಂತೆ ಸನ್ 2019-20ರ ಕಬ್ಬು ಅರೆಯುವ ಹಂಗಾಮಿನಲ್ಲಿ ರೈತಬಾಂಧವರು ತಾವು ಬೆಳೆದ ಕಬ್ಬನ್ನು ಕಾರ್ಖಾ ನೆಗೆ ಸರಬರಾಜು ಮಾಡುವುದರೊಂದಿಗೆ ಕಾರ್ಖಾನೆಯ ನಿಗಧಿತ ಗುರಿ 9 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವದನ್ನು ಯಶಸ್ವಿಯಾಗಲು ಸಹಕರಿಸಬೇಕೆಂದು ಕೋರಿದರು.

ಪೂಜಾ ಸಮಾರಂಭದಲ್ಲಿ ಕಾಖರ್ಾನೆಯ ನಿದರ್ೇಶಕರಾದ ರಮೇಶ ಶೇಬಾಣಿ, ಜಿ.ಕೆ. ಕೋನಪ್ಪನವರ, ಹೆಚ್.ಆರ್.ಬಿರಾದಾರ, ರಮೇಶ ಜಕರಡ್ಡಿ, ಸಿದ್ದಣ್ಣ ದೇಸಾಯಿ, ಎಸ್.ಟಿ.ಪಾಟೀಲ, ಹಣಮಂತ ಕೊಣ್ಣೂರ, ಹಣಮಂತ ಕಡಪಟ್ಟಿ, ಗೋಪಾಲ ನಾಯ್ಕರ, ರಾಮಪ್ಪ ಹರಿಜನ, ಜಗದೀಶ ಶಿರಾಳಶೆಟ್ಟಿ, ಇರರಲ್ಲದೇ ಸುತ್ತ-ಮುತ್ತಲಿನ ರೈತಬಾಂಧವರು, ಶೇರು ಸದಸ್ಯರು, ಗಣ್ಯ ಮಹನೀಯರು ಹಾಗೂ ಅಧಿಕಾರಿ ವರ್ಗದ ಸಿಬ್ಬಂದಿ-ಕಾರ್ಮಿಕರು ಪಾಲ್ಗೊಂಡಿದ್ದರು. ಆರ್.ಪಿ. ಕೊಡಬಾಗಿ ಸ್ವಾಗತಿಸಿದರು. ಕಾರಖಾನೆಯ ಪ್ರಧಾನ ವ್ಯವಸ್ಥಾಪಕ ಎ.ಸಿ. ಪಾಟೀಲ ವಂದಿಸಿದರು.