ವಿಜಯಪುರ: 'ರಸಗೊಬ್ಬರ ಬಳಕೆಯಿಂದ ಭೂಮಿಯ ಸಾಮಥ್ರ್ಯ ಹೆಚ್ಚಿಸಿ'

ಲೋಕದರ್ಶನ ವರದಿ

ವಿಜಯಪುರ 22: ಕೃಷಿ ವಿಜ್ಞಾನ ಕೇಂದ್ರ, ಕೋರಮಂಡಲ ಇಂಟರನ್ಯಾಷನಲ್ ಲಿಮಿಟೆಡ್, ಸಹಯೋಗದೊಂದಿಗೆ "ರಸಗೊಬ್ಬರ ಬಳಕೆ ಮತ್ತು ಜಾಗೃತಿ" ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯ, ಡೀನ್ ಡಾ.ಎಸ್.ಬಿ.ಕಲಘಟಗಿ ಉದ್ಘಾಟಿಸಿ ಮಾತನಾಡುತ್ತಾ ಕೃಷಿಯಲ್ಲಿ ಪೋಷಕಾಂಶಗಳ ಮಹತ್ವ ಭೂಮಿಯ ಸಾಮಥ್ರ್ಯವನ್ನು  ರಸಗೊಬ್ಬರಗಳ ಬಳಕೆಯ ಮೂಲಕ ಹೆಚ್ಚಿಸಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು 2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸಬೇಕೆಂದು ರೈತರಿಗೆ ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ ವಿಸ್ತರಣಾ ನಿದರ್ೆಶಕ ಡಾ.ಬೆಳ್ಳಿ ಮಾತನಾಡುತ್ತಾ,  ರೈತರು ರಸಗೊಬ್ಬರಗಳ ಬಳಕೆಯ ಬಗ್ಗೆ ಅರಿವು ಮಾಡಿಕೊಂಡು ಅದರ ಜೊತೆಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆಗೊಬ್ಬರ, ಜೈವಿಕಗೊಬ್ಬರವನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಕೃಷಿಯಲ್ಲಿ  ಹೆಚ್ಚಿನ ಆದಾಯ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿರಾದಾರ, ಸ್ವಾಗತಿಸಿದರು, ರಾಠೋಡ  ನಿರೂಪಿಸಿದರು. ಡಾ.ವಿವೇಕ ದೇವರನಾವದಗಿ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪ್ರೇಮಾ. ಬಿ.ಪಾಟೀಲ, ಡಾ.ಸಂಗೀತಾ ಜಾಧವ, ಡಾ.ಶಿವಲಿಂಗಪ್ಪ ಹೋಟಕರ, ಮಲ್ಲಪ್ಪ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 60 ಜನ ರೈತಬಾಂದವರು ಭಾಗವಹಿಸಿ ತರಬೇತಿಯ ಲಾಭ ಪಡೆದುಕೊಂಡರು.