ವಿಜಯಪುರ: ಚಂದ್ರಕಾಂತ ಬಿಜ್ಜರಗಿಗೆ 'ಜೀವಮಾನ ಸಾಧನೆ' ಪ್ರಶಸ್ತಿ

ವಿಜಯಪುರ 15: ಸಾಹಿತ್ಯ, ನಾಡು-ನುಡಿ, ಕಲೆ ಸಂಸ್ಕೃತಿ ಸೇರಿದಂತೆ ವಿವಿಧ ರಂಗಗಳಲ್ಲಿ ಅನುಪಮ ಸೇವೆಸಲ್ಲಿದ ಸಾಧಕರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಕೊಡಮಾಡುವ 2019ನೇ ಸಾಲಿನ ರಾಜ್ಯಮಟ್ಟದ 'ಜೀವಮಾನ ಸಾಧನೆ' ಪ್ರಶಸ್ತಿಗೆ ವಿಜಯಪುರದ ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಭಾಜನರಾಗಿದ್ದಾರೆ. 

ಇದೇ ದಿ.22 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ  ಜರುಗಲಿದೆ.