ಲೋಕದರ್ಶನ ವರದಿ
ವಿಜಯಪುರ 06: ರಾಜ್ಯದಲ್ಲಿ ಪ್ರಸಕ್ತ ವರ್ಷ ವಿಪರೀತ ಮಳೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ನಿರೀಕ್ಷೆಯಂತೆ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 1200 ಕೋಟಿ ರೂಪಾಯಿ ರಾಜ್ಯಕ್ಕೆ ನೆರೆ ಸಂತ್ರಸ್ತ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದ್ದನ್ನು ಅತ್ಯಂತ ಸಂತಸದಿಂದ ಸ್ವಾಗತಿಸುತ್ತ ಜಿಲ್ಲಾ ಬಿಜೆಪಿ ಘಟಕದ ಪರವಾಗಿ ಅಭಿನಂದಿಸುವುದಾಗಿ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರು ಹೇಳಿದರು.
ಇಂದು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಕರ್ಾರ ನೀಡಿರುವ 1200 ಕೋಟಿ ರೂಪಾಯಿ ಕೇವಲ ಮದ್ಯಂತರ ಹಣವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸಕರ್ಾರಗಳು ಅಂತಿಮ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ಅಂತಿಮ ವರದಿ ನೀಡಬೇಕಾಗುತ್ತದೆ. ಈಗ ಬಿಡುಗಡೆಯಾಗಿರುವ ಹಣದ ಕುರಿತು ಪ್ರಮಾಣ ಪತ್ರ ಸಲ್ಲಿಕೆಯಾದ ನಂತರವಷ್ಟೇ ಎರಡನೇ ಕಂತದ ಹಣವನ್ನು ಕೇಂದ್ರ ಸಕರ್ಾರ ಬಿಡುಗಡೆ ಮಾಡುತ್ತದೆ ಇದು ಕೇಂದ್ರ ಸರ್ಕಾರ ನಿಯಮ ಎಂದು ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಆದ ತಕ್ಷಣ ನೆರೆ ಹಾವಳಿ ಆಗಿರುವ ಆಯಾ ಜಿಲ್ಲೆಗಳಿಗೆ ಖುದ್ದಾಗಿ ಬೇಟಿ ನೀಡಿ ಕುಲಂಕೂಷವಾಗಿ ಪರಿಶೀಲನೆ ನಡೆಸಿದ್ದಲ್ಲದೇ ಕೇಂದ್ರ ಸಕರ್ಾರದಿಂದಲೂ ವಿಶೇಷ ಅಧ್ಯಯನ ತಂಡ ರಾಜ್ಯಕ್ಕೆ ಆಗಿಮಿಸಿ ಹಾನಿಗೊಳಗಾದ ಎಲ್ಲ ವಿವರವನ್ನು ಕೇಂದ್ರ ಕ್ಕೆೆ ನೀಡಿದ್ದಾರೆ. ಈಗಾಗಲೇ ರಾಜ್ಯ ಸಕರ್ಾರವು ತಕ್ಷಣ ಪ್ರತಿ ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ರೂ,ಗಳನ್ನು ನೀಡಿದ್ದಲ್ಲದೇ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಲು ತಲಾ 5 ಲಕ್ಷ ರೂ, ನೀಡುವುದಾಗಿ ಮತ್ತು ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡಿದವರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಗಳನ್ನು ಬಾಡಿಗೆ ಹಣವನ್ನೂ ಸಹ ರಾಜ್ಯ ಸಕರ್ಾರವೇ ಭರಿಸುತ್ತಿದೆ ಎಂಬ ಘೋಷಣೆ ಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ. ಅದರಂತೆ ಮುಖ್ಯ ಮಂತ್ರಿಗಳು ನೆರೆ ಪರಿಹಾರ ನೀಡಲು ಅತ್ಯಂತ ದಿಟ್ಟ ಹೆಜ್ಜೆ ಇಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈಗ ಈ ವಿಷಯಕ್ಕೆ ಪೂರಕವಾಗಿ ಕೇಂದ್ರ ಸರಕಾರವೂ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ನೆರೆ ಸಂತ್ರಸ್ತರ ಪರಿಹಾರ ವಿತರಣೆಯ ವಿಷಯವಾಗಿ ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮುಖಾಂತರ 1 ಲಕ್ಷ ರೂ,ಗಳನ್ನು ವಗರ್ಾವಣೆ ಮಾಡಿದ್ದು ವಿಶೇಷವಾಗಿದೆ ಎಂದು ಹೇಳಿದರು.
ಮೊದಲಬಾರಿಗೆ ಹಾನಿಗೊಳಗಾದ ಸಂಪೂರ್ಣ ಕೃಷಿ ಜಮೀನಿಗೆ ಪಯರ್ಾಯವಾಗಿ ಎಲ್ಲಾ ಜಮೀನಿನ ಜಾಗವನ್ನು ಬೇರೆಡೆ ಒದಗಿಸಿಕೊಡಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಈಗಾಗಲೇ ಜಮೀನಿಗಾಗಿ 350 ಎಕರೆ ಭೂಮಿಯನ್ನು ಗುತರ್ಿಸಲಾಗಿದೆ. ನೆರೆ ಪರಿಹಾರಕ್ಕಾಗಿ ರಾಜ್ಯ ಸಕರ್ಾರ 1000 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿದ್ದಲ್ಲದೆ ಹಾನಿಗೊಳಗಾಗಿರುವ ರಸ್ತೆ ದುರಸ್ತಿಗಾಗಿ 500 ಕೋಟಿ ರು,ಗಳನ್ನು ಲೋಕೋಪಯೋಗಿ ಮತ್ತು ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ದಲಿತ ಕಾಲನಿಗಳಲ್ಲಿ ನಾಶವಾದ ಮನೆಗಳ ನಿರ್ಮಾಣಕ್ಕೆ ವಿಶೇಷ ಯೋಜನೆಯಡಿಯಲ್ಲಿ 1150 ಕೋಟಿ ರೂ,ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಪರಿಹಾರ ರೂಪದ ಹಣವು ನೆರೆ ಪೀಡಿದ ಜಿಲ್ಲೆಗಳ ಜಿಲ್ಲಾಧಿಕಾರಿಗಲ ಬ್ಯಾಂಕ್ ಖಾತೆಗೆ ಈಗಾಗಲೇ ರಾಜ್ಯ ಸರ್ಕಾರ ಸಂದಾಯ ಮಾಡಿದೆ. ಪರಿಹಾರ ಕಾರ್ಯವನ್ನೂ ಸಹ ಆಯಾ ಜಿಲ್ಲಾಡಳಿತವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಧಿಕಾರಿಗಳೂ ಸಹ ಅತ್ಯಂತ ನಿಷ್ಠೆಯಿಂದ ಜನರ ಸಂಕಷ್ಟಕ್ಕೆ ಸಹಕರಿಸುತ್ತ ಕಾರ್ಯ ನಿರ್ವಹಿಸುತ್ತಿರುವು ಶ್ಲಾಘನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಟ್ಟದ ಬಿಜೆ ಘಟಕದ ಧುರಿಣರಾದ ವಿಜಯಕುಮಾರ ಪಾಟೀಲ, ಸಂಗರಾಜ ದೇಸಾಯಿ, ರವಿಕಾಂತ ಬಬಲಿ, ಪ್ರಕಾಶ ಅಕ್ಕಲಕೋಟ, ಮಾಜಿ ಶಾಸಕ ರಮೇಶ ಭೂಸನೂರ, ಆರ್.ಎಸ್.ಪಾಟೀಲ ಕುಚಬಾಳ, ದಯಾಸಾಗರ ಪಾಟೀಲ, ಪಾಪುಸಿಂಗ ರಜಪುತ, ವಿಜಯ ಜೋಶಿ ಸೇರಿದಂತೆ ಅನೇಕರು ಗಣ್ಯರು ಉಪಸ್ಥಿರಿದ್ದರು.