ವಿಜಯಪುರ: ದರಬಾರ ಸಂಸ್ಥೆಯಿಂದ ವಿನೂತನ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ 'ಪ್ಲ್ಯಾಸ್ಟಿಕ್ ಸಂಗ್ರಹಿಸಿ ಕೊಟ್ಟವರಿಗೆ ಸಕ್ಕರೆ ವಿತರಣೆ'

ಲೋಕದರ್ಶನ ವರದಿ

ವಿಜಯಪುರ 03: ಮಹಾತ್ಮಾ ಗಾಂಧಿಜಿಯವರ 150 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ  ಪ್ಲಾಸಿಕ್ ಮುಕ್ತ ಭಾರತ ನಿರ್ಮಾಣದ ಕರೆಯ ಹಿನ್ನೆಲೆಯಲ್ಲಿ ನಗರದ ವಿದ್ಯಾವರ್ಧಕ ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಗಾಂಧಿ ಜಯಂತಿಯನ್ನು ವಿನೂತನವಾಗಿ ಆಚರಿಸಿದರು. 

ಜೀವಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಸಂಗ್ರಹಿಸಿ ತಂದು ನೀಡಿದವರಿಗೆ ಸಕ್ಕರೆಯನ್ನು ಕಾಣಿಕೆಯಾಗಿ ನೀಡುವ ವಿನೂತನ ಯೋಜನೆಯನ್ನು ಕೈಗೊಂಡು ಭಾರಿ ಪ್ರಮಾಣದ ಪ್ಲಾಸ್ಟಿಕ್ನ್ನು ಸಂಗ್ರಹಿಸಿ ಸ್ವಚ್ಛ ಭಾರತಕ್ಕೆ ಚಾಲನೆ ನೀಡಿದರು.

ಸಾಮಾಜಿಕವಾಗಿ ಏನಾದರು ಕಾರ್ಯ ಮಾಡಬೇಕು ಎನ್ನುವ  ಸಂಸ್ಥೆಯ ಅಧ್ಯಕ್ಷ ರಾಜೇಶ ಡಿ. ದರಬಾರ ಅವರ ಆಲೋಚನೆಯ  ಫಲವಾಗಿ ಪ್ಲಾಸ್ಟಿಕ್ ಸಂಗ್ರಹಿಸಿ ತಂದವರಿಗೆ ಪ್ರತಿಯಾಗಿ ಅಷ್ಟೇ ಪ್ರಮಾಣದ ಸಕ್ಕರೆಯನ್ನು ನೀಡುವ ವಿನೂತನ ಯೋಜನೆಯು ಸಿದ್ಧಗೊಂಡಿತು. ಕಾರ್ಯಪ್ರವೃತ್ತರಾದ ಇವರು ಸಂಸ್ಥೆಯ ಸಿಬ್ಬಂದಿಯನ್ನು ಜೊತಾಗಿಟ್ಟುಕೊಂಡು ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.  10 ಸಾವಿರ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚುವ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಹಣ್ಣು ತರಕಾರಿಗಳನ್ನು ಕಟ್ಟಿಕೊಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಬೇಕು ಎನ್ನುವ ಸಂದೇಶದೊಂದಿಗೆ ಎನ್ಎಸ್ಎಸ್ ವಿದ್ಯಾಥರ್ಿಗಳಿಂದ  2 ಸಾವಿರ ಕಾಗದದ ಪಾಕೇಟ್ಗಳನ್ನು ತಯಾರಿಸಿ ವ್ಯಾಪಾರಸ್ತರಿಗೆ ಹಂಚಿದ್ದಾರೆ. ಪ್ಲಾಸ್ಟಿಕ್ ಸಂಗ್ರಹಿಸಿ ತಂದವರಿಗೆ ಅಷ್ಟೇ ಪ್ರಮಾಣದ ಸಕ್ಕರೆ ನೀಡುವ ಕಾರ್ಯಕ್ರಮವನ್ನು  ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಆಯೋಜಿಸಿದ್ದರು. ಪ್ರತಿಯಾಗಿ ಸ್ಟೇಷನ್ ರಸ್ಥೆಯ ದರಬಾರ ಹೈಸ್ಕೂಲ್ ಆವರಣದಲ್ಲಿ 3.5 ಕ್ವಿಂಟಾಲ್ ಸಕ್ಕರೆಯನ್ನು ವಿತರಿಸುವುದರೊಂದಿಗೆ 3.5 ಕ್ವಿಂಟಾಲ್ ಕಸವನ್ನು ಸಂಗ್ರಹಿಸಿದರೆ, ಕುಮುದ್ಬೆನ್ ದರಬಾರ ಮಹಾವಿದ್ಯಾಲಯ, ಶ್ಯಾಮ್ ಸ್ಕೂಲ್ ಗುರುಪಾದೇಶ್ವರ ನಗರ, ಶ್ಯಾಮ್ ಸ್ಕೂಲ್ ಕೀತರ್ಿ ನಗರದಲ್ಲಿ ತಲಾ 50 ಕೆ.ಜಿ ಸಕ್ಕರೆಯನ್ನು ವಿತರಿಸಿ ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ನ್ನು ಸಂಗ್ರಹಿಸಿದರು. 

ಸಂಸ್ಥೆಯ ಅಧ್ಯಕ್ಷ ರಾಜೇಶ ದರಬಾರ ಕಾರ್ಯಕ್ರಮವನ್ನುದ್ದೇಶೀಸಿ ಮಾತನಾಡಿ, ಸ್ವಾರ್ಥಕ್ಕಾಗಿ ಬದುಕಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ. ಕೇವಲ ಸಮಾಜಕ್ಕಾಗಿ ಬದುಕಿದವರು ಮಾತ್ರ ನೆನಪಲ್ಲಿ ಉಳಿಯುತ್ತಾರೆ ಎಂದು ಹೇಳಿದರು.

ಸಂಸ್ಥೆಯ ಸಮನ್ವಯ ಅಧಿಕಾರಿ ಡಾ.ವಿ.ಬಿ.ಗ್ರಾಮಪುರೋಹಿತ ಮಾತನಾಡಿ; ನಮ್ಮ ಸಂಸ್ಥೆ ಹಾಕಿಕೊಂಡಿರುವ ಈ ಯೋಜನೆ ರಾಜ್ಯದಲ್ಲಿಯೇ ವಿನೂತನವಾದುದ್ದಾಗಿದೆ. ಇದಕ್ಕೆ ಸಾರ್ವಜನಿಕರು ಸ್ಪಂದಿಸುತ್ತಿರುವುದು ನೋಡಿದರೆ ನಮ್ಮ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಇಂಥ ಮಾದರಿಯ ಕಾರ್ಯಕ್ರಮಗಳು ಇತರ ಸಂಸ್ಥೆಗಳಿಗೂ ಕೂಡ ಪ್ರೇರಣೆ ನೀಡುತ್ತವೆ. ಆ ನಿಟ್ಟಿನಲ್ಲಿ ಎಲ್ಲರೂ ಸಮಾಜಕ್ಕಾಗಿ ಒಂದಾಗಬೇಕು ಎಂದು ಹೇಳಿದರು.

ಆರ್.ಎಸ್.ಕೋಟ್ಯಾಳ, ಟಿ.ಆರ್.ಕುಲಕಣರ್ಿ, ಬಿ.ಎನ್.ವಾಲಿಕಾರ, ರೂಪಾ ಟೋಳ, ಆರ್.ಎಸ್.ಪೊಲೀಸ್ ಪಾಟೀಲ್ ಉಪಸ್ಥಿತರಿದ್ದರು. ಪ್ರಾಚಾರ್ಯ ಜಿ.ಹೆಚ್.ಮಣ್ಣೂರ ಸ್ವಾಗತಿಸಿದರು, ಮಂಜುನಾಥ ಜುನಗೊಂಡ ನಿರೂಪಿಸಿದರು.