ವಿಜಯಪುರ: ಮಹಾತ್ಮ ಗಾಂಧೀಜಿ 150ನೇ ಜನ್ಮ ವಷರ್ಾಚರಣೆ ಸರ್ವಧರ್ಮ ಪ್ರಾರ್ಥನೆ-ಸಾಕ್ಷ್ಯ ಚಿತ್ರ ಪ್ರದರ್ಶನ

ಲೋಕದರ್ಶನ ವರದಿ

ವಿಜಯಪುರ 02: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಖಾದಿ ಮಂಡಳಿ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಅವರ ಜಯಂತ್ಯೋತ್ಸವದಲ್ಲಿ ಗಣ್ಯಮಾನ್ಯರು ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಮರ್ಪಸಿದರು. 

ತದನಂತರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಚರಕ ನೂಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಇದೇ ಸಂದರ್ಭದಲ್ಲಿ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಯವರ ಜಯಂತಿ ಅಂಗವಾಗಿ ಹೊರತಂದಿರುವ ಪಾಪು ಬಾಪು ಕಿರುಪುಸ್ತಕವನ್ನು ಬಿಡುಗಡೆ ಹಾಗೂ ಗಾಂಧೀಜಿ ಅವರ ಜೀವನ ಕುರಿತು ಸಾಕ್ಷ್ಯಚಿತ್ರವನ್ನು ಪ್ರದಶರ್ಿಸಲಾಯಿತು. 

ಕಾರ್ಯಕ್ರಮದಲ್ಲಿ ನಾಗರಾಳೆ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಗಾಂಧೀಜಿ ಕನಸು ಎಂಬ ಕಿರುನಾಟಕದ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ ಮತ್ತು ಗಾಂಧೀಜಿ ಅವರ ಸತ್ಯ ತತ್ವಾದರ್ಶಗಳ ಮಾಹಿತಿ ನೀಡಿದರು. 

ಅನ್ಯಾಯ-ಹಿಂಸೆ, ವ್ಯಭಿಚಾರ, ಮದ್ಯಪಾನ ಮತ್ತು ಧೂಮಪಾನಗಳಿಗೆ ದಾಸನಾಗದೆ ಇರುವ ತತ್ವಗಳನ್ನು ಬೌದ್ಧ ಧರ್ಮದಲ್ಲಿ ಸಾರಲಾಗಿದೆ. ಬುದ್ಧನ ತತ್ವಗಳನ್ನು ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿಗೆ ಸಾರಿದರು ಎಂದು ಬೌದ್ಧ ಧರ್ಮದ ಅನುಯಾಯಿಯಾದ ನಾಗರಾಜ ಲಂಬು ಹೇಳಿದರು.

ಇಸ್ಲಾಂ ಧರ್ಮದ ಮೌಲಾನಾ ರಿಜ್ಞಾನ್ ಮತ್ತು ಜೈನ್ ಧರ್ಮದ ಸುರೇಶ ಪಂಡಿತ ಅವರು ಪ್ರಾಥರ್ಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ನೇಮಗೌಡ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ತಹಶೀಲ್ದಾರ ಮೋಹನಕುಮಾರಿ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಉಪನಿರ್ದೇಶಕ ಮಹೇಶ ಪೋದ್ದಾರ, ಖಾದಿ ಮಂಡಳಿ ಅಧಿಕಾರಿ ದಳವಾಯಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಪಿ.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಶಿಕ್ಷಕ ಮಮದಾಪೂರ ಕಾರ್ಯಕ್ರಮ ನಿರೂಪಿಸಿದರು. ಕಲಾವಿದೆ ಮಂಜುಳಾ ಹಿಪ್ಪರಗಿ ಸಂಗಡಿಗರು ಪ್ರಾಥರ್ಿಸಿದರು.