ವಿಜಯಪುರ: ಕವಿಗೋಷ್ಠಿ ಕಾರ್ಯಕ್ರಮ: ಸತತ ಅಧ್ಯಯನ ಸತ್ವಯುತ ಸಾಹಿತ್ಯ ರಚನೆ ಸಾಧನ

ಲೋಕದರ್ಶನ ವರದಿ

ವಿಜಯಪುರ 11: ಕವಿ ಹೃದಯವಿರುವ ಪ್ರತಿಯೊಬ್ಬರು ವಿಭಿನ್ನಪ್ರಕಾರದ ಕೃತಿಗಳ ಅಧ್ಯಯನದಿಂದ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡುತ್ತಾರೆ. ನಂತರ ಅವರ ಅಂತರಾತ್ಮೀಕ ಅಭಿವ್ಯಕ್ತಿಯನ್ನು ದಾಖಲಿಸುತ್ತ ಹೋದಂತೆ ಕವಿತೆ, ಕಥೆ, ಸಾಹಿತ್ಯದ ಪ್ರಕಾರಗಳು ಅನಾವರಣಗೊಳ್ಳುತ್ತವೆ. ಸತತ ಅಧ್ಯಯನದಿಂದ ಸತ್ವಯುತ ಸಾಹಿತ್ಯ ರಚನೆ ಸಾಧ್ಯ ಎಂದು ವಿಶ್ರಾಂತ ಪ್ರಾಧ್ಯಾಪಕ ಕವಿ ಪ್ರೊ. ರಾ.ಶಿ. ವಾಡೇದ ಎಂದು ಹೇಳಿದರು.

       ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಏರ್ಪಡಿಸಿದ್ದ ಮುಂಗಾರು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ಬದುಕಿನಲ್ಲಿ ತಿಳುವಳಿಕೆ ನಡುವಳಿಕೆ ಸಕಾರಾತ್ಮಕ ಚಿಂತನೆಯು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವಲ್ಲದೆ ಸಕಾರಾತ್ಮಕ ಮಹತ್ವಾಕಾಂಕ್ಷಿಯನ್ನು ಹೊಂದಿದ ಸಾಹಿತ್ಯದಿಂದ ಸಮಾಜ, ವ್ಯಕ್ತಿ, ಇಲಾಖೆಗಳು ಜಾಗೃತ ಹೊಂದುತ್ತವೆ. ಸಾಹಿತ್ಯಕ್ಕೆ ಪ್ರತಿಯೊಬ್ಬರ, ಪ್ರತಿಯೊಂದರ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿ ಇದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಕಾರಾಗೃಹದ ಜೈಲರ್ ಅಂಬರೀಷ ಪೂಜಾರಿ ಮಾತನಾಡಿ, ಸಾಹಿತಿಯಾಗುವವನಿಗೆ ಮಾತೃ ಹೃದಯ ಇರಬೇಕು. ಸಾಹಿತ್ಯ ಬೆಳೆಯಬೇಕಾದರೆ ಸತತ ಅಧ್ಯಯನ ಬಹಳ ಮುಖ್ಯ. ಕಥೆ, ಕವನ, ಕಾದಂಬರಿ, ನಾಟಕಗಳು ಸಮಾಜದ ದೈನಂದಿನ ಸನ್ನಿವೇಶಗಳ ಪ್ರತಿರೂಪ. ಸಮಾಜ ಪರಿವರ್ತನೆಯಲ್ಲಿ ಸಾಹಿತ್ಯದ ಪಾತ್ರ ಹಿರಿದಾಗಿದೆ ಎಂದರು.

ವಿಶ್ರಾಂತ ವಿಷಯ ಪರಿವೀಕ್ಷಕರಾದ ವಿಮಲಾ ಹಂದಿಗೋಳ ಮಾತನಾಡಿ, ಇವತ್ತಿನ ಯುವ ಪೀಳಿಗೆ ವಿಜ್ಞಾನದ ಯುಗ ಬಳಕೆಯಲ್ಲಿ ಅದರಲ್ಲಿಯು ಮೊಬೈಲ ಬಳಕೆಯಲ್ಲಿ ಮುಳುಗಿರುವುದು ಸರ್ವೇ  ಸಾಮಾನ್ಯವಾಗಿದೆ. ನಾವು ಚಿಕ್ಕವರಿದ್ದಾಗ ಸಾಹಿತ್ಯ ಓದುವ ಸನ್ನಿವೇಶ ಮನೆಯಲ್ಲಿ ಹಾಗೂ ಹೊರಗಡೆ ಕಾಣುತ್ತಿದ್ದೇವು ಪ್ರತಿಯೊಬ್ಬರು ವಿವಿಧ ಪ್ರಕಾರದ ಸಾಹಿತ್ಯವನ್ನು ಓದುತ್ತಿದ್ದರು. ಇವತ್ತು ಯುವ ಪೀಳಿಗೆ ಸಾಹಿತ್ಯ ಅಧ್ಯಯನದಿಂದ ದೂರ ಉಳಿದಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಡಿ. ಕೊಟ್ನಾಳ ಮಾತನಾಡಿ,  ಬಿಡುವಿಲ್ಲದ ಇಂದಿನ ದಿನದಲ್ಲಿ ಸಾಹಿತ್ಯದ ಓದಿನತ್ತ ಪ್ರತಿಯೊಬ್ಬರು ಆಸಕ್ತಿ ತೋರಬೇಕು. ಸಾಹಿತ್ಯದ ಕಾರ್ಯಕ್ರಮಗಳು ನಡೆಯುವಂತೆ ಪ್ರೋತ್ಸಾಹಿಸಬೇಕು. ಸಾಹಿತ್ಯದ ಬಳಕೆಯಿಂದ ಯುವಕರ ಪ್ರತಿಭೆ ವ್ಯಕ್ತಿತ್ವ ರೂಪಗೊಳ್ಳುವುದು. ಸಾಹಿತ್ಯಕ್ಕೆ ಶಾಂತಿ, ನೆಮ್ಮದಿ ಕೊಡುವ ಶಕ್ತಿ ಇದೆ. ಎಂದರು. 

ಕಾರ್ಯಕ್ರಮದಲ್ಲಿ ಡಾ. ರೇಖಾ ಪಾಟೀಲ, ರಂಗನಾಥ ಅಕ್ಕಲಕೋಟ, ಪ್ರಭಾವತಿ ದೇಸಾಯಿ, ಬಿ.ಎಸ್. ಸಜ್ಜನ, ಶ್ರೀರಂಗ ಪುರಾಣಿಕ, ಸ್ನೇಹಾ ಮೇಟಿ, ಶಿವಾನಂದ ಶಾವರ, ಪೂಜಾ  ಚವ್ಹಾಣ, ಸುನಂದಾ ಕಾಖಂಡಕಿ, ರಾಹುಲ ಮರಳಿ, ಪ್ರೀಯಾ ಹರಿದಾಸ, ಸುನಂದ ಕೋರಿ, ಎಲ್.ಎಲ್.ತೊರವಿ, ಲಕ್ಷ್ಮಿ ಮಠದೇವರು, ಸುಷ್ಮೀತಾ ಬಿರಾದಾರ, ಪಾರ್ವತಿ ಜೋರಾಪುರಮಠ, ಡಾ. ಸುರೇಶ ಕಾಗಲಕರೆಡ್ಡಿ, ರವಿ ಕಿತ್ತೂರ, ಸದಾಶಿವ ಪೂಜಾರಿ, ಶಂಕರ ಹೆರಲಗಿ, ಉಮೇಶ ಕಲಗೊಂಡ,  ಕವಿತೆ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್. ಖಾದ್ರಿ ಇನಾಮದಾರ, ಬಿ.ಆರ್. ಬನಸೋಡೆ, ಶಶಿಕಲಾ ಭುಯ್ಯಾರ, ಲಕ್ಷ್ಮೀ ದೇಸಾಯಿ, ಭರತೇಶ ಕಲಗೊಂಡ, ಡಾ. ಎಸ್.ಎಸ್. ಅನಂತಪೂರ, ಎಂ.ಎಂ. ತೆಲಗಿ, ಭಾರತಿ ಟಂಕಸಾಲಿ, ದ್ರಾಕ್ಷಾಯಣಿ ಬಿರಾದಾರ, ಬಸವರಾಜ ಬ್ಯಾಳಿ, ದತ್ತಾತ್ರೇಯ ನಾಶಿ, ಎಸ್.ವಾಯ್. ನಡುವಿನಕೇರಿ,ಮಹಾದೇವ ರಾವಜಿ, ಯುವರಾಜ ಚೋಳಕೆ, ಎಸ್.ಡಿ. ಮಾದನಶೆಟ್ಟಿ, ಎಸ್.ಎಲ್. ಇಂಗಳೇಶ್ವರ, ಬಿ.ಸಿ.ಮುಗಲೊಳ್ಳಿ, ರಾಜಶೇಖರ ಉಮರಾಣಿ, ಶಶಿ ಉಟಗಿ, ಎಸ್.ಎ. ಪೂಜಾರಿ, ಸುಭಾಸ ಕನ್ನೂರ, ಅತಿಖತಜೀಮ ಮುಂತಾದವರು ಉಪಸ್ಥಿತರಿದ್ದರು