ವಿಜಯಪುರ: ವ್ಹಾಲಿಬಾಲ ಪಂದ್ಯಾವಳಿ ವಿಭಾಗ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ವಿಜಯಪುರ 03: ಇಟ್ಟಂಗಿಹಾಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವ್ಹಾಲಿಬಾಲ್ ಸ್ಪಧರ್ೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಮುದ್ದೇಬಿಹಾಳ ತಾಲೂಕಿನ ಢವಳಗಿ ಬಸನಗೌಡ ಪಾಟೀಲ ಪ್ರೌಢಶಾಲೆಯಲ್ಲಿ ಅಕ್ಟೋಬರ್ 1 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ವ್ಹಾಲಿಬಾಲ್ ಸ್ಪರ್ದೇಯಲ್ಲಿ ಇಟ್ಟಂಗಿಹಾಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ವಿದ್ಯಾರ್ಥಿಗಳಾದ ವಿನೋದ ಹಿರೇಕುರುಬರ, ಈಶ್ವರ ಚವ್ಹಾಣ, ಅಕ್ಷಯ ಲಮಾಣಿ, ಅಜೀತ ರಾಠೋಡ, ಅಭಿಷೇಕ ನಾಯಕ, ವಿಕಾಸ ಈಳಗೇರ ಅಭಿಷೇಕ ಹಟ್ಟಿ, ಮಹೇಶ ಮೇಡೆದಾರ, ವಿಕಾಸ ತಾಂಬೆ, ರೋಹಿತ ಚವ್ಹಾಣ, ವಿಶ್ವನಾಥ ಮಠಪತಿ, ಸಿದ್ದಪ್ಪ ಬಡಿಗೇರ ಇವರ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು, ಅದರಂತೆ ಬಾಲಕಿಯರ ವ್ಹಾಲಿಬಾಲ್ ಪಂದ್ಯದಲ್ಲಿ ವಿದ್ಯಾರ್ಥಿನಿಯರಾದ ರಮ್ಯಾ ದೊಡಮನಿ, ಪ್ರೀತಿ ಹಟ್ಟಿ, ಸಪನಾ ರಾಠೋಡ, ಪ್ರಿಯಾಂಕ ಜಾಧವ, ಅಕ್ಷತಾ ತಂಗಡಿ, ಸುಜಾತ ಜಂಬಗಿ, ವಿದ್ಯಾ ಖಾದೆಪುರ, ಐಶ್ವರ್ಯ ಹಟ್ಟೆನವರ, ರೂಪಾ ತಂಗಡಿ, ಅಂಕಿತಾ ಪೈಲ್ವಾನ್, ಕೋಮಲ್ ಹಟ್ಟಿ ಇವರ ತಂಡ ದ್ವೀತಿಯ ಸ್ಥಾನ ಗಳಿಸಿದೆ. 

ವಿದ್ಯಾರ್ಥಿಗಳಿಗೆ ಈ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಡಿ.ಎಸ್.ಹಟ್ಟಿ , ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.