ಲೋಕದರ್ಶನ ವರದಿ
ವಿಜಯಪುರ 29: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ಕಿರನ್ ಚುಳಕಿರವರ ರಾಘವೇಂದ್ರ ಕಾಡರ್ಿಯೋ ಕೇರ್ ಮೀನಾಕ್ಷಿ ಚೌಕ್ ಹತ್ತಿರ ಉಚಿತ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಡಾ.ಕಿರನ್ ಚುಳಕಿ ಮಾತನಾಡಿ ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಶೈಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಲು ಪ್ರಮುಖ ಕಾರಣ. ಚಟುವಟಿಕೆಯಿಲ್ಲದ ಜಡಜೀವನ ಸ್ಥೋಲಾಕಾಯ ಬೊಜ್ಜು ಅದಿಕ ಕೊಬ್ಬಿನಾಂಶ ಇರುವ ಖರೀದ ಆಹಾರ ಸೇವನೆ ಮಾನಸಿಕ ಒತ್ತಡ ಅನಿಯಮಿತ ಧೂಮಪಾನ, ತಂಬಾಕು ಸೇವನೆ ಮಧ್ಯಪಾನದಂಥ ದುಶ್ಚಟಗಳ, ಅಧಿಕ ರಕ್ತದೊತ್ತಡ, ಮಧುಮೇಹ, ನಿದ್ರೆ ಇಲ್ಲದ ರಾತ್ರಿ ಹೃದಯ ಸಮಸ್ಯೆ ಉಲ್ಭಣಿಸಲು ಮೂಲ ಕಾರಣವಾಗಿವೆ. ವ್ಯಕ್ತಿಗತವಾಗಿಯೇ ಹೃದಯದ ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಪ್ರಪಂಚದಲ್ಲಿ ಹೃದಯ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಕಡಿಮೆ ಮಾಡುವುದು ಸಾಧ್ಯವಿದೆ ಎಂದು ಹೇಳಿದರು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಬಿಪಿ, ರಕ್ತ ಸಕ್ಕರೆ, ಇಸಿಜಿ, ಕೊಲೇಸ್ಟ್ರಾಲ್, 2ಡಿ ಎಕೋ ಮುಂತಾದ ಹೃದಯಕ್ಕೆ ಸಂಬಂಧ ಪಟ್ಟ ತಪಾಸಣೆ ಮಾಡಲಾಯಿತು.
ಶೇಖ, ಮಾನಿಕಚಂದ್, ಸುಜಿತ್ ನಾಗರಾಜ, ವಿರೇಶ, ಗಿರೀಶ, ಮಂಜುನಾಥ, ರಮೇಶ, ಕಾಮೇಶ, ವೇದಾಂತ ಲ್ಯಾಬ್ ಮಲ್ಲು ಕಲಾದಗಿ, ವಿಜಯ ಜೋಶಿ, ರಾಕೇಶ ಕುಲಕಣರ್ಿ, ವಿನಾಯಕ ದಹಿಂಡೆ ಮುಂತಾದವರು ಉಪಸ್ಥಿತರಿದ್ದರು.