ಸೀಲ್ಡೌನ್ ಪ್ರದೇಶಕ್ಕೆ ಭೇಟಿ ನೀಡಿ ಎಟಿ ಅನ್ನಪೂರ್ಣ ಮುದಕಮ್ಮನವರ

ಲೋಕದರ್ಶನ ವರದಿ

ಶಿಗ್ಗಾವಿ : ಬಂಕಾಪೂರ ಪಟ್ಟಣದ ಕೊಟ್ಟಿಗೇರಿ ಸೀಲ್ಡೌನ್ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಬೇಟಿ ನೀಡಿ ಪರಿಶೀಲಿಸಿದರು.

     ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿಯವರಿಂದ ಸೀಲ್ಡೌನ್ ಪ್ರದೇಶದ ಮನೆ, ಮನೆಗೆ ದಿನಸಿ ಸಾಮಗ್ರಿಗಳು, ತರಕಾರಿ, ಶುದ್ಧ ಕುಡಿಯುವ ನೀರಿನ ಪೊರೈಕೆ ಸೇರಿದಂತೆ ಅವಶ್ಯಕ ವಸ್ತುಗಳ ಪೊರೈಕೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಫಿವರ್ ಕ್ಲಿನಿಕ್, ಕಂಟ್ರೋಲ್ ರೂಂ ಗೆ ತೆರಳಿ ಸೀಲ್ಡೌನ್ ಪ್ರದೇಶದೋಳಗಿರುವವರ ಆರೋಗ್ಯದ ಕುರಿತು ಸಂಬಂದಪಟ್ಟ ವೈದ್ಯಾದಿಕಾರಿಗಳೋಂದಿಗೆ ಚಚರ್ಿಸಿ ಮಾಹಿತಿ ಪಡೆದರು. ಜನರ ಸಮಸ್ಯೆಗಳ ಕುರಿತು ಕೂಡಾ ಆಲಿಸಿ ಪರಿಹರಿಸುವ ಬಗೆಹರಿಸುವ ಬರವಸೆ ನೀಡಿದರು.

     ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ನೈರ್ಮಲ್ಯ ಅಧಿಕಾರಿ ರೂಪಾ ನಾಯಕ ಇದ್ದರು.