ನವದೆಹಲಿ, ಏ 30- ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು 12ನೇ ಆವೃತ್ತಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು ಇದು ವಾರ್ನರ್ ಅವರು ಐಪಿಎಲ್ ನಲ್ಲಿ ಸನ್ ತಂಡದ ಪರ ಈ ಆವೃತ್ತಿಯಲ್ಲಿ ಆಡಿದ ಕೊನೆಯ ಪಂದ್ಯವಾಗಿತ್ತು. ಮಂಗಳವಾರ ಸಾಮಾಜಿಕ ತಾಣದಲ್ಲಿ ವಾರ್ನರ್ ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದು, ಎಸ್ಆರ್ಎಚ್ ಅಭಿಮಾನಿ, ತಂಡ, ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ. ' ನಾನು ಕೃತಜ್ಞತೆಯನ್ನು ಹೇಳಲು ಅಕ್ಷರಗಳು ಸಾಲದು. ಒಂದು ವರ್ಷ ಕಾದ ಬಳಿಕ ತಂಡದ ಪರ ಆಡಿದ್ದು ಸಂತಸ ತಂದಿದೆ. ಮಾಲೀಕರು, ಸಿಬ್ಬಂದಿ, ಹೃದಯ ಪೂರ್ವಕ ಧನ್ಯವಾದಗಳು. ಮುಂದಿನ ಪಂದ್ಯಗಳಲ್ಲಿ ಆಟಗಾರರು ಉತ್ತಮ ಆಟ ಪ್ರದರ್ಶಿಸಲಿ ಎಂದು ಬರೆದುಕೊಂಡಿದ್ದಾರೆ. ಡೇವಿಡ್ ವಾರ್ನರ್ ಪ್ರಸಕ್ತ ಸಾಲಿನ ಐಪಿಎಲ್ ನ 12 ಪಂದ್ಯಗಳಿಂದ 692 ರನ್ ಕಲೆ ಹಾಕಿದ್ದು, ಇದರಲ್ಲಿ 8 ಅರ್ಧಶತಕ ಹಾಗೂ ಒಂದು ಶತಕ ಸೇರಿವೆ. ಆಸ್ಟ್ರೇಲಿಯಾದ ವಾರ್ನರ್ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನದಲ್ಲಿ ಪಡೆದಿದ್ದಾರೆ. ಆಸೀಸ್ ಮೇ 2ರಿಂದ ವಿಶ್ವಕಪ್ ಅಭ್ಯಾಸ ನಡೆಸಲಿದೆ.