ನಿತ್ಯ ದೇವರ ಸ್ಮರಣೆ ಮಾಡುತ್ತ ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕು: ಪ್ರಭೂಜಿ ಶ್ರೀಗಳು
ರಾಯಬಾಗ, 16: ಸತ್ಸಂಗದಲ್ಲಿ ಭಾಗವಹಿಸಿ ಮಹನೀಯರ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಹಿಪ್ಪರಗಿ ಇಂಚಗೇರಿ ಮಠದ ಪ್ರಭೂಜಿ ಮಹಾರಾಜರು ಹೇಳಿದರು. ಇತ್ತೀಚಿಗೆ ತಾಲೂಕಿನ ಭೆಂಡವಾಡ ಗ್ರಾಮದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿ ಜೀವಿಯಲ್ಲಿ ಪರಮಾತ್ಮ ಇದ್ದಾನೆ. ನಿತ್ಯ ದೇವರ ಸ್ಮರಣೆ ಮಾಡುತ್ತ ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ರೇವಣು ಶಿವಾಪೂರೆ, ಧರೇಪ್ಪ ಅಂದಾನಿ, ಸಂಗಪ್ಪ ಬೆನ್ನಾಳೆ, ಅಲಗೊಂಡ ತಟ್ಟಿಮನಿ, ಸಂಜು ಹಂಜಿ, ರೇವಣು ದುಪದಾಳೆ, ಬಸವರಾಜ ಮಂಟೂರ, ವಿನೋದ ಬೆನ್ನಾಳೆ, ವಿಜಯ ಪಟ್ಟಣಶೆಟ್ಟಿ, ಪವಾಡಿ ಬೆಳಕೂಡೆ, ಸಿದ್ದು ಪಾತ್ರೋಟ, ಕುಮಾರ ಸಾರಾಪೂರೆ, ಉಮೇಶ ಪೂಜೇರಿ, ರಘು ಮೇತ್ರಿ ಸೇರಿ ಅನೇಕ ಭಕ್ತಾದಿಗಳು ಇದ್ದರು.