ಅಥಣಿ 13: ವ್ಯಕ್ತಿ ಸಮಾಜದಲ್ಲಿ ಜಾತಿ, ಮತ, ಪಂಥಗಳನ್ನು ಮೀರಿ ಬೆರೆತಾಗ ಮಾತ್ರ ಸಮಾಜ ಸ್ವಾಸ್ಥ್ಯವಾಗಿರಲು ಸಾಧ್ಯವಾಗುವುದು. ಸಾಮರಸ್ಯದ ಬದುಕು ಬಾಳಿದಾಗ ಮಾತ್ರ ವ್ಯಕ್ತಿ ಬೆಳೆಯುತ್ತಾನೆ, ಸಮಾಜವನ್ನು ಬೆಳೆಸುತ್ತಾನೆ. ಮನೆಯ ಯಜಮಾನನಲ್ಲಿರುವ ಸಂಸ್ಕೃತಿ, ಮನೆಯ ಮಕ್ಕಳಿಗೆ ಸಂಸ್ಕಾರವಾಗಿ ಬರಬೇಕು. ಆ ದಿಸೆಯಲ್ಲಿ ಶಿವಪುತ್ರ ಯಾದವಾಡರ ಬದುಕು ಇನ್ನೊಬ್ಬರಿಗೆ ಆದರ್ಶ ಎಂದರು.
ಸ್ಥಳೀಯ ಶಿವಣಗಿ ಕಾಯರ್ಾಲಯದಲ್ಲಿ ನಡೆದ ಅಥಣಿಯ ಹಿರಿಯ ಪತ್ರಕರ್ತ, ಸಾಹಿತಿ, ಸಾಮಾಜಿಕ ಕಾರ್ಯಕರ್ತ ಶಿವಪುತ್ರ ಯಾದವಾಡರ ಅಮೃತ ಮಹೋತ್ಸವದ ಅಭಿನಂದನ ಸಮಾರಂಭದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ ಜಾನಪದದಲ್ಲಿ ದಾಂಪತ್ಯ ಕುರಿತು ಚಿಂತನಗೈದರು.
ನಿಡಸೋಸಿಯ ಜ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಯಾದವಾಡರ ಸಮಾಜಮುಖಿ ಸೇವಾಕಾರ್ಯ ಅವರ ಮನೆತನದ ಎಲ್ಲ ಸದಸ್ಯರಲ್ಲಿಯೂ ಹರಿದುಬಂದಿದ್ದು, ಮಕ್ಕಳನ್ನೆ ಆಸ್ತಿ ಮಾಡಿದ ಯಾದವಾಡರು ಅಭಿನಂದನಾರ್ಹರು ಎಂದರು.
ಇಳಕಲ್ದ ಗುರುಮಹಾಂತ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ, ಯಾದವಾಡರ ಮಹಾಂತಪ್ಪಗಳವರ ಪ್ರೀತಿಯ ಶಿಷ್ಯರು. ಮೂರು ದಶಕಗಳ ಹಿಂದೆನೆ ಮಹಾಂತ ಜೋಳಿಗೆ ಪರಿಕಲ್ಪನೆಗೆ ಕೈಜೋಡಿಸಿ ನಿರಂತರ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡ ಕ್ರಿಯಾಶೀಲರು ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿಗಳು ಆಶೀರ್ವಚನ ನೀಡಿ ಯಾದವಾಡರ ಸೇವಾಕಾರ್ಯ ಇತರರಿಗೆ ಮಾದರಿ ಎಂದರು.
ಸಾಹಿತಿ ಡಾ.ಬಸವರಾಜ ಜಗಜಂಪಿಯವರು ಅಭಿನಂದನ ನುಡಿಗಳನ್ನಾಡಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಯಾದವಾಡರು ಕ್ರಿಯಾಶೀಲ ಸಜ್ಜನ ಸಂಸ್ಕೃತಿಯ ಪ್ರತೀಕರು ಎಂದರು.
ಡಾ. ಅಶೋಕ ನರೋಡೆ ಸಂಪಾದಿಸಿದ ``ಶಿವಪ್ರಭೆ'' ಅಭಿನಂದನ ಗ್ರಂಥ, ಡಾ. ಮಹಾಂತೇಶ ಉಕ್ಕಲಿ ಸಂಪಾದಿಸಿದ ``ತಪೋಭೂಮಿ'' ಕೃತಿಗಳು ಲೋಕಾರ್ಪಣೆಗೊಂಡು, ಇರ್ವರೂ ಸಂಪಾದಕರು ಮಾತನಾಡಿದರು.
ಶಶಿಕಲಾ ಶಿವಪುತ್ರ ಯಾದವಾಡ ದಂಪತಿಗಳನ್ನು ಸತ್ಕರಿಸಲಾಯಿತು. ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಡಾ.ಪಿ.ಪಿ ಮಿರಜ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ, ಶಿವುಕುಮಾರ ಹಂಜಿ, ನೀಲಗಂಗಾ ಚರಂತಿಮಠ, ಲೀಲಾ ಕಲಕೋಟಿ, ರಾಜೇಂದ್ರ ಪಾಟೀಲ, ಮಲ್ಲಿಕಾಜರ್ುನ ಹುಲಗಬಾಳಿ ಗಜಾನನ ಮಂಗಸೂಳಿ, ಕೆ.ಎ ವನಜೋಳ ಮೊದಲಾದವರು ಉಪಸ್ಥಿತರಿದ್ದರು.
ಬಸವರಾಜೇಶ್ವರಿ ಅಂಬಿ, ಧನಶ್ರೀ ಶೆಟ್ಟಿ ಪ್ರಾರ್ಥನೆಗೈದರು. ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎಲ್ ಕುಂದರಗಿ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ. ಮಲ್ಲಿಕಾಜರ್ುನ ಹಂಜಿ ಪ್ರಾಸ್ತಾವಿಕ ಮಾತನಾಡಿದರು. ವೀರಭದ್ರ ಯಾದವಾಡ ಕೃತಜ್ಞತೆ, ಅರುಣ ಯಲಗುದ್ರಿ ವಂದನಾರ್ಪಣೆ ಮಾಡಿದರು. ಪ್ರಿಯಂವದಾ ಅಣೆಪ್ಪನವರ, ಆಶಾ ಯಮಕನಮರಡಿ ನಿರೂಪಿಸಿದರು.