ಫ್ಲೋರಿಡಾ. ಆ 5 ಭಾನುವಾರ ಎರಡನೇ ಟಿ-20 ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಜಯ ಯಾವಾಗಲೂ ಮೊದಲ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದ್ದಾರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಬಳಿಕ 168 ರನ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ 15.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತು. ಅಂತಿಮವಾಗಿ ಮಳೆಯಿಂದಾಗಿ ಭಾರತ (ಡಿಎಲ್ಎಸ್ ಮಾದರಿ) 22 ರನ್ಗಳಿಂದ ಗೆಲುವು ಸಾಧಿಸಿತು. ಗೆಲುವು ಯಾವಾಗಲೂ ತಂಡಕ್ಕೆ ಪ್ರಥಮ ಆದ್ಯತೆಯಾಗಿರುತ್ತದೆ. ಇದು ತಂಡಕ್ಕೆ ಅಗತ್ಯವಾಗಿದೆ. ಈಗಾಗಲೇ ಚುಟುಕು ಸರಣಿ ಗೆದ್ದಿದ್ದು, ಕೊನೆಯ ಪಂದ್ಯದಲ್ಲಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗುವುದು. ಈಗಲೂ ಪಂದ್ಯವನ್ನೂ ಹಗುರವಾಗಿ ಪರಿಗಣಿಸಿಲ್ಲ" ಎಂದು ಹೇಳಿದರು. " ಆರಂಭದಲ್ಲಿ ವಿಕೆಟ್ ಬ್ಯಾಟಿಂಗ್ಗೆ ಸಹಕರಿಸುತ್ತಿತ್ತು. ದ್ವಿತಿಯಾರ್ಧದಲ್ಲಿ ಕೊಂಚ ನಿಧಾನಗತಿಯಾಗಿತ್ತು. ಬಳಿಕ, ಕೊನೆಯ ಹಂತದಲ್ಲಿ ಕೃನಾಲ್ ಪಾಂಡ್ಯ ಹಾಗೂ ಜಡೇಜಾ ಬ್ಯಾಟಿಂಗ್ ವೇಳೆ ಉತ್ತಮವಾಗಿತ್ತು" ಎಂದರು. ಇದೇ ವೇಳೆ ಯುವ ಆಟಗಾರರನ್ನು ಬೆನ್ನು ತಟ್ಟಿದ ಕೊಹ್ಲಿ, ನಾವು ಯಾವುದೇ ಜವಾಬ್ದಾರಿ ನೀಡಿದರೂ ವಾಷಿಂಗ್ಟನ್ ಸುಂದರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು(ಸುಂದರ್) ಪ್ರಚಂಡ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತೋರಿದ ಪ್ರದರ್ಶನ ಅದ್ಭುತವಾಗಿತ್ತು ಎಂದು ವಿರಾಟ್ ಕೊಹ್ಲಿ ಶ್ಲಾಘಿಸಿದರು.