ಮಹಿಳೆ ನಾಪತ್ತೆ; ಪತ್ತೆಗೆ ಮನವಿ

Woman goes missing; appeal to find her

ಬಳ್ಳಾರಿ 23: ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಮಾದೇವಿ ಎನ್ನುವ 36 ವರ್ಷದ ಮಹಿಳೆಯು 2024 ರ ಏ.25 ರಂದು ಕಾಣೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. 

ಚಹರೆ ಗುರುತು: 

ಅಂದಾಜು 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ ಹೊಂದಿರುತ್ತಾಳೆ. ಬಲಗೈನಲ್ಲಿ ಮುಕ್ಕಣ ಅಂತ ಅಚ್ಚೆ ಹಾಕಿಸಿಕೊಂಡಿರುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಬ್ಲೌಸ್ ಮತ್ತು ಕೆಂಪು ಬಣ್ಣದ ಸೀರೆ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ. 

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಅಥವಾ ಬಳ್ಳಾರಿ ಎಸ್‌.ಪಿ ಅವರ ಕಚೇರಿ ದೂ.08392-258300, ತೋರಣಗಲ್ಲು ಡಿವೈಎಸ್‌ಪಿ ದೂ.9480803010, ಸಂಡೂರು ವೃತ್ತ ಸಿ.ಪಿ.ಐ ದೂ.08395-260100, 9480803036, ತೋರಣಗಲ್ಲು ಪೊಲೀಸ್ ಠಾಣೆ ದೂ.08395-250100, ಮೊ.9480803062 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.