ಕಾರ್ಮಿಕರು ನಿಯಮಿತವಾಗಿ ದುಡಿದು ತಮ್ಮ ತುತ್ತಿನ ಚೀಲ ತುಂಬಿಕೊಳ್ಳಬೇಕು
ಕುಕನೂರ 02: ತಾಲೂಕಿನ ಮಂಡಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕೇನಕೊಪ್ಪ ಗ್ರಾಮದ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಕಾರ್ಮಿಕ ದಿನಾಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕ ತೋಟಗಾರಿಕೆ ಇಲಾಖೆ ಹಾಗೂ ಗ್ರಾಮಸ್ಥರು ಚಿಕೇನಕೊಪ್ಪ ಕನಕಪ್ಪ ಚಲುವಾದಿ ಮಾತನಾಡಿ ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವರಾದ ಬಾಬು ಜಗಜೀವನ್‌ರಾಮ್‌ರವರು ಕಾರ್ಮಿಕರ ಕಲ್ಯಾಣಕ್ಕಾಗಿ ಕನಿಷ್ಟ ವೇತನ, ಭವಿಷ್ಯ ನಿಧಿ, ರಾಜ್ಯ ವಿಮಾ ನಿಧಿಗಳನ್ನು ಘೋಷಿಸಿ ಕಾರ್ಮಿಕರು ಮತ್ತು ಮಾಲೀಕರ ಮದ್ಯೆ ಉತ್ತಮ ಬಾಂದವ್ಯವನ್ನು ಎರಿ್ಡಸುವಂತೆ ಮಾಡಿದರು. ಅಲ್ಲದೇ ಅಂತರಾಷ್ಟ್ರೀಯ ಏಷ್ಯಾ ಘಟಕದ ಅಧ್ಯಕ್ಷರಾಗಿ ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಮಿಕರ ಬಾಳಿನ ಬೆಳಕಾದರು.ತಾಲೂಕ ಪಂಚಾಯತ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ದೇಶದಲ್ಲಿಕಾರ್ಮಿಕರ ಶಕ್ತಿ ದೊಡ್ಡದು, ಅದರಲ್ಲೂ ನರೇಗಾ ಕೂಲಿಕಾರರು ನಿಯಮಿತವಾಗಿ ದುಡಿಯುವ ಮೂಲಕ ತಮ್ಮ ಕುಟುಂಬಕ್ಕೆ ಹಿರೋ ಆದಂತೆಯೇ ಸರಿ. ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ, ಮಹಿಳಾ ಭಾಗವಹಿಸುವಿಕೆಗೆ ಹೆಚ್ಚಿನ ಆಧ್ಯತೆ, ಹಿರಿಯ ನಾಗರೀಕರು, ವಿಶೇಷ ಚೇತನರಿಗೆ ಅರ್ದ ಕೆಲಸ ಪೂರ್ತಿ ಕೂಲಿ ,ಕೆಲಸ ಕೇಳಿದ 15 ದಿನದೊಳಗೆ ಕೂಲಿ ಕೆಲಸ ಹೀಗೆ ಹಲವಾರು ಹಕ್ಕುಗಳನ್ನು ನೀಡಿದೆ. ಇದನ್ನು ಬಳಸಿಕೊಂಡು ಕೂಲಿಕಾರ್ಮಿಕರು ಕನಿಷ್ಟ ಅಳತೆ ನಿರ್ವಹಿಸುವ ಮೂಲಕ ದಿನದ ಪೂರ್ತಿ ಕೂಲಿ ರೂ.370 ಪಡೆದುಕೊಂಡು ಹೊಗಲು ಕರೆ ನೀಡಿದರು.ನಂತರ ಎಲ್ಲ ಕೂಲಿಕಾರರು ಗೊದಿ ಹುಗ್ಗಿ ಅನ್ನ ಸಾಂಬಾರ ಸವಿದು ಮನೆಗೆ ತೆರಳಿದರು.ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದಪ್ಪ ಮ್ಯಾಗಳಮನಿ, ಹನಮಪ್ಪ ಮಂಗಳೂರ, ಗ್ರಾಮ ಪಂಚಾಯತಿ ಸಿಬ್ಬಂದಿ ನಿಂಗಪ್ಪ ಮಾಟ್ರಂಗಿ, ಕಾಯಕ ಬಧುಗಳಾದ ಶರಣಬಸು ಚಲುವಾದಿ, ಬಸವರಾಜಕಡೆಮನಿ, ಬಾನು ನದಾಫ್, ಮಲ್ಲಪ್ಪ ತಕ್ಲಕೋಟಿ, ಯಲ್ಲಪ್ಪ ಕಲ್ಕೂರ, ಯಲ್ಲಪ್ಪ ಚಲುವಾದಿ, ಚಂದ್ರು ಚಲುವಾದಿ, ಭಿಮಪ್ಪ ಚಲುವಾದಿ, ಕಾರ್ಮಿಕ ಮುಖಂಡರಾದರಾಮಪ್ಪತಕ್ಕಲಕೋಟಿ, ಭಿಮಪ್ಪ ಚಲುವಾದಿ , ಬುಡ್ಡಪ್ಪಕುರಿ, ಯಮನೂರ ಸಾಬ್ ನದಾಫ್, ಕಳಕಪ್ಪ ಸಿ ಚಲುವಾದಿ, ಶಿವಪುತ್ರ್ಪ ತುಮ್ಮರಗುದ್ದಿ ಹಾಗೂ ಕೂಲಿಕಾರರು ಭಾಗವಹಿಸಿದ್ದರು.