ವಿಶ್ವ ಕಂಡ ಶ್ರೇಷ್ಠ ಮೇದಾವಿ ಬಸವಣ್ಣನವರು: ಸಾಜಿದ್ ಮುಲ್ಲಾ

World's greatest Medavi Basavanna: Sajid Mulla

ಕಾರವಾರ 01: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಉದ್ಘಾಟಿಸಿದರು. 

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ವಿಶ್ವ ಕಂಡ ಶ್ರೇಷ್ಠ ಮೇದಾವಿ ಬಸವಣ್ಣನವರು ಪ್ರಪಂಚಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ರಾಯಾಭಾರಿಯಾಗದೇ, ಸಮಾಜ ಸುಧಾರಣೆ, ಧರ್ಮದಲ್ಲಿರುವ ಅನಾಚಾರಗಳು ಸೇರಿದಂತೆ ಸಮಾಜದಲ್ಲಿರುವ ಸಂಪ್ರದಾಯಗಳು, ಅನಿಷ್ಟ ಪದ್ದತಿಗಳ ವಿರುದ್ಧ ನಿರ್ಭಯವಾಗಿ ವಚನ ಸಾಹಿತ್ಯಗಳ ಮೂಲಕ ಪ್ರತಿಪಾದಿಸಿದರು ಎಂದು ಹೇಳಿದರು.  

ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು ಇಲ್ಲವಾದಲ್ಲಿ ದೇವರು ಮೆಚ್ಚುವುದಿಲ್ಲ ಆತ್ಮ ಶುದ್ದಿಯೇ ಮಹತ್ವದ್ದು ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. 

 ಬಸವಣ್ಣನವರ ವಚನಗಳನ್ನು ಮತ್ತು ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ತಮ್ಮ ವ್ಯಕ್ತಿತ್ವದ ಅಭಿವೃದ್ಧಿಗೆ ಹಾಗೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರಿಯಾಗಿಲಿದೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್‌ರವರು ತತ್ವಾದರ್ಶಗಳು ನಮ್ಮಗೆಲ್ಲ ದಾರೀದೀಪವಾಗಿವೆ ಎಂದರು. 

ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿ, ಬಸವಣ್ಣ ಅವರು 12 ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ದೊಡ್ಡ ಕ್ರಾಂತಿಯನ್ನು ಮಾಡಿದವರು. ಇವರು ಮನುಷ್ಯರಲ್ಲೇ ದೇವರು ಕಾಣಬೇಕು ಹಾಗೂ ಕಾಯಕದಲ್ಲೇ ಕೈಲಾಸ ಕಾಣಬೇಕೆಂದು ವಚನಗಳ ಮೂಲಕ ಬರೆದು, ನುಡಿದಂತೆ ನಡೆದ ಮಹಾನ್ ವ್ಯಕ್ತಿ ಬಸವಣ್ಣ ಅವರು ಇಂದಿಗೂ ಪ್ರಸ್ತುತ ಎಂದರು. 

ಶಿಕ್ಷಕ ಗಣೇಶ ಎನ್ ಬಿಷ್ಠಣ್ಣನವರು ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿ, ವಿಶ್ವ ಗುರು, ಜ್ಞಾನಜ್ಯೋತಿ ಬಸವಣ್ಣ ನಾಡಿಗೆ ಹೊಸ ನವ್ಯತೆಯನ್ನು ನೀಡಿ, ತಮ್ಮ ವಚನಗಳ ಮೂಲಕ ನಮ್ಮೆಲ್ಲರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕವಾಗಿ ಮೌಡ್ಯತೆಯನ್ನು ಕಿತ್ತು ಹಾಕಲು ಅಂಗದ ಮೇಲೆ ಇಷ್ಠಲಿಂಗವನಿಟ್ಟು ಪೂಜಿಸಿ ಎಂದು ತಿಳಿಸಿದವರು ಬಸವಣ್ಣನವರು ಎಂದರು. 

 ಹೆಣ್ಣು ಗಂಡು ಎಂಬ ಭೇದಭಾವವನ್ನು ಹೋಗಲಾಡಿಸಿ ಎಲ್ಲರೂ ಸಮಾನರು ಎಂದು ಸಾರಿದವರು. ಅಂತರಠ ಮತ್ತು ಬಹಿರಂಗ ಶುದ್ಧವಾಗಿರಬೇಕು ಎಂದು ತಿಳಿಸಿದ ಬಸವಣ್ಣನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ವಚನಗಳು ಮತ್ತು ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರಾಜೀವ್ ಮಠದ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಭಾಂಧವರು ಮತ್ತಿತರರು ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಲಾ ವೆಂ ನಾಯಕ ಸ್ವಾಗತಿಸಿದರು. ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಮಹಾದೇವ ರಾಣೆ ನಿರೂಪಿಸಿ, ವಂದಿಸಿದರು.