ವಿಶ್ವ ರೆಡ್ ಕ್ರಾಸ ದಿನಾಚರಣೆ

World Red Cross Day- Belgavi

ಬೆಳಗಾವಿ  09: ದಿ. 08ರಂದು ಎಫ್ .ಪಿ. ಎ. ಐ. ಬೆಳಗಾವಿ  ಶಾಖೆ ಇಂಡಿಯನ್  ರೆಡ್ ಕ್ರಾಸ್  ಸೊಸೈಟಿ ಬೆಳಗಾವಿ  ಶಾಖೆ ಮತ್ತು ಸರ್ಕಾರಿ  ಶಿಕ್ಷಕರ ಮಹಾವಿದ್ಯಾಲಯ (ಅಖಿಇ) ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಡ ಕ್ರಾಸ ದಿನವನ್ನು ಅವಲೋಕಿಸಲಾಯಿತು.   

ರೆಡ್ ಕ್ರಾಸ್  ಸಂಸ್ಥೆಯನ್ನು ಹುಟ್ಟು ಹಾಕಿದ  ಹೆನ್ರಿ ಡ್ಯುನ್ಯಾಟ್  ಎಂಬ ಮಹಾನ ವ್ಯಕ್ತಿಯ  ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.   

ಈ ಕಾರ್ಯಕ್ರಮದ ಕುರಿತು ಬಿ. ಡಿ. ಕಾರಡಗೆ, ಉಪನ್ಯಾಸಕರು ಹಾಗೂ ಕಾರ್ಯಕ್ರಮಾಧಿಕಾರಿಗಳು , ರೆಡ್ ಕ್ರಾಸ್   ಸಂಸ್ಥಯು ಬೆಳೆದು ಬಂದ ಹಾದಿ ಮತ್ತು ಈ  ಸಂಸ್ಥೆಯ ಗುರಿ ಉದ್ದೇಶಗಳನ್ನು  ವಿವರಿಸುತ್ತಾ  ತಮ್ಮ ಕಾಲೇಜಿನಲ್ಲಿಯೂ ರೆಡ್ ಕ್ರಾಸ್ ಘಟಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಸುವ  ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.   

ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ವಿ. ಸಿ. ಬಾವಡೆಕರ ಅಧ್ಯಕ್ಷರು ಎಫ್ .ಪಿ. ಎ. ಐ. ಬೆಳಗಾವಿ  ಶಾಖೆ  ಇವರು ಮಾತನಾಡುತ್ತಾ  ರೆಡ್ ಕ್ರಾಸ್  ಸಂಸ್ಥೆಯು  ಅನೇಕ ವರ್ಷಗಳಿಂದ ಯಾವುದೇ ಪ್ರತಿ ಫಲಾಕ್ಷೆ ಇಲ್ಲದೆ ಸಮಾಜಕ್ಕೆ, ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. ಯುವಕರು ರೆಡ್ ಕ್ರಾಸ್  ಸಂಸ್ಥಯಲ್ಲಿ ಸದಸ್ಯತ್ವ ಪಡೆದು ತಮ್ಮ ಓದಿನೊಂದಿಗೆ ಸಮಾಜ ಮುಖಿ  ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳ ಬೇಕೆಂದು ತಿಳಿಸಿದರು.   

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಆಗಮಿಸಿದ ಡಾ. ಸುರೇಶ ಬಿ. ಕುಲಕರ್ಣಿ (Member National Body and Chairman Belagavi Dist.) ಇವರು ಮಾತನಾಡುತ್ತಾ  ರೆಡ್ ಕ್ರಾಸ್  ಸಂಸ್ಧೆಯ  ಕಾರ್ಯ ವೈಖರಿಯ ಬಗ್ಗೆ ವಿವರಿಸುತ್ತಾ, 2025 ರ್ ಧ್ಯೇಯ ವಾಕ್ಯವಾದ ’ ಮಾನವತೆಯಿಂದ ಶಾಂತಿಯ ಕಡೆ ’ ಎಂಬ ಧ್ಯೇಯ ವಾಕ್ಯವನ್ನು ಹೇಳುತ್ತಾ  ರೆಡ್ ಕ್ರಾಸ್  ಸಂಸ್ಧೆಯ ಅನಾರೋಗ್ಯ ಪೀಡಿತರಿಗೆ ಮತ್ತು ಗಾಯಾಳುಗಳಿಗೆ ಜೀವನ  ಮರಣದ ಸ್ಥಿತಿಯಲ್ಲಿ  ಹೊರಡುತ್ತಿರುವವರಿಗೆ  ವರದಾನವಾಗಿದೆ ಎಂದು ಅಭಿಪ್ರಾಯ ಪಟ್ಟರು.  

ವಿಕಾಸ್ ಆರ್‌. ಕಲಘಟಗಿ , (Member State Managing Committee & Indian Red Cross Society & Member FPAI Belagavi Branch)  ಇವರು ಮಾತನಾಡುತ್ತಾ ರೆಡ್ ಕ್ರಾಸ್  ಸಂಸ್ಧೆಯ  ಗುರಿ ಉದ್ದೇಶಗಳ ಬಗ್ಗೆ ವಿವರಿಸಿದರು.   

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಬಿ. ಎಸ್‌. ಮಾಯಾಚಾರಿ- Reader Action Research Dept. (CTE)-ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ರೆಡ್ ಕ್ರಾಸ್  ಸಂಸ್ಥೆಯು  ಗಾಯಾಳುಗಳಿಗೆ ಮತ್ತು  ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸಂಜೀವನಿಯಾಗಿದೆ. ಈ ಬಗ್ಗೆ ಜಾಗೃತಿ ಪಡೆಯುವುದರೊಂದಿಗೆ ರೇಡ ಕ್ರಾಸ ಘಟಕದ ಸದಸ್ಯರು ಆದ  ಪ್ರಶಿಕ್ಷಣಾರ್ಥಿಗಳು ತಮ್ಮ ಮತ್ತು ತಮ್ಮ ವಿದ್ಯಾರ್ಥಿಗಳಲ್ಲಿ  ಈ ಕುರಿತು ಪ್ರೇರಣೆಯಾಗ ಬೇಕೆಂದು ತಿಳಿಸಿದರು.   

ಈ ಕಾರ್ಯಕ್ರಮದಲ್ಲಿ ಡಿ.ಬಿ. ನಾಯಕ-Reader In Service Dept. (CTE),ಎಫ್ .ಪಿ. ಎ. ಐ. ಬೆಳಗಾವಿ  ಶಾಖೆಯ ಸಿಬ್ಬಂದ್ದಿ , ಕಾಲೇಜಿನ ಉಪನ್ಯಾಸಕರು ಹಾಗೂ ರೆಡ್ ಕ್ರಾಸ್  ಸಂಸ್ಥೆಯ ಸದಸ್ಯರು, ಪ್ರಶಿಕ್ಷಣಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.  

ಡಾ. ವಿ.ಸಿ. ಬಾವ್ಡೇಕರ್, ಉದ್ಘಾಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.