ಬ್ಯಾಡಗಿ09: ಆಧ್ಯಾತ್ಮಿಕ ಜೀವನವಿಲ್ಲದೆ ವ್ಯಕ್ತಿ ಬದುಕಲು ಸಾಧ್ಯವಿಲ್ಲ ಅದರಲ್ಲಿ ಆರಾಧನೆ ಎಂಬುದು ದೇವರನ್ನು ತನ್ನಲ್ಲಿಯೇ ಕಾಣುವ ಒಂದು ಭಕ್ತಿ ಮಾರ್ಗವಾಗಿದೆ, ಆದರೆ ಇತ್ತೀಚೆಗೆ ಧಾಮರ್ಿಕ ಕಾರ್ಯಕ್ರಮದಲ್ಲಿ ಮಹಿಳೆಯರಷ್ಟೇ ಪಾಲ್ಗೊಳ್ಳುತ್ತಿದ್ದು ಯುವಕರು ಧಾಮರ್ಿಕ ಕಾರ್ಯಕ್ರಮಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀ ಖೇದ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ದಾನಮ್ಮದೇವಿ ಹಾಗೂ ಸೋಮೇಶ್ವರ ದೇವಾಲಯಗಳ ಆವರಣಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ದಾನಮ್ಮದೇವಿ ದೇವಸ್ಥಾನ ಸಮಿತಿಗಳು ಜಂಟಿಯಾಗಿ ಏರ್ಪಡಿಸಿದ್ದ ಸಾಮೂಹಿಕ 'ಸತ್ಯನಾರಾಯಣ' ಪೂಜಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ನೀವು ನಿಮ್ಮನ್ನು ನಂಬುವವರೆಗೂ ನೀವು ದೇವರನ್ನು ನಂಬಲು ಸಾಧ್ಯವಿಲ್ಲ, 'ದೇವರು' ಎಂಬ ಪದ ವ್ಯಕ್ತಿಯ ಜೀವನದ ಮಾರ್ಗದಲ್ಲಿ ಸಾಗುವಾಗ ಬೆಳಗುವ ದೀಪವಿದ್ದಂತೆ, ಇಂದ್ರಿಯಗಳ ಸಂತೋಷಕ್ಕೆ ಮನುಷ್ಯ ಹೇಗೆ ತನ್ನನ್ನು ತಾನು ತೊಡಗಿ ಸಿಕೊಳ್ಳುತ್ತಾನೋ, ಜೀವನದಲ್ಲಿಯೂ ಸಹ ದೇವರು ಯೋಜಿಸಿದ ರೀತಿಯಲ್ಲಿ ಹೋಗಬೇಕಾಗುತ್ತದೆ ಎಂದರು.
ಪ್ರತಿಯೊಂದು ಧರ್ಮದಲ್ಲಿಯೂ ತಮ್ಮದೇ ರೀತಿಯಲ್ಲಿ ಪೂಜೆ ಮಾಡುವ ಮಾರ್ಗಗಳಿವೆ, ಆದರೆ ಪ್ರತಿಫಲಕ್ಕಾಗಿ ಕಾಯುವ ಕೆಲಸದಲ್ಲಿ ಯಾರೊಬ್ಬರೂ ತೊಡಗಬಾರದು, ಜೀವನದಲ್ಲಿ ವೈಫಲ್ಯ ಮತ್ತು ಯಶಸ್ಸಿಗಿಂತ ಭಕ್ತಿ ಮಾರ್ಗವೆಂಬುದು ಬಹು ದೊಡ್ಡ ಕೆಲಸ, ಮನಸ್ಸಿನಲ್ಲಿ ಕಳಂಕವಿಲ್ಲದ, ಶುದ್ಧವಾದ ಏಕಾಗ್ರತೆಯಿಂದ ಪೂಕಾ ಕೈಂಕರ್ಯಗಳನ್ನು ಸಲ್ಲಿಸಿದಲ್ಲಿ ದೇವರನ್ನು ಒಲಿಸಿಕೊಳ್ಳಲು ಸಾಧ್ಯವೆಂದರು.
ಧರ್ಮಸ್ಥಳ ಸಾಂಸ್ಕೃತಿಕ ರಾಯಭಾರಿ: ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಇದೀಗ ಭಾರತದ ಸಾಂಸ್ಕೃತಿಕ ರಾಯಭಾರಿ ಎಂದರೂ ತಪ್ಪಾಗುವುದಿಲ್ಲ ಎಲ್ಲ ಧರ್ಮ ಜಾತಿ ಪಂಗಡಗಳ ಬಡವರ ಪಾಲಿಗೆ ಆಶಾಕಿರಣವಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಸಾಂಸ್ಕೃತಿಕ ಹಾಗೂ ಧಾಮರ್ಿಕ ಪ್ರಾತಿನಿಧ್ಯಗಳು ಇನ್ನುಂದೆ ಸಿಗಲಿದೆ ಎಂದರು.
ಶಾಶ್ವತ ಮೋಕ್ಷಕ್ಕಾಗಿ ಹುಡುಕಾಡಬೇಡಿ: ದುರಾಸೆಯ ಕೊಳಕು ರಾಶಿಯನ್ನೇ ಹೊತ್ತಕೊಂಡಿರುವ ಮನುಷ್ಯ ಹಣ ಮತ್ತು ಯಶಸ್ಸು ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾನೆ, ಜೀವನದ ಕೊನೆಯ ಘಳಿಗೆಯಲ್ಲಿ ಮೋಕ್ಷಕ್ಕಾಗಿ ಹುಡುಕಾಟ ನಡೆಸುವುದು ಹಾಸ್ಯಾಸ್ಪದ ಸಂಗತಿ, ನಿತ್ಯ ಪ್ರಾರ್ಥನೆಯಲ್ಲಿ ಏನನ್ನು ಕೇಳುತ್ತೀರೋ ಅದನ್ನು ನೀವು ಸ್ವೀಕರಿಸಿದ್ದೀರಿ ಎಂದು ನಂಬಿಕೆ ಇಡಬೇಕು ಎಂದರು. ಇದೇ ಸಂದರ್ಭದಲ್ಲಿ ದಾನಮ್ಮದೇವಿ ದೇವಸ್ಥಾನದ ಪ್ರಧಾನ ಅರ್ಚಕ ಅರುಣಶಾಸ್ತ್ರೀ ಹಿರೇಮಠ ಅವರಿಂದ 'ಸತ್ಯನಾರಾಯಣ' ಸಾಮೂಹಿಕ ಪೂಜಾ ಕಾರ್ಯಕ್ರಮ ನೆರವೇರಿತು
ದಾನಮ್ಮದೇವಿ ದೇವಸ್ಥಾನದ ಸಮಿತಿ ಅಧ್ಯಕ್ಷೆ ಮಹೇಶ್ವರಿ ಪಸಾರದ ಅಧ್ಯಕ್ಷತೆ ವಹಿಸಿದ್ದರು, ಡಾ.ಎಸ್.ಎನ್.ನಿಡಗುಂದಿ, ರಾಜು ಮೋರಿಗೇರಿ, ಚಂದ್ರಶೇಖರ ಅಂಗಡಿ, ಅನುರಾಧಾ ಮೋರಿಗೇರಿ, ಪುರಸಭೆ ಸದಸ್ಯೆ ಗಾಯತ್ರಿ ರಾಯ್ಕರ, ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಡಾ.ಪ್ರಕಾಶ ಹನುಮನಹಳ್ಳಿಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿದರ್ೇಶಕ ನಾರಾಯಣ ಗೊಂಡ, ಬ್ಯಾಡಗಿ ವಲಯದ ಮೇಲ್ವಿಚಾರಕಿ ಆರ್.ಶಕುಂತಲ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.