ಯರಗಟ್ಟಿ: 16ರಂದು ಮಹದಾಯಿ ನೀರಿಗಾಗಿ ಆಗ್ರಹಿಸಿ ಯರಗಟ್ಟಿ ಬಂದ್

ಲೋಕದರ್ಶನ ವರದಿ

ಯರಗಟ್ಟಿ 06: ಉತ್ತರ ಕನರ್ಾಟಕದ ಜನತೆಯ ಕುಡಿಯುವ ನೀರಿಗಾಗಿ ಸುಧೀರ್ಘ ಮಹಾದಾಯಿ ಕಳಸಾ-ಬಂಡುರಿ ಹೋರಾಟಕ್ಕೆ ಎಚ್ಚೆತ್ತುಕೊಳ್ಳದ ಸಕರ್ಾರಗಳ ವಿರುದ ್ದ ಮತ್ತೊಮ್ಮೆ  ಕನರ್ಾಟಕ ರಾಜ್ಯ  ರೈತ ಸಂಘ , ಹಸಿರು ಸೇನೆ, ರೈತ ಸೇನೆ, ಕರವೇ, ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇದೆ 16ರಂದು ಯರಗಟ್ಟಿ ಬಂದ ಕರೆಯಲಾಗುವುದು ಎಂದು ರಾಜ್ಯ  ರೈತ ಸಂಘ  ಕಾಯರ್ಾಧ್ಯಕ್ಷ  ಕೆ.ಜಿ.ಶಂಕರಸ್ವಾಮಿಮಠ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ನ್ಯಾಯಾಧೀಕರಣದಲ್ಲಿ  ಮಹಾದಾಯಿ ತೀಪರ್ು  ಕನರ್ಾಟಕದ ಪರವಾಗಿ ಬಂದರೂ ಸಹ ರಾಜ್ಯ ಸಕರ್ಾರ ಇಲ್ಲಿಯವರೇಗೆ ಯಾವ ಕಾಮಗಾರಿಯನ್ನು  ಕೈಗೆತ್ತಿಕೊಂಡಿಲ್ಲ.  ಗೋವಾ ಗಡಿ ಪ್ರದೇಶವನ್ನು ಬಿಟ್ಟು ನಮ್ಮ ರಾಜ್ಯದಲ್ಲಾದರೂ ಕಾಲುವೆ ನಿಮರ್ಾಣದ ಕಾಮಗಾರಿ ಪ್ರಾರಂಭ ಮಾಡಬಹುದಿತ್ತು  ಇದನ್ನು ಬಿಟ್ಟು  ರಾಜ್ಯ  ಸಕರ್ಾರ ಬರೀ ತಮ್ಮ ಕಿತ್ತಾಟದಲ್ಲಿಯೇ ಸಮಯ ದುಡುತ್ತಿದೆ ಎಂದು ಆರೋಪಿಸಿದರು. ರೈತ ಸಂಘದ ರಾಜ್ಯದ ಎಲ್ಲ ಹೋರಾಟಗಾರರು ಯರಗಟ್ಟಿ ಗ್ರಾಮದಲ್ಲಿಯೇ ಉಗ್ರವಾದ ಹೋರಾಟ ಹಮ್ಮಿಕೊಂಡಿದ್ದು, ಈ ಭಾಗದ ವಿವಿಧ ಏತ ನೀರಾವಾರಿ ಯೋಜನೆಗಳಿಗೆ ಆಗ್ರಹಿಸಿ ಮತ್ತು ಹೊಸ ತಾಲೂಕು ಘೋಷಣೆಯಾದ ಯರಗಟ್ಟಿಗೆ ಶೀಘ್ರವಾಗಿ ಎಲ್ಲ 48 ಕಚೇರಿಗಳನ್ನು ಪ್ರಾರಂಭಿಸುವಂತೆ ಇದೆ ಸಂದರ್ಭದಲ್ಲಿ ಸಕರ್ಾರವನ್ನು ಒತ್ತಾಯಿಸಲಾಗುವುದು ಎಂದರು.

ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾದ್ಯಕ್ಷರಾದ ಪರಶುರಾಮ ಮಂಟೂರ, ಶಿವನಗೌಡ ಗೌಡರ,  ಬಾಗಲಕೋಟ ಜಿಲ್ಲಾದ್ಯಕ್ಷ ಶ್ರೀಶೈಲ ನಾಯ್ಕರ,  ರೈತ ಸೇನೆ ಜಿಲ್ಲಾದ್ಯಕ್ಷ  ಸೋಮು ರೈನಾಪೂರ,  ಕರವೇ ಅಧ್ಯಕ್ಷ ಡಿ.ಕೆ. ರಫೀಕ್, ಜಿಲ್ಲಾ  ಉಪಾದ್ಯಕ್ಷ  ಮಾರುತಿ ಕರಿಶೆಟ್ಟಿ,  ಡಿ.ಎಂ. ನದಾಫ್,  ಬಿ.ಎ. ಬಿ.ಪಾಟೀಲ ಇತರರು ಇದ್ದರು.