ಯುವಸ್ಪಂದನದ ಅರಿವು ಕಾರ್ಯಕ್ರಮ

ಹಾವೇರಿ25 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಹಾಗೂ ಬೆಂಗಳೂರು ನಿಮ್ಹಾನ್ಸ ಸಹಯೋಗದಲ್ಲಿ 'ಯುವಸ್ಪಂದನದ ಅರಿವು ಕಾರ್ಯಕ್ರಮ'  ಸೋಮವಾರ ನಗರದ ನಗರದ ಶಿದ್ಧರಾಮೇಶ್ವರ ಪ್ರೌಡಶಾಲೆಯಲ್ಲಿ ಜರುಗಿತು.

ಪಠ್ಯ ಮತ್ತು ವೃತ್ತಿ ಮಾರ್ಗದರ್ಶನ  ನೀಡುವಲ್ಲಿ ಯುವ ಸ್ಪಂದನ ಸಹಾಯಕಾರಿ ಎಂದು  ಯುವ ಪರಿವರ್ತಕರಾದ ಮಂಜುಳಾ ಪಡಿಗೋದಿ  ಹೇಳಿದರು.

      ಇಂದಿನ ಯುವ ಜನತೆ ಎದುರಿಸುತ್ತಿರುವ ಗೊಂದಲ, ಮಾನಸಿಕ ಒತ್ತಡ ಮತ್ತು ಆತಂಕ ದೂರು ಮಾಡಿ ಅರಿವು ಮೂಡಿಸಿ ಮಾರ್ಗದರ್ಶನ ನೀಡಲು 'ಯುವ ಸ್ಪಂದನ' ಕಾರ್ಯಕ್ರಮ ಜಾರಿಗೆ ಬಂದಿದೆ.  ಸುರಕ್ಷತೆ, ಉತ್ತಮ ಜೀವನ ಶೈಲಿ, ವ್ಯಕ್ತಿತ್ವ ಬೆಳವಣಿಗೆ, ಭಾವನೆಗಳು ಮತ್ತು ಸಂಬಂಧಗಳು ಕುರಿತು ಮಾಹಿತಿ ಪಡೆಯಲು  'ಯುವ ಸ್ಪಂದನ' ಕೇಂದ್ರದ ದೂರವಾಣಿ ಸಂಖ್ಯೆಗೆ 08375-232080 ಕರೆಮಾಡಬಹುದು ಎಂದು ಯುವ 'ಸಮಾಲೋಚಕರಾದ ಕುಮಾರಿ ಸುಮಂಗಲಾ ಹಂಚಿನಮನಿ ಹೆಳಿದರು.

  ಕಾರ್ಯಕ್ರಮಲ್ಲಿ ಮುಖ್ಯೋಪಾಧ್ಯಾಯರಾದ ಎಮ್.ಎನ್.ಚಿನ್ಕಾಳಿ, ಶಾಲಾ ಸಿಬ್ಬಂದಿಗಳು ಹಾಗೂ  ವಿದ್ಯಾಥರ್ಿಗಳು ಹಾಜರಿದ್ದರು.