ಯುವಕರು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು: ದೊಡ್ಡಗೌಡರ

Youth should encourage the growth of the literary field: Dodda Gowda

ನೇಸರಗಿ 29: ಇಂದಿನ ಯುವಕರು ನಾಟಕ, ಜಾನಪದ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. 

ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಗ್ರಾಮದೇವಿ ಹಾಗೂ ಕಲ್ಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದಿಂದ ದೇಶನೂರ ಬನಶಂಕರಿ ನಾಟ್ಯ ಸಂಘದಿಂದ ನಡೆದ ಬಾಳು ಬೆಳಗಿದ ಮನೆ ನಾಟಕ ಉದ್ಘಾಟಿಸಿ ಮಾತನಾಡಿದರು.ಜಾತ್ರೆಗಳು ನಡೆಯುವದರಿಂದ ಸಮಾಜ ಮತ್ತು ಊರಿನ ಜನರು ಒಂದೇಡೆ ಸಂತೋಷದಿಂದ ಸೇರಲು ಸಾಧ್ಯವಾಗುತ್ತದೆ. ಜಾತ್ರೆಗಳಿಂದ ನಮ್ಮ ಸಂಸ್ಕೃತಿ ಮುನ್ನೆಡೆಗೆ ಸಹಕಾರಿಯಾಗುತ್ತದೆ. ಜಾತ್ರೆಯಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಂಡಿರುವದು ಸುತ್ಯಾರ್ಹ ಎಂದರು. ದತ್ತವಾಡ ಹೃಷಿಕೇಶಾನಂದ ಬಾಬಾ ಮಹಾರಾಜರು ಮಾತನಾಡಿ, ನಾಟಕಗಳಲ್ಲಿ ಸಮಾಜ ಸುಧಾರಣೆಗೆ  ಸಹಕಾರಿ ಗುಣಗಳಿವೆ. ಇಲ್ಲಿಯ ಉತ್ತಮ ಸಂದೇಶಗಳಿಂದ ನಮ್ಮ ವ್ಯಕ್ತಿತ್ವ ಸುಧಾರಣೆ ಮತ್ತು ಸಮಾಜ ಸುಧಾರಣೆಗೆ ಸಹಕಾರಿ ಎಂದರು.  

ಕೆವಿಕೆ ವಿಜ್ಞಾನಿ ಡಾ.ಮಂಜುನಾಥ ಚವರಡ್ಡಿ, ಎಸ್‌.ಎಂ.ವಾರದ, ಬಿಜೆಪಿ ಮುಖಂಡ ರವಿರಾಜ ಇನಾಂದಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಉದಯಗೌಡ ಪಾಟೀಲ, ಚ.ಕಿತ್ತೂರ ಬಿಜೆಪಿ ಮಂಡಳ ಅದ್ಯಕ್ಷ ಶೇಖರ ಕುಲಕರ್ಣಿ, ಗ್ರಾ.ಪಂ ಸದಸ್ಯ ಯಲ್ಲನಗೌಡ ದೊಡ್ಡಗೌಡರ, ಬಸನಗೌಡಾ ಸಿದ್ರಾಮನಿ, ದೇಶನೂರ ಪಿಕೆಪಿಎಸ್ ಅದ್ಯಕ್ಷ ಬಸವರಾಜ ಕೇದಾರಿ, ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ, ಡಾ.ಪ್ರಕಾಶ ಹಲ್ಯಾಳ, ಸೋಮಪ್ಪ ದೇಯಣ್ಣವರ, ಮತ್ತಿಕೊಪ್ಪ ಪಿಕೆಪಿಎಸ್ ಉಪಾಧ್ಯಕ್ಷ ಅಡಿವೆಪ್ಪ ಹೊಸಮನಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸೋಮಪ್ಪ ತುಕ್ಕುನವರ, ಶಿವಯ್ಯಾ ಪೂಜೇರಿ, ಬಸಪ್ಪ ಮುಚ್ಚಂಡಿ, ಅಶೋಕ ಲೆಂಕೆನ್ನವರ, ಎಸ್‌.ಎಂ.ಪಾಟೀಲ, ಈರಣ್ಣ ವಾರದ, ಶಶಿಕಾಂತ ಪಾಟೀಲ, ಸಿ.ವಾಯ್‌. ಮೆಣಸಿನಕಾಯಿ, ಗಂಗಾಧರ ಗುಜನಟ್ಟಿ, ನಾಗರಾಜ ಮುಚ್ಚಂಡಿ, ಬಸಪ್ಪ ಶಿಂತ್ರಿ, ಇನ್ನಿತರರು ಇದ್ದರು. ಮತ್ತಿಕೊಪ್ಪ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಮೊಹರೆ ಅಧ್ಯಕ್ಷತೆ ವಹಿಸಿದ್ದರು.