ಹೂವಿನಹಡಗಲಿ: ವಿಜೃಂಭಣೆಯ ಕುರುವತ್ತಿ ಬಸವೇಶ್ವರ ರಥೋತ್ಸವ

ಲೋಕದರ್ಶನ ವರದಿ

ಹೂವಿನಹಡಗಲಿ 23: ತಾಲೂಕಿನ ಕುರುವತ್ತಿ  ಭಾಗದಲ್ಲಿಯೇ ಅತ್ಯಂತ ಮಹತ್ವದ ಹಾಗೂ ಬೃಹತ್ ಜಾತ್ರ ಮಹೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ  ಕುರುವತ್ತಿ ಗ್ರಾಮದ ಆರಾಧ್ಯ ದೈವ ಶ್ರೀಬಸವೇಶ್ವರ ಹಾಗೂ ಶ್ರೀಮಲ್ಲಿಕಾರ್ಜುನ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ 5-30ಕ್ಕೆ ಸಂಭ್ರಮದಿಂದ ಜರುಗಿತು.

ಹಿಂದು ಧಾಮರ್ಿಕ ದತ್ತಿ ಇಲಾಖೆ ಒಡೆತನಕ್ಕೆ ದೇವಸ್ಥಾನ ಸೇರಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತಾಧಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಶ್ರಮಸಿದೆ. ದಾವಣಗೆರೆ, ಬಳ್ಳಾರಿ, ಹಾವೇರಿ, ರಾಣೆಬೆನ್ನೂರು  ಜಿಲ್ಲೆಗಳಿಂದ ಭಕ್ತರು ಕುರುವತ್ತಿಗೆ ಬಂದು ಸ್ವಾಮಿಯ ದರ್ಶನ ಪಡೆದರು.ಪಲ್ಲಕ್ಕಿ ಉತ್ಸವದಲ್ಲಿ ಸ್ಥಳಕ್ಕೆ ಬಂದು ಮೂರು ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಭಕ್ತರು ಬಾಳೆಹಣ್ಣು ಅಪರ್ಿಸುವ ಮೂಲಕ ತೇರು ಎಳೆದು ಭಕ್ತಿ ಮೆರೆದರು.

ಕುರುವತ್ತಿಯಲ್ಲಿ ಇಸ್ಪೀಟ್ ಅಡ್ಡೆಗಳದ್ದೇ ಒಂದು ಪ್ರತ್ಯೇಕ ಜಾತ್ರೆಯಾಗಿತ್ತು ಕಳೆದ 5-6ವರ್ಷಗಳಿಂದ ಬಳ್ಳಾರಿ ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜೂಜಾಟಕ್ಕೆ ಕಡಿವಾಣ ಹಾಕಿದ್ದಾರೆ.ಗ್ರಾಮದ ತುಂಗಭದ್ರಾ ನದಿ ಪಕ್ಕದಲ್ಲೇ ಅಕ್ರಮ ಮರಳು ಸಾಗಣೆಯಿಂದ ನದಿಯಲ್ಲಿ ಕಂದಕಗಳು ಇದ್ದು ಈಗಾಗಲೇ ಸಾವು-ನೋವು ಸಂಭವಿಸಿವೆ. ನದಿಯಲ್ಲಿ ಮೀನುಗಾರರ ತೆಪ್ಪಗಳ ಸಂಚಾರ ನಿಷೇಧಿಸಿದ್ದು, ಅಪಘಾತಗಳನ್ನು ತಡೆಗಟ್ಟಲು ಪ್ರತ್ಯೇಕ ಯಾಂತ್ರೀಕೃತ ದೋಣಿಗಳು, ಸಿಬ್ಬಂದಿ ನಿಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಲೋಕೇಶ,ದೇವಸ್ಥಾನದ ಕಾ.ನಿ.ಅಧಿಕಾರಿ ಪ್ರಕಾಶ ರಾವ್, ತಾ.ಪಂ.ಇಓ ಯು.ಎಚ್.ಸೋಮಶೇಖರ, ತಹಶೀಲ್ದಾರ ರಾಘವೇಂದ್ರರಾವ್, ಜಾತ್ರೆಗೆ ಅಂದಾಜು 2ರಿಂದ 3 ಲಕ್ಷಕ್ಕೂ ಹೆಚ್ಚು ಜನ ಭಕ್ತರು ಭಾಗವಹಿಸಿದ್ದರು. 

ಸಂಚಾರ ಅಸ್ತವ್ಯಸ್ತ: 

ಭಾನುವಾರ ಸಂಜೆ ಕುರುವತ್ತಿ ಗ್ರಾಮದಲ್ಲಿ  ಎಲ್ಲಿ ನೋಡಿದರಲ್ಲಿ ಜನಸಾಗರವೇ ಹರಿದು ಬರುತ್ತಿತ್ತು.ರಥೋತ್ಸವಕ್ಕೆ  ಆರಂಭವಾಗುತ್ತಿದ್ದಂತೆ ಕೆಲ ಕಾಲ ಸಂಚಾರ ಅಸ್ತವ್ಯಸವಾಗಿತ್ತ್ತು