ಇಂದು ಸರಿಗಮ ಖ್ಯಾತಿಯ ಹನುಮಂತನಿಂದ ಮತಗಾನ ಕಾರ್ಯಕ್ರಮ

ಹಾವೇರಿ17: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾರರ ಜಾಗೃತಿಗಾಗಿ ಇಂದು ಸಂಜೆ 6 ಗಂಟೆಗೆ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ(ಮುನ್ಸಿಪಲ್ ಹೈಸ್ಕೂಲ್ ಮೈದಾನ) ಆವರಣದಲ್ಲಿ ಸರಿಗಮ ಖ್ಯಾತಿಯ ಹಾಡುಗಾರ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಹನುಮಂತಪ್ಪ ಲಮಾಣಿ ಅವರಿಂದ ಮತದಾನ ಜಾಗೃತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಲಾದ ಮತಗಾನ ಕಾರ್ಯಕ್ರಮದಲ್ಲಿ ಗಾಯಕ ಹನುಮಂತಪ್ಪ ಲಮಾಣಿ ಅವರೊಂದಿಗೆ ವಿವಿಧ ಗಾಯಕರು ಭಾಗವಹಿಸಲಿದ್ದಾರೆ. ಮತಗಾನ ಕಾರ್ಯಕ್ರಮಕ್ಕೆ ಮುನ್ನ ಗಾಂಧಿ ವೃತ್ತದಿಂದ ಎತ್ತಿನ ಬಂಡಿಯಲ್ಲಿ ಜಿಲ್ಲಾ ಸ್ವೀಪ್ ರಾಯಭಾರಿ ಗಾಯಕ ಹನುಮಂತಪ್ಪ ಲಮಾಣಿ ಸವಾರಿ ಮಾಡಿ ಮತಜಾಗೃತಿ ಮೂಡಿಸಲಿದ್ದಾರೆ.  ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಕೋರಿದೆ.